ಭಾನುವಾರ, ಮೇ 16, 2021
22 °C

ನಕ್ಸಲರನ್ನು ಮಾತುಕತೆಗೆ ಆಹ್ವಾನಿಸಿದ ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು (ಐಎಎನ್‌ಎಸ್): ರಾಜ್ಯದಲ್ಲಿ ಸಕ್ರಿಯರಾಗಿರುವ ನಕ್ಸಲರನ್ನು ಮಾತುಕತೆಗೆ ಬರುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಆಹ್ವಾನ ನೀಡಿದ್ದಾರೆ.ಅವರು ಇಲ್ಲಿನ ತಮ್ಮ ನಿವಾಸದಲ್ಲಿ ಸ್ಥಳಿಯ ಪತ್ರಿಕೆಗಳ ಸಂಪಾದಕರು ಹಾಗೂ ಸುದ್ದಿಸಂಸ್ಥೆಗಳ ಬ್ಯೂರೋ ಮುಖ್ಯಸ್ಥರೊಂದಿಗೆ ಮಾತನಾಡುತ್ತಿದ್ದಾಗ ಈ ವಿಷಯ ತಿಳಿಸಿದರು.ನಕ್ಸಲರು ತುಳಿದಿರುವ ಹಾದಿ ಕಾನೂನಿಗೆ ವಿರುದ್ಧ. ಹಾಗಾಗಿ ಅವರು ಯಾವುದೇ ವಿಷಯಕ್ಕೆ ಸಂಬಂಧಪಟ್ಟಂತೆ ಮಾತುಕತೆಗೆ ಬರುವುದಾದರೆ ನಾವು ಅದನ್ನು ಸ್ವಾಗತಿಸುತ್ತೇವೆ. ಹಿಂಸಾ ಮಾರ್ಗ ಬಿಟ್ಟು ಮಾತುಕತೆ ಮೂಲಕ ಸಮಸ್ಯೆ ಪರಿಹಾರಕ್ಕೆ ನಕ್ಸಲರು ಯತ್ನಿಸಬೇಕೆಂದು ತಿಳಿಸಿದರು.ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನಕ್ಸಲ್ ಸಮಸ್ಯೆ ಅಷ್ಟಿಲ್ಲ. ಬರೇ ಮೂರು-ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ನಕ್ಸಲ್ ಚಟುವಟಿಕೆ ನಡೆಯುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.ಆರ್ಥಿಕವಾಗಿ ಹಿಂದುಳಿದಿರುವವರಿಗೆ ಮುಖ್ಯವಾಗಿ ಬುಡಕಟ್ಟು ಜನಾಂಗದವರಿಗೆ ಸರ್ಕಾರ ಸರ್ವರೀತಿಯಲ್ಲೂ ನೆರವು ನೀಡಲು ಸಿದ್ದವಿದೆ. ನಕ್ಸಲರೂ ಕೂಡ ತಮ್ಮ ಆಯುಧಗಳನ್ನು ಒಪ್ಪಿಸಿ ಶರಣಾಗತರಾದರೆ ಅವರಿಗೂ ಸೂಕ್ತ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.ಮಾವೋವಾದಿಗಳ ಚಟುವಟಿಕೆ ಚಿಂತೆಯ ವಿಷಯ ಎಂಬುದನ್ನು ಒಪ್ಪಿಕೊಂಡ ಅವರು ಆದರೆ ನಕ್ಸಲ್ ಪೀಡಿತ ಜಿಲ್ಲೆಗಳನ್ನು ಸಂತ್ರಸ್ಥ ಪ್ರದೇಶಗಳೆಂದು ಘೋಷಿಸಬೇಕೆಂದು ಕೇಂದ್ರ ಸರ್ಕಾರವನ್ನು ಕೇಳಲು ತಾವು ತಯಾರಿಲ್ಲ. ರಾಜ್ಯ ಸರ್ಕಾರದ ನಕ್ಸಲ್ ನಿಗ್ರಹ ಪಡೆ ಸಮಸ್ಯೆ ಬಗೆಹರಿಸಲು ಸಶಕ್ತವಾಗಿದೆ ಎಂದು ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.