ಅಪ್ಪಟ ಸ್ಟ್ರೀಟ್ ಬೈಕ್ ಓಡಿಸುವ ಮನಸ್ಸು ಹಾಗೂ ವಯಸ್ಸು ನಿಮ್ಮದಾಗಿದ್ದಲ್ಲಿ ಯುರೋಪ್ನ ಕೆಟಿಎಂ `ಡ್ಯೂಕ್ 200~ ಈಗ ಸಿದ್ಧವಾಗಿದೆ. ಗೂಳಿಯಂಥ ನೋಟ, ಎತ್ತರದಲ್ಲಿರುವ ಆಸನ, ಅಗಲವಾದ ಟ್ಯಾಂಕ್, ರಸ್ತೆಯನ್ನು ಕಚ್ಚಿ ಹಿಡಿಯುವ ಟೈರ್, ಬೆರಳಿನಷ್ಟೇ ಉದ್ದವಾದ ಸೈಲೆನ್ಸರ್ ಎಲ್ಲಕ್ಕೂ ಮಿಗಿಲಾಗಿ ಅದರ ಹೂಂಕರಿಸುವ ಶಬ್ದ ಹಾಗೂ ಶರವೇಗದ ಓಟ... ಇವೆಲ್ಲವನ್ನೂ ಸವಿಯಬೇಕೆಂದಲ್ಲಿ ಯುರೋಪ್ನ ಎರಡನೇ ಅತಿ ದೊಡ್ಡ ಬೈಕ್ ತಯಾರಿಕಾ ಕಂಪೆನಿ ಕೆಟಿಎಂ ಅಭಿವೃದ್ಧಿಪಡಿಸಿರುವ ಡ್ಯೂಕ್ 200 ಅನ್ನು ಒಮ್ಮೆಯಾದರೂ ಓಡಿಸಲೇಬೇಕು.

ಭಾರತಕ್ಕೆ ಇದೇ ಮೊದಲ ಬಾರಿಗೆ ಪದಾರ್ಪಣೆ ಮಾಡುತ್ತಿರುವ ಕೆಟಿಎಂ, ಬೆಂಗಳೂರಿನ ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಮಳಿಗೆಯನ್ನು ಆರಂಭಿಸಿದೆ. ಭಾರತದಲ್ಲಿ ತನ್ನ ವ್ಯಾಪಾರ ವಹಿವಾಟಿಗೆ ಬಜಾಜ್ ಸಂಸ್ಥೆಯ ಸಹಾಯವನ್ನು ಕೆಟಿಎಂ ಪಡೆದಿದೆ. ಹೀಗಾಗಿ ಬಜಾಜ್ ಪ್ರೊಬೈಕಿಂಗ್ ಅಡಿಯಲ್ಲಿ ಕೆಟಿಎಂ ಬೈಕ್ಗಳಿಗಾಗಿ ವಿಶೇಷ ಮಳಿಗೆಯನ್ನು ಸ್ಥಾಪಿಸಲಾಗಿದೆ. ಇದರ ಉದ್ಘಾಟನೆ ಹಾಗೂ ಮೊದಲ 15 ಬೈಕ್ಗಳ ಹಸ್ತಾಂತರ ಕಾರ್ಯಕ್ರಮವನ್ನು ಇತ್ತೀಚೆಗೆ ಇಂದಿರಾನಗರದ ಮಳಿಗೆಯಲ್ಲಿ ಆಯೋಜಿಸಲಾಗಿತ್ತು.

ಕೆಟಿಂಎನ ಸಾಂಪ್ರದಾಯಿಕ ಹಾಗೂ ಅತ್ಯಂತ ಜನಪ್ರಿಯ ಬಣ್ಣವಾದ ಕೇಸರಿ ಹಾಗೂ ಕಪ್ಪು ಮಿಶ್ರಿತ ಬೈಕ್ಗಳು ಮಳಿಗೆಯ ಎದುರು ಸಾಲಾಗಿ ನಿಂತಿದ್ದವು. ಮಿರಮಿರನೆ ಮಿಂಚುವಂತೆ ಅವುಗಳಿಗೆ ಪಾಲೀಶ್ ಮಾಡಲಾಗಿತ್ತು. ಕೆಲವು ತಿಂಗಳ ಹಿಂದೆ ಮುಂಗಡ ಬುಕ್ಕಿಂಗ್ ಮಾಡಿದ್ದ ಬೈಕ್ನ ಮಾಲೀಕರು ತಮ್ಮ ಬೈಕ್ ಪಡೆಯುವ ಉತ್ಸಾಹದಲ್ಲಿದ್ದರು. ಇದೇ ಮೊದಲ ಬಾರಿ ಭಾರತೀಯ ರಸ್ತೆಯ ಮೇಲೆ ಚಲಿಸುತ್ತಿರುವ ಬೈಕ್ ಕುರಿತು ವಿವರಣೆ ಪಡೆಯಲು ಮಾಧ್ಯಮ ಪ್ರತಿನಿಧಿಗಳೂ ಉತ್ಸುಕರಾಗಿದ್ದರು. ಹಾಗೆಯೇ ಮಳಿಗೆಯ ಮುಂದೆ ಹಾದು ಹೋಗುವವರು ಹೊಸ ಬಗೆಯ ಈ ಬೈಕುಗಳನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕೆಟಿಎಂನ ಈ ಡ್ಯೂಕ್ ಸರಣಿಯ 990 ಹಾಗೂ 690ರ ಸುಧಾರಿತ ಬೈಕ್ ಡ್ಯೂಕ್ 200. ಏಕ ಸಿಲೆಂಡರ್ ಹೊಂದಿರುವ 200 ಸಿಸಿ ಬೈಕ್ 25 ಬ್ರೇಕ್ ಅಶ್ವ ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಲಿಕ್ವಿಡ್ ಕೂಲ್ಡ್ ಎಂಜಿನ್ ಆಗಿರುವ ಈ ಬೈಕ್19 ಎನ್ಎಂ ಟಾರ್ಕ್ ಉತ್ಪತ್ತಿ ಮಾಡುವ ಸಾಮರ್ಥ್ಯ ಹೊಂದಿದೆ. 0ಯಿಂದ 60ಕ್ಕೆ ತಲುಪಲು ತೆಗೆದುಕೊಳ್ಳುವ ಸಮಯ ಕೇವಲ 3.5 ಸೆಕೆಂಡ್. ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿರುವ ಈ ಬೈಕ್ಗಳ ಹಲವು ವಿಶೇಷಗಳಲ್ಲಿ ಮೇಲಿಂದ ಕೆಳಗೆ ಕುಸಿದೇಳುವ ಫೋರ್ಕ್ಸ್, ಅಲುಮಿನಿಯಂ ಸ್ವಂಗ್ ಆರ್ಮ್, ಪುಟ್ಟದಾದ ಸೈಲೆನ್ಸರ್ ಹಾಗೂ ಬಹುಬಗೆಯ ಕಾರ್ಯ ನಿರ್ವಹಿಸುವ ಕಾಕ್ಪಿಟ್ (ಸ್ಪೀಡೊ ಮೀಟರ್, ಇಂಧನ ಕ್ಷಮತೆ, ಇನ್ನೆಷ್ಟು ಕಿ.ಮೀ. ನಂತರ ಪೆಟ್ರೋಲ್ ಖಾಲಿಯಾಗಲಿದೆ ಇತ್ಯಾದಿ ಮಾಹಿತಿ ನೀಡುವ ಸಾಧನ) ಇದೆ.

`ಕಳೆದ ನಲವತ್ತು ವರ್ಷಗಳಿಂದ ರೇಸಿಂಗ್ ಬೈಕ್ ಸಿದ್ಧಪಡಿಸುತ್ತಿರುವ ಕೆಟಿಎಂ ರೇಸಿಂಗ್ ಚಟುವಟಿಕೆಗಳಲ್ಲಿ ಸದಾ ಮುಂದು. ಹೀಗಾಗಿ ವಿಶ್ವಶ್ರೇಷ್ಠ ಬೈಕ್ ಪ್ರದರ್ಶನಕ್ಕೆ ತಕ್ಕುದಾದ ಶೋರೂಂ ಸ್ಥಾಪಿಸಲಾಗಿದೆ. ಹಾಗೂ ಬೈಕ್ನ ಸರ್ವೀಸ್ಗಾಗಿ ದೊಮ್ಮಲೂರು ಬಳಿ ಪ್ರಾರಂಭಿಸಲಾಗಿದೆ~ ಎಂದು ಕಿವ್ರಾಜ್ ಮೋಟಾರ್ಸ್ನ ಕಾರ್ಯ ನಿರ್ವಹಣಾಧಿಕಾರಿ ಪುಷ್ಪ್ಚಾಂದ್ ಚೋರ್ಡಿಯಾ ಹೇಳಿದರು.

ಭಾರತದಲ್ಲಿ ಸಿದ್ಧವಾಗುತ್ತಿರುವ ಡ್ಯೂಕ್ 200, ಯುರೋಪ್ ಸೇರಿದಂತೆ ಏಷ್ಯಾದ ಇತರ ರಾಷ್ಟ್ರಗಳಿಗೆ ರಫ್ತಾಗುತ್ತಿದೆ. ಬೆಂಗಳೂರು ಸೇರಿದಂತೆ ಮಂಗಳೂರಿನಲ್ಲೂ ಡ್ಯೂಕ್ 200 ಲಭ್ಯ. ಈ ಬೈಕ್ ಖರೀದಿಗೆ ಮುಂದಾದರೆ 90ದಿನಗಳ ಮುಂಚಿತವಾಗಿ ಮುಂಗಡ ಬುಕ್ಕಿಂಗ್ ಖಡ್ಡಾಯ. ಬೆಂಗಳೂರಿನಲ್ಲಿ ಡ್ಯೂಕ್ 200 ಬೈಕ್ ಬೆಲೆ 1,19,021 ರೂಪಾಯಿ (ತೆರಿಗೆ ಪ್ರತ್ಯೇಕ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.