ಸೋಮವಾರ, ಜೂನ್ 14, 2021
21 °C

ನಗರದಲ್ಲಿ ಇಂದು ಮಾರ್ಚ್ 24, ಶನಿವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾರ್ಚ್ 24, ಶನಿವಾರ

ಸಮನ್ವಯ ವೇದಿಕೆ: ಎಚ್.ಎನ್.ಕಲಾಕ್ಷೇತ್ರ ಸಭಾಂಗಣ, ಜಯನಗರ ನ್ಯಾಷನಲ್ ಕಾಲೇಜು, `ವಸಂತ ಸಂಭ್ರಮ~ ಕಾರ್ಯಕ್ರಮ. ಹಾಸ್ಯ ಸಾಹಿತಿಗಳಾದ ಬೇಲೂರು ರಾಮಮೂರ್ತಿ ಹಾಗೂ ವೈ. ವಿ. ಗುಂಡೂರಾವ್ ಮತ್ತು ತಂಡದಿಂದ `ಬೇವು-ಬೆಲ್ಲ-ಹಾಸ್ಯಹೂರಣ~, ವೇದಿಕೆ ಸದಸ್ಯರಿಂದ `ಕಸ್ತೂರಿ ಘಮಲು~ (ಕಿರು ಪ್ರಹಸನ) ಮತ್ತು ವೈ.ಕೆ. ಮುದ್ದುಕೃಷ್ಣ, ಅರ್ಚನಾ ಉಡುಪ, ಕೆ.ಎಸ್.ಸುರೇಖ ಹಾಗೂ ಉದಯ ಅಂಕೋಲ ಅವರಿಂದ `ಗೀತ ಸಂಭ್ರಮ~. ಸಂಜೆ 6.ಕರ್ನಾಟಕ ಚಲನಚಿತ್ರ ಅಕಾಡೆಮಿ: ಪ್ರಿಯದರ್ಶಿನಿ ಚಿತ್ರಮಂದಿರ, ಬಾದಾಮಿ ಹೌಸ್, `ಬೆಳ್ಳಿಗೆಜ್ಜೆ~ ಮುಖಾಮುಖಿ ಕಾರ್ಯಕ್ರಮದಲ್ಲಿ ಕಲಾವಿದೆ ಬಿ. ಜಯಾ. ಸಂಜೆ 4.30.

ರಂಗಭೂಮಿ ಮತ್ತು ಚಲನಚಿತ್ರ ಎರಡೂ ಕ್ಷೇತ್ರಗಳಲ್ಲಿ ವ್ಯಾಪಕ ಸೇವೆ ಸಲ್ಲಿಸಿರುವ ಬಿ. ಜಯಾ ಅವರು ಜನಿಸಿದ್ದು 1944ರಲ್ಲಿ. `ಭಕ್ತ ಪ್ರಹ್ಲಾದ~ ಚಿತ್ರದ ಮೂಲಕ ಬಾಲನಟಿಯಾಗಿ ಬೆಳ್ಳಿತೆರೆ ಪ್ರವೇಶ ಮಾಡಿದ ಇವರು `ಕೈವಾರ ಮಹಾತ್ಮೆ~ ಚಿತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದರು. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರ ನಿರ್ವಹಿಸಿದ್ದು,ಪ್ರತಿಜ್ಞೆ, ಬೆಟ್ಟದ ಹುಲಿ, ನ್ಯಾಯವೇ ದೇವರು ಚಿತ್ರಗಳಲ್ಲಿನ ಅಭಿನಯಕ್ಕೆ ಚಿತ್ರ ಪ್ರೇಮಿಗಳ ಸಂಘದ `ಉತ್ತಮ ಹಾಸ್ಯ ನಟಿ~ ಗೌರವಕ್ಕೆ ಪಾತ್ರರಾಗಿದ್ದಾರೆ. 2004-05ರ ಸಾಲಿನಲ್ಲಿ `ಗೌಡ್ರು~ ಚಿತ್ರಕ್ಕೆ ರಾಜ್ಯ ಸರ್ಕಾರದ ಶ್ರೇಷ್ಠ ಪೋಷಕ ನಟಿ ಗೌರವವೂ ಅವರಿಗೆ ಸಂದಿದೆ.ಎಂ.ಎ.ನರಸಿಂಹಾಚಾರ್ ಮ್ಯೂಸಿಕ್ ಫೌಂಡೇಶನ್: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ಪ್ರಿಯಾಂಕಾ ಸಿ.ಪ್ರಕಾಶ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ.ಅದಿತಿ ಕೃಷ್ಣಪ್ರಕಾಶ್ (ವಯಲಿನ್), ಫಣೀಂದ್ರ ಭಾಸ್ಕರ (ಮೃದಂಗ), ಶರಚ್ಚಂದ್ರ (ಘಟಂ). ಸಂಜೆ: 5.45ಬೆಂಗಳೂರು ಇನಿಶಿಯೇಟಿವ್ ಫಾರ್ ರಿಲಿಜಿಯಸ ಡೈಲಾಗ್(ಬರ್ಡ್): ರೋಟರಿ ಹೌಸ್ ಆಫ್ ಫ್ರೆಂಡ್‌ಶಿಪ್, ಲ್ಯಾವೆಲ್ಲೆ ರಸ್ತೆ, ಡಾ.ಸ್ಟ್ಯಾನ್ಲಿ ಸಮರ್ಥ ಸ್ಮರಣೆಯಲ್ಲಿ ದತ್ತಿ ಉಪನ್ಯಾಸ, ಉಪನ್ಯಾಸ ನೀಡುವವರು: ಡಾ.ಡೇವಿಡ್ ಫ್ರಾಲಿ, ಸಂಜೆ 4.30

ಹೆಚ್ಚಿನ ಮಾಹಿತಿಗೆ 9731182308

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.