ಭಾನುವಾರ, ಮೇ 9, 2021
27 °C

ನಡೆಯದ ಕಲಾಪ: ಕಕ್ಷಿದಾರರಿಗೆ ತೊಂದರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ನ್ಯಾಯಾಧೀಶರ ವರ್ತನೆ ವಿರೋಧಿಸಿ ವಕೀಲರು ಕಲಾಪ ಬಹಿಷ್ಕರಿಸಿರುವ ಘಟನೆ ನಡೆದಿದ್ದು, ಇಲ್ಲಿನ ಒಂದು ನ್ಯಾಯಾಲಯದಲ್ಲಿ ಎರಡು ದಿನಗಳಿಂದ ಕಲಾಪ ನಡೆಯದೇ ಕಕ್ಷಿದಾರರು ತೊಂದರೆ ಅನುಭವಿಸುವಂತಾಗಿದೆ.ಹಾಸನದ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ವಿರುದ್ಧ ವಕೀಲರು ಪ್ರತಿಭಟನಾ ರೂಪದಲ್ಲಿ ಕಲಾಪ ಬಹಿಷ್ಕರಿಸಿದ್ದಾರೆ.

'ಅಪಘಾತದ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ಇಡೀ ದೇಶಕ್ಕೆ ಒಂದು ಸ್ಪಷ್ಟ ರೂಪರೇಷೆ ಇದೆ. ಈ ನ್ಯಾಯಾಧೀಶರು ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ' ಎಂದು ಕೆಲವು ವಕೀಲರು ಆರೋಪಿಸಿದ್ದಾರೆ.'ನ್ಯಾಯಾಧೀಶರ ತೀರ್ಪುಗಳ ಬಗ್ಗೆ ನಮಗೆ ಆಕ್ಷೇಪಗಳಿಲ್ಲ. ನಿಷ್ಪಕ್ಷಪಾತ, ಸ್ಪಷ್ಟ ಹಾಗೂ ನ್ಯಾಯಸಮ್ಮತ ತೀರ್ಪುಗಳನ್ನು ಅವರು ನೀಡುತ್ತ ಬಂದಿದ್ದಾರೆ. ಆದರೆ, ಕಕ್ಷಿದಾರರ ಕಷ್ಟಗಳನ್ನೂ ಅರಿತುಕೊಂಡು ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು ಎಂದು ನಾವು ಬಯಸುತ್ತೇವೆ. ಅದನ್ನೇ ಸಂಬಂಧಪಟ್ಟ ನ್ಯಾಯಾಧೀಶರಿಗೆ ಮನವರಿಕೆ ಮಾಡಿದ್ದೇವೆ' ಎಂದಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.