ಶುಕ್ರವಾರ, ಮಾರ್ಚ್ 5, 2021
30 °C

ನಗರದಲ್ಲೂ ಪಿ ಅಂಡ್‌ ಜಿ ಶಿಕ್ಷಾ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದಲ್ಲೂ ಪಿ ಅಂಡ್‌ ಜಿ ಶಿಕ್ಷಾ ಅಭಿಯಾನ

ಆರ್ಥಿಕವಾಗಿ ಹಿಂದುಳಿದ ಮಕ್ಕಳು ಕಲಿಯುವ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪಿ ಅಂಡ್‌ ಜಿ ಕಂಪೆನಿ ‘ಪಡೇಗಾ ಇಂಡಿಯಾ, ಬಡೇಗಾ ಇಂಡಿಯಾ’ ಘೋಷವಾಕ್ಯದಡಿ ಹಮ್ಮಿಕೊಂಡಿರುವ ಪಿ ಅಂಡ್ ಜಿ ಶಿಕ್ಷಾ ಅಭಿಯಾನ ಕಮ್ಮಸಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ತಾರಾ ಮೆರುಗಿನೊಂದಿಗೆ ನಡೆಯಿತು.ಬಾಲಿವುಡ್‌ ನಟಿ ಕಲ್ಕಿ ಕೋಚ್ಲಿನ್, ಕನ್ನಡದ ಪ್ರಿಯಾಂಕಾ ಉಪೇಂದ್ರ ಮತ್ತು ಕ್ರೀಡಾತಾರೆ ಪಂಕಜ್ ಅಡ್ವಾಣಿ ಅವರು ಕಮ್ಮಸಂದ್ರದ ಈ ಪಿ ಅಂಡ್ ಜಿ ಶಿಕ್ಷಾ ಶಾಲೆಗೆ ಭೇಟಿ ನೀಡಿ, ಅಲ್ಲಿನ ಆಟದ ಮೈದಾನ ಹಾಗೂ ಹೊಸ ಕೊಠಡಿಗಳ ನಿರ್ಮಾಣಕ್ಕೆ ಅವರು ಚಾಲನೆ ನೀಡಿದರು.

ಪ್ರಿಯಾಂಕಾ ಉಪೇಂದ್ರ ಮಾತನಾಡಿ, ಪಿ ಅಂಡ್ ಜಿ ಶಿಕ್ಷಾ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿರುವ ಬಗ್ಗೆ ಅವರು ಪ್ರಶಂಸೆ ವ್ಯಕ್ತಪಡಿಸಿದರು.ಪಿ ಅಂಡ್ ಜಿ ಉತ್ಪನ್ನಗಳಾದ ಟೈಡ್, ಏರಿಯಲ್, ವಿಸ್ಪರ್, ಪ್ಯಾಂಡರ್ಸ್, ಓಲೆ, ಹೆಡ್ ಅಂಡ್ ಶೋಲ್ಡರ್‍ಸ್, ಪ್ಯಾಂಟೀನ್, ವಿಕ್ಸ್, ಜಿಲ್ಲೆಟ್, ಓರಲ್  ಬಿ ಮತ್ತು ಆಂಟಿಪ್ಯೂರ್‌ಗಳನ್ನು ಖರೀದಿಸುವ ಮೂಲಕ ಅಭಿಯಾನದೊಂದಿಗೆ ಸಾರ್ವಜನಿಕರೂ ಕೈ ಜೋಡಿಸುವಂತೆ ಮನವಿ ಮಾಡಿದರು.‘ಈ ಆಂದೋಲನದಿಂದ ಬಡಮಕ್ಕಳೂ ಗುಣಮಟ್ಟದ ಶಿಕ್ಷಣ ಪಡೆಯಲು ಸಹಾಯ ಕಲ್ಪಿಸಿದಂತಾಗಿದೆ. ಇಂದು ಹೊಸ ಆಟದ ಮೈದಾನ ನಿರ್ಮಾಣಕ್ಕೆ ಚಾಲನೆ ನೀಡಿದ್ದೇವೆ. ಮಕ್ಕಳು ಆಟದ ಮೂಲಕ ಮೌಲ್ಯಗಳನ್ನು ಕಲಿಯಲು ಸಾಧ್ಯವಿದೆ ಎನ್ನುವುದು ಆಟಗಾರನಾಗಿ ನನ್ನ ಅನುಭವ’ ಎಂದು ಪಂಕಜ್ ಆಡ್ವಾಣಿ ಹೇಳಿದರು. ಫುಡ್ ಬಜಾರ್ - ಫ್ಯೂಚರ್ ಗ್ರೂಪ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೇವೆಂದ್ರ ಚಾವ್ಲಾ ಮಕ್ಕಳ ಕಲಿಕೆ ಮತ್ತು ಜೀವನ ಮಟ್ಟ ಸುಧಾರಣೆಗೆ ನಾಂದಿ ಹಾಡಿರುವ ಈ ಅಭಿಯಾನಕ್ಕೆ ಹೆಚ್ಚು ಹೆಚ್ಚು ಸಾರ್ವಜನಿಕರು ನೆರವಾಗಬೇಕೆಂದು ಮನವಿ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.