ಈಗಷ್ಟೇ ಹದಿನಾರಕ್ಕೆ ಕಾಲಿಟ್ಟಿರುವ ನಟಿ ಮೆಹಕ್ ಮನ್ವಾನಿ `ಸಿಕ್ಸ್ಟೀನ್' ಚಿತ್ರ ನಾಯಕಿಯಲ್ಲೊಬ್ಬರು. ದೆಹಲಿಯ `ದಿ ಇಂಡಿಯನ್ ಸ್ಕೂಲ್'ನಲ್ಲಿ ಹನ್ನೊಂದನೇ ಇಯತ್ತೆ ಕಲಿಯುತ್ತಿರುವ ಈ ಹುಡುಗಿ ಮೊದಲ ನೋಟಕ್ಕೆ ದಕ್ಕುವುದು `ಹಿಮಕನ್ಯೆ'ಯಂತೆ.

ಮಂಜಿನಂತಿರುವ ಶ್ವೇತವರ್ಣದ ಈ ಹುಡುಗಿಗೆ ಬಾಲಿವುಡ್ನಲ್ಲಿ ದೊಡ್ಡ ಹೆಸರು ಮಾಡಬೇಕು ಎಂಬ ಕನಸಿದೆ. ಜುಲೈ 12ರಂದು ತೆರೆಕಾಣಲಿರುವ `ಸಿಕ್ಸ್ಟೀನ್' ಚಿತ್ರ ಮೆಹಕ್ ಚಿತ್ರಜೀವನವನ್ನು ನಿರ್ಧರಿಸಲಿದೆ. ಅಂದಹಾಗೆ, ಅದೇ ಚಿತ್ರ ಪ್ರಚಾರದ ಸಲುವಾಗಿ ಮೆಹಕ್ ಈಚೆಗೆ ನಗರಕ್ಕೆ ಬಂದಿದ್ದರು. ಬಾಲಿವುಡ್ ನಟಿಯರಂತೆ ಹಮ್ಮುಬಿಮ್ಮು ತೋರದೆ ತಮ್ಮ ಸಿನಿಮಾ ಮೋಹವನ್ನು `ಮೆಟ್ರೊ'ದೊಂದಿಗೆ ಹಂಚಿಕೊಂಡಿದ್ದಾರೆ.

ಮೆಹಕ್ಗೆ `ಸಿಕ್ಸ್ಟೀನ್' ಸಿನಿಮಾ ತುಂಬ ಮಹತ್ವಾಕಾಂಕ್ಷಿ ಚಿತ್ರ. ಈ ಚಿತ್ರದಲ್ಲಿ ಅವರು ತಮ್ಮದೇ ವಯಸ್ಸಿನ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಅದರ ಅನುಭವವನ್ನು ವಿವರಿಸುವುದು ಹೀಗೆ; `ಇದು ನನ್ನ ಮೊದಲ ಬಾಲಿವುಡ್ ಚಿತ್ರ. ಸಹಜವಾಗಿಯೇ ನಿರೀಕ್ಷೆಗಳೂ ಸಾಕಷ್ಟಿವೆ. ಮೊದಲಿನಿಂದಲೂ ನನಗೆ ಬಾಲಿವುಡ್ ಒಂದು ದೊಡ್ಡ ಆಕರ್ಷಣೆಯಾಗಿತ್ತು. ಈಗ ನಾನು ಸಹ ಒಂದು ಹಿಂದಿ ಚಿತ್ರದಲ್ಲಿ ನಟಿಸಿದ್ದೇನೆ ಎನ್ನುವ ಖುಷಿ ಇದೆ. ಮೊದಲ ಬಾರಿಗೆ ಕ್ಯಾಮೆರಾ ಎದುರಿಸುವಾಗ ಯಾವುದೇ ಅಳುಕು ಕಾಡಲಿಲ್ಲ. ನಾಲ್ಕು ವರ್ಷದವಳಿದ್ದಾಗಿನಿಂದಲೇ ಮಾಡೆಲಿಂಗ್ ಮಾಡುತ್ತಿದ್ದೆ. ಮಾಡೆಲಿಂಗ್ ನಂಟು ಇಲ್ಲಿ ಉಪಯೋಗಕ್ಕೆ ಬಂತು' ಎಂದು ತಮ್ಮ ಅನುಭವ ಬಿಡಿಸಿಟ್ಟರು ಮೆಹಕ್.

