ನಗರದಲ್ಲಿ ಧಾರಾಕಾರ ಮಳೆ

ಬುಧವಾರ, ಮೇ 22, 2019
32 °C

ನಗರದಲ್ಲಿ ಧಾರಾಕಾರ ಮಳೆ

Published:
Updated:

ಬೆಂಗಳೂರು: ನಗರದಲ್ಲಿ ಸೋಮವಾರ ರಾತ್ರಿ ಧಾರಾಕಾರ ಮಳೆ ಸುರಿದ ಪರಿಣಾಮ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ಚರಂಡಿ ನೀರು ನುಗ್ಗಿ ಹಾಗೂ ರಸ್ತೆ ಬದಿಯ ಮರಗಳು ಉರುಳಿ ಬಿದ್ದು ಜನರು ತೊಂದರೆ ಅನುಭವಿಸುವಂತಾಯಿತು.ದೊಮ್ಮಲೂರು ವರ್ತುಲ ರಸ್ತೆ ಸಮೀಪದ ಅಮರಜ್ಯೋತಿ ನಗರದಲ್ಲಿ ಹತ್ತಕ್ಕೂ ಹೆಚ್ಚು ಮನೆಗಳಿಗೆ ಚರಂಡಿ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಸರ್ಜಾಪುರ ಮುಖ್ಯರಸ್ತೆಯ ರೈಂಬೊ ಡ್ರೈವ್ ಅಪಾರ್ಟ್‌ಮೆಂಟ್‌ನ ವಾಹನ ನಿಲುಗಡೆ ಸ್ಥಳಕ್ಕೆ ಚರಂಡಿ ನೀರು ನುಗ್ಗಿದ ಪರಿಣಾಮ ವಾಹನಗಳು ನೀರಿನಲ್ಲಿ ಮುಳುಗಿವೆ.ತ್ಯಾಗರಾಜನಗರ, ಬಸವನಗುಡಿ, ಬನಶಂಕರಿಯ ಗುರುರಾಜ ಲೇಔಟ್, ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಸಮೀಪ, ಬಿಡಿಎ ಕಚೇರಿ ಬಳಿ, ಬಿಟಿಎಂ ಲೇಔಟ್ ಒಂದನೇ ಹಂತದ ಏಳನೇ ಮುಖ್ಯರಸ್ತೆ, ರಾಜಾಜಿನಗರ ಐದನೇ ಬ್ಲಾಕ್‌ನ 59ನೇ ಅಡ್ಡರಸ್ತೆ, ನಂದಿನಿ ಲೇಔಟ್ ಪೊಲೀಸ್ ಠಾಣೆ ಸಮೀಪ ಹಾಗೂ ಶೇಷಾದ್ರಿಪುರದಲ್ಲಿ ಮರಗಳು ರಸ್ತೆಗೆ ಉರುಳಿ ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.ವಿದ್ಯಾಪೀಠ ವೃತ್ತ ಸೇರಿದಂತೆ ಹಲವೆಡೆ ಮರಗಳು ಕಾರು ಹಾಗೂ ಬೈಕ್‌ಗಳ ಮೇಲೆ ಬಿದ್ದಿವೆ. ಪರಿಣಾಮ ಹಲವು ಕಾರುಗಳು ಜಖಂಗೊಂಡಿವೆ. ಬಿಡಿಎ ಕಚೇರಿ ಹಿಂಭಾಗದಲ್ಲಿ ದೊಡ್ಡ ಮರವೊಂದು ಉರುಳಿ ಬಿದ್ದ ಪರಿಣಾಮ ಐದಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಯಿತು. ಇದರಿಂದಾಗಿ ಸುತ್ತಮುತ್ತಲಿನ ಬಡಾ ವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.ಸಮಸ್ಯೆಗೆ ಸ್ಪಂದಿಸುತ್ತಿಲ್ಲ: `ಚರಂಡಿ ನೀರು ಮನೆಗೆ ನುಗ್ಗಿರುವ ಬಗ್ಗೆ ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಹಲವು ಬಾರಿ ಕರೆ ಮಾಡಿ ದೂರು ನೀಡಿದರೂ ಪಾಲಿಕೆ ಸಿಬ್ಬಂದಿ ಸಮಸ್ಯೆಗೆ ಸ್ಪಂದಿಸುತ್ತಿಲ್ಲ.ಪಾಲಿಕೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಸಾಕಷ್ಟು ತೊಂದರೆಯಾಗಿದೆ~ ಎಂದು ಅಮರಜ್ಯೋತಿ ನಗರ ನಿವಾಸಿ ಚಿದಾನಂದ್ `ಪ್ರಜಾವಾಣಿ~ಗೆ ತಿಳಿಸಿದರು.`ಮನೆಯೊಳಗೆ ನುಗ್ಗಿರುವ ಚರಂಡಿ ನೀರನ್ನು ಹೊರ ಹಾಕುವುದರಲ್ಲೇ ರಾತ್ರಿ ಕಳೆಯುವಂತಾಗಿದೆ. ಕುಟುಂಬ ಸದಸ್ಯರೆಲ್ಲ ನಿದ್ರೆ ಮಾಡದೆ ಚರಂಡಿ ನೀರನ್ನು ಹೊರಗೆ ಹಾಕುತ್ತಿದ್ದೇವೆ~ ಎಂದು ಅವರು ಹೇಳಿದರು.ನಗರದ ಒಳ ಭಾಗದಲ್ಲಿ 18.3 ಮಿ.ಮೀ ಮತ್ತು ಎಚ್‌ಎಎಲ್ ವಿಮಾನ ನಿಲ್ದಾಣ ಸುತ್ತಮುತ್ತ 28.1 ಮಿ.ಮೀ ಮಳೆ ಸುರಿದಿದೆ.ನಗರದಲ್ಲಿ ಬೆಳಿಗ್ಗೆ ಗರಿಷ್ಠ 28.7 ಮತ್ತು ಕನಿಷ್ಠ 20.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.

ಮುಂದಿನ 24 ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry