ಗುರುವಾರ , ಜನವರಿ 23, 2020
23 °C

ನಡವತ್ತಿ: ಬಾಲಕಿ ಮೇಲೆ ಅತ್ಯಾಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಕೋಟೆ: 12 ವರ್ಷದ  ಬಾಲಕಿ ಮೇಲೆ ಯುವಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ತಾಲ್ಲೂಕಿನ ನಡವತ್ತಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.6ನೇ ತರಗತಿ ಓದುತ್ತಿದ್ದ ಬಾಲಕಿ ರಾತ್ರಿ 7.30ರ ಸಮಯದಲ್ಲಿ ಗ್ರಾಮದ ಸಂಬಂಧಿಕರ ಮನೆಗೆ ಹೋಗಿ ಬರುತ್ತಿದ್ದಾಗ ಆರೋಪಿ ವಿಜಯ್(20) ಎಂಬಾತ ಆಕೆಯನ್ನು ಅಡ್ಡಗಟ್ಟಿದ್ದಾನೆ. ನಂತರ ಪಕ್ಕದಲ್ಲೇ ಇದ್ದ  ಹಿಪ್ಪುನೇರಳೆ ತೋಟಕ್ಕೆ ಎತ್ತಿ ದೊಯ್ದು ಅತ್ಯಾಚಾರ ಎಸಗಿ ಪರಾರಿ ಯಾಗಿದ್ದಾನೆ ಎಂದು ದೂರಲಾಗಿದೆ.ಅಸ್ವಸ್ಥಳಾದ ಬಾಲಕಿಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಸೇರಿಸಲಾಗಿದೆ. ರಾಯಚೂರು ಮೂಲದ ಆರೋಪಿ ಎರಡು ತಿಂಗಳ ಹಿಂದಷ್ಟೇ ಗ್ರಾಮದ ಸಂಪಂಗಿ ಎಂಬುವವರಿಗೆ ಸೇರಿದ ಜೆಸಿಬಿಯ ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದ. ಬಾಲಕಿ ಕೊಟ್ಟ ಹೇಳಿಕೆ ಮೇಲೆ ತಿರುಮಲಶೆಟ್ಟಿಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರತಿಕ್ರಿಯಿಸಿ (+)