`ಸಿಕ್ಸ್ಟೀನ್' ಚಿತ್ರದಲ್ಲಿ ಮೆಹಕ್ `ನಿಧಿ' ಎನ್ನುವ ಪಾತ್ರ ನಿರ್ವಹಿಸ್ದ್ದಿದಾರೆ. ಅವರು ತಮ್ಮ ಪಾತ್ರ ಹಾಗೂ ಚಿತ್ರೀಕರಣದ ಬಗ್ಗೆ ತುಂಬ ಉತ್ಸಾಹದಿಂದಲೇ ಮಾತನಾಡುತ್ತಾರೆ. `ಸಿಕ್ಸ್ಟೀನ್' ಚಿತ್ರದಲ್ಲಿ ನಿಧಿ ಎನ್ನುವ ಪಾತ್ರಕ್ಕೆ ನಾನು ಬಣ್ಣ ಹಚ್ಚಿದ್ದೇನೆ. ನಿಧಿ ತುಂಬ ಸರಳ ಹುಡುಗಿ. ತುಂಟ ಹುಡುಗಿ. ನನ್ನಲ್ಲೂ ಈ ಗುಣಗಳು ಮೊದಲಿನಿಂದಲೂ ಇದ್ದಿದ್ದರಿಂದ ನಟಿಸುವುದು ನನಗೆ ಕಷ್ಟ ಎನಿಸಲಿಲ್ಲ. ಚಿತ್ರವನ್ನು ಸಂಪೂರ್ಣವಾಗಿ ದೆಹಲಿಯಲ್ಲೇ ಚಿತ್ರೀಕರಿಸಲಾಗಿದೆ. ಶೂಟಿಂಗ್ ಸಂದರ್ಭದಲ್ಲಿ ನಾವೆಲ್ಲರೂ ಒಂದೇ ಮನೆಯವರಂತೆ ಇರುತ್ತಿದ್ದೆವು. ನಾನು ಮತ್ತು ನನ್ನ ಸಹ ನಟ ನಟಿಯರೆಲ್ಲಾ ಈಗ ಒಳ್ಳೆಯ ಸ್ನೇಹಿತರು. ಸೆಟ್ನಲ್ಲಿ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುತ್ತಾ ಜಾಲಿಯಾಗಿ ಇದ್ದದ್ದು ಎಂದಿಗೂ ಮರೆಯಲಾಗದ ಅನುಭವ' ಎಂದು ಉತ್ಸಾಹದ ಬುಗ್ಗೆಯಾದರು ಅವರು.

`ಸಿಕ್ಸ್ಟೀನ್' ಚಿತ್ರದ ನಿರ್ದೇಶಕ ರಾಜ್ ಪುರೋಹಿತ್ ಕ್ರಿಯಾಶೀಲ ನಿರ್ದೇಶಕರು ಎನ್ನುವ ಮೆಹಕ್ಗೆ ರಾಜ್ ಗರಡಿಯಲ್ಲಿ ಕೆಲಸ ಮಾಡಿದ ಖುಷಿ ಇದೆಯಂತೆ. `ಕಲಾವಿದರಿಂದ ಕೆಲಸವನ್ನು ತೆಗೆಯುವ ಕಲೆ ರಾಜ್ ಪುರೋಹಿತ್ಗೆ ಸಿದ್ಧಿಸಿದೆ. ಯಾರೇ ಒಬ್ಬ ನಟ ಅಥವಾ ನಟಿ ತನ್ನಿಂದ ಈ ನಟನೆ ಸಾಧ್ಯವಿಲ್ಲ ಎಂದು ಹೇಳುವುದನ್ನು ಅವರು ಸಹಿಸುತ್ತಿರಲಿಲ್ಲ. ಪಾತ್ರ ಬೇಡುವಂಥಹ ನಟನೆಯನ್ನು ಕಲಾವಿದರಿಂದ ತೆಗೆಯದೇ ಬಿಡುತ್ತಿರಲಿಲ್ಲ. ಗೊತ್ತಿಲ್ಲದ್ದನ್ನು ಹೇಳಿಕೊಡುತ್ತಿದ್ದರು. ಸಹಜವಾಗಿ ನಟಿಸಿ ಎಂದು ತಿಳಿಹೇಳುತ್ತಿದ್ದರು.

