ಮಂಗಳವಾರ, ಮೇ 11, 2021
19 °C
ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸತತ ನಾಲ್ಕನೇ ವರ್ಷ ಟ್ರೋಫಿ ಗೆದ್ದ ಸ್ಪೇನ್ ಆಟಗಾರ

ನಡಾಲ್ ಮತ್ತೊಮ್ಮೆ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಡಾಲ್ ಮತ್ತೊಮ್ಮೆ ಚಾಂಪಿಯನ್

ಪ್ಯಾರಿಸ್ (ಎಎಫ್‌ಪಿ): ಮೂರು ವರ್ಷಗಳಿಂದ ತಮ್ಮಲ್ಲಿಯೇ ಟ್ರೋಫಿ ಉಳಿಸಿಕೊಂಡಿದ್ದ ರಫೆಲ್ ನಡಾಲ್ ಈ  ಸಲವೂ ಅದನ್ನು ಬಿಟ್ಟುಕೊಡಲಿಲ್ಲ. ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಡೇವಿಡ್ ಫೆರರ್ ಅವರನ್ನು ಮಣಿಸಿ ಸತತ ನಾಲ್ಕನೇ ವರ್ಷ ಚಾಂಪಿಯನ್ ಆದರು.ಫಿಲಿಪ್ ಚಾಟ್ರಿಯರ್ ಕೋರ್ಟ್‌ನಲ್ಲಿ ಭಾನುವಾರ ನಡೆದ ಫೈನಲ್ ಹಣಾಹಣಿಯಲ್ಲಿ ಸ್ಪೇನ್‌ನ ನಡಾಲ್ ಟ್ರೋಫಿ ಜಯಿಸಲು ಹೆಚ್ಚು ಕಷ್ಟ ಪಡಬೇಕಾಗಲಿಲ್ಲ. ಈ ಆಟಗಾರ 6-3, 6-2, 6-3ರ ನೇರ ಸೆಟ್‌ಗಳಿಂದ ತಮ್ಮದೇ ದೇಶದ ಡೇವಿಡ್ ಫೆರರ್ ಅವರನ್ನು ಮಣಿಸಿದರು.

ರೋಲಂಡ್ ಗ್ಯಾರೋಸ್ ಕೋರ್ಟ್‌ನಲ್ಲಿ ನಡಾಲ್ ಎತ್ತಿ ಹಿಡಿದ ಎಂಟನೇ ಪ್ರಶಸ್ತಿ ಇದಾಗಿದೆ. 2010ರಿಂದ ಸತತವಾಗಿ ಇಲ್ಲಿ ಚಾಂಪಿಯನ್ ಆಗಿರುವ ನಡಾಲ್‌ಗೆ ಮೂರೂ ಸೆಟ್‌ಗಳಲ್ಲಿ ಅಷ್ಟೇನೂ ಪ್ರತಿರೋಧ ಎದುರಾಗಲಿಲ್ಲ. ಈ ಟೂರ್ನಿಯಲ್ಲಿ ನಡಾಲ್ ಚಾಂಪಿಯನ್ ಆಗುವ ನಿರೀಕ್ಷೆ ಹೆಚ್ಚಿತ್ತು. ಏಕೆಂದರೆ ಮೂರನೇ ಶ್ರೇಯಾಂಕದ ಈ ಆಟಗಾರ ಪ್ಯಾರಿಸ್‌ನಲ್ಲಿ ಆಡಿದ ಒಟ್ಟು 60 ಪಂದ್ಯಗಳಲ್ಲಿ 59ರಲ್ಲಿ ಗೆಲುವು ಸಾಧಿಸಿದ ದಾಖಲೆ ಹೊಂದಿದ್ದಾರೆ.`ನನ್ನ ಗೆಲುವಿಗೆ ಪ್ರಾರ್ಥಿಸಿ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಈ ಸಾಧನೆ ಮತ್ತಷ್ಟು ಹುಮ್ಮಸ್ಸು ತುಂಬಿದೆ. ಇನ್ನಷ್ಟು ಸಾಧನೆಗೆ ಪ್ರೇರಣೆಯಾಗಿದೆ' ಎಂದು 27 ವರ್ಷದ ನಡಾಲ್ ನುಡಿದರು.ಪ್ರತಿಭಟನೆಯ ಬಿಸಿ: ಸಲಿಂಗ ವಿವಾಹವನ್ನು ಕಾನೂನು ಬದ್ಧಗೊಳಿಸಿರುವುದನ್ನು ವಿರೋಧಿಸಿ ನಡೆಸಿದ ಪ್ರತಿಭಟನೆಯ ಬಿಸಿ ಫೈನಲ್ ಪಂದ್ಯಕ್ಕೆ ತಟ್ಟಿತು. ಒಬ್ಬ ವ್ಯಕ್ತಿ ಕೋರ್ಟ್‌ನೊಳಕ್ಕೆ ನುಗ್ಗಿದ್ದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.ವೆಸ್ನಿನಾ ಜೋಡಿಗೆ ಪ್ರಶಸ್ತಿ: ರಷ್ಯಾದ ಎಲೆನಾ ವೆಸ್ನಿನಾ ಮತ್ತು ಎಕ್ತರೀನಾ ಮಕರೋವಾ ಜೋಡಿ ಮಹಿಳಾ ವಿಭಾಗದ ಡಬಲ್ಸ್  ಪ್ರಶಸ್ತಿ ಜಯಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.