ಈ ಚಿತ್ರಕ್ಕಾಗಿ ನಿರ್ದೇಶಕರು ದುಡಿದಿದ್ದಾರೆ. ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ತೆರೆ ಮೇಲೆ ತಂದಿದ್ದಾರೆ. ಒಟ್ಟಾರೆ ಅವರೊಬ್ಬ ಅದ್ಭುತ ನಿರ್ದೇಶಕ' ಎನ್ನುತ್ತಾರೆ ಮೆಹಕ್.

ಈಗಷ್ಟೇ ಹತ್ತನೇ ತರಗತಿ ಮುಗಿಸಿ ಹನ್ನೊಂದನೇ ಕ್ಲಾಸ್ಗೆ ಕಾಲಿಟ್ಟಿರುವ ಮೆಹಕ್ಗೆ ನಟಿಯಾಗಬೇಕೆಂಬ ಕನಸು ಮಾತ್ರ ಮೊದಲಿನಿಂದಲೂ ಇತ್ತು. ಆ ಕನಸನ್ನು ನಿಜವಾಗಿಸಿಕೊಂಡಿರುವ ಆಕೆಗೆ ಈಗ ಜನಪ್ರಿಯ ನಟಿಯಾಗಬೇಕು ಮತ್ತೊಂದು ಕನಸು ಕಾಣುತ್ತಿದ್ದಾರೆ.

`ಸಿಕ್ಸ್ಟೀನ್' ಚಿತ್ರದ ಬಗ್ಗೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ತಿಳಿಯಲು ಕಾತರಳಾಗಿದ್ದೇನೆ. ಪಾತ್ರಕ್ಕೆ ಸಲ್ಲಿಸಬೇಕಾದ ನ್ಯಾಯವನ್ನು ನಾನು ಸಲ್ಲಿಸಿರುವುದರಿಂದ ಪ್ರೇಕ್ಷಕರು ನನ್ನ ನಟನೆಯನ್ನು ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆ ಇದೆ. ಒಳ್ಳೆ ಕಥೆ, ಒಳ್ಳೆ ಬ್ಯಾನರ್ ಸಿಕ್ಕರೆ ಮುಂದೆಯೂ ಬಾಲಿವುಡ್ ಚಿತ್ರಗಳಲ್ಲಿ ನಟಿಸುತ್ತೇನೆ' ಎನ್ನುತ್ತಾರೆ ಅವರು.

ವಿದ್ಯಾರ್ಥಿಯಾಗಿದ್ದುಕೊಂಡೇ ಸಿನಿಮಾ ಚಿತ್ರೀಕರಣವನ್ನು ಯಶಸ್ವಿಯಾಗಿ ನಿಭಾಯಿಸಿರುವ ಮೆಹಕ್ಗೆ ಶಿಕ್ಷಣವನ್ನು ಸಿನಿಮಾ ಕಾರಣದಿಂದ ಕಡೆಗಣಿಸುವುದು ಇಷ್ಟವಿಲ್ಲವಂತೆ.

`ನನ್ನ ತಂದೆ ದೆಹಲಿಯಲ್ಲಿರುವ ಮಲೇಷ್ಯಾ ಕಂಪೆನಿಯೊಂದರಲ್ಲಿ ಉದ್ಯೋಗಿ. ತಾಯಿ ಗೃಹಿಣಿ. ನನಗೆ ಒಬ್ಬ ಅಣ್ಣ ಇದ್ದಾರೆ. ವಿದ್ಯಾರ್ಥಿಯಾಗಿದ್ದರಿಂದ ಚಿತ್ರೀಕರಣದಲ್ಲಿ ನನ್ನನ್ನು ತೊಡಗಿಸಿಕೊಳ್ಳುವುದು ಏನೂ ಕಷ್ಟವಾಗಲಿಲ್ಲ. ಶಾಲೆಯ ರಜಾ ದಿನಗಳನ್ನು ಹೊಂದಿಸಿಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದೆ. ಮನೆಯವರ ಒತ್ತಾಸೆಯಿಂದಾಗಿ ಇವೆರಡನ್ನೂ ಸಮನಾಗಿ ನಿಭಾಯಿಸಲು ಸಾಧ್ಯವಾಯಿತು. ನನ್ನ ಅಪ್ಪನಂತೂ ದಿನದ ಒಂದಿಲ್ಲೊಂದು ವೇಳೆಯಲ್ಲಿ ಚಿತ್ರೀಕರಣ ನಡೆವ ಜಾಗಕ್ಕೆ ಬಂದು ನನ್ನನ್ನು ವಿಚಾರಿಸಿಕೊಳ್ಳುತ್ತಿದ್ದರು' ಎಂದು ಮನೆಯವರ ಸಹಕಾರ ನೆನೆಯುತ್ತಾರೆ ಮೆಹಕ್.

ಯಾವುದೇ ಬಟ್ಟೆಯನ್ನು ಧರಿಸಿದರೂ ಅದು ನಮಗೆ ಕಂಫರ್ಟ್ ಎನಿಸುವಂತಿರಬೇಕು ಎನ್ನುವ ಮೆಹರ್ಗೆ ಗಾಢ ಬಣ್ಣದ ಬಟ್ಟೆಗಳ ಮೇಲೆ ಪ್ರೀತಿ ಹೆಚ್ಚು. ಮಿಡಿ, ಮಿನಿ ಎಲ್ಲವನ್ನು ತೊಡುವ ಈಕೆಗೆ ಎಲ್ಲ ವಿಧಧ ಬಟ್ಟೆಗಳ ಮೇಲೂ ಇಷ್ಟವಿದೆಯಂತೆ.

`ಬೆಂಗಳೂರಿಗೆ ಇದು ನನ್ನ ಮೊದಲ ಭೇಟಿ. ದೆಹಲಿಗೆ ಹೋಲಿಕೆ ಮಾಡಿದರೆ ಇಲ್ಲಿನ ಹವಾಗುಣ ತುಂಬಾ ಹಿತವಾಗಿದೆ. ಬೇಸಿಗೆಯಲ್ಲಿ ದೆಹಲಿ ಬಿಸಿಲಿನಲ್ಲಿ ಬೇಯುತ್ತದೆ. ಚಳಿಯಲ್ಲಿ ಹೆಪ್ಪುಗಟ್ಟುತ್ತದೆ. ಆದರೆ, ಬೆಂಗಳೂರು ಹಾಗಿಲ್ಲ, ನನಗೆ ತುಂಬಾ ಇಷ್ಟವಾಯ್ತು' ಎನ್ನುವ ಮೆಹಕ್, ನಟಿಯಾದ ನಂತರ ಮೊದಲ ಬಾರಿಗೆ ಶಾಲೆಗೆ ಹೋಗುವ ಸಿದ್ಧತೆ ನಡೆಸುತ್ತಿದ್ದಾರೆ. ಅಲ್ಲಿ ತನ್ನ ಕ್ಲಾಸ್ಮೇಟ್ಗಳ ಪ್ರತಿಕ್ರಿಯೆ ಹೇಗಿರಬಹುದು ಎಂದು ಊಹಿಸಿಕೊಳ್ಳುತ್ತಾ ಕನಸಿಗೆ ಜಾರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.