ಅಫಜಲಪುರ: `ನಾನು ರಾಜಕೀಯಕ್ಕೆ ಪ್ರವೇಶ ಮಾಡುವಾಗ ನಮ್ಮ ತಂದೆಯವರು ನನಗೆ ರೈತರಿಗಾಗಿ ಶಾಸ್ವತ ನೀರಾವರಿ ಸಲಹೆ ನೀಡಿದ್ದರು. ಭೀಮಾ ನದಿಗೆ ಬ್ಯಾರೇಜ್ ನಿರ್ಮಿಸಿ ಈ ಭಾಗವನ್ನು ಹಸಿರು ಕ್ರಾಂತಿ ಮಾಡಲು ಅವರು ಕನಸು ಕಂಡಿದ್ದನ್ನು ನಾನು ನನಸು ಮಾಡಿದ್ದೇನೆ~ ಎಂದು ಶಾಸಕ ಮಾಲೀಕಯ್ಯ ಗುತ್ತೇದಾರ ತಿಳಿಸಿದರು.

ತಾಲ್ಲೂಕಿನ ಸೊನ್ನ ಗ್ರಾಮದ ಹತ್ತಿರ ಸುಮಾರು 600 ಕೋಟಿ ರೂ. ವೆಚ್ಚದ 65 ಸಾವಿರ ಹೆಕ್ಟೇರ್ ನೀರಾವರಿಯಾಗುವ ಭೀಮಾ ಏತ ನೀರಾವರಿ ಬ್ಯಾರೇಜ್ಕ್ಕೆ ಸ್ವಾಮಿಜಿಗಳಿಂದ ಬಾಗೀನ ಅರ್ಪಣೆ ಮಾಡಿ ಬ್ಯಾರೇಜ್ ಆವರಣದಲ್ಲಿ ಗುರುವಾರ ಬೃಹತ್ ರೈತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಕಪ್ಪು ಬಾವುಟ:ದೇವೆಗೌಡರು ಮತ್ತು ಮುಖ್ಯಮಂತ್ರಿ ಜೆ.ಎಚ್ ಪಟೇಲ ಅವರು ಭೀಮಾ ಏತ ನೀರಾವರಿ ಕಾಮಗಾರಿಗೆ ಚಾಲನೆ ನೀಡಲು ಅಫಜಲಪುರಕ್ಕೆ ಬಂದಾಗ ಮಾಜಿ ಶಾಸಕ ಎಂ.ವೈ.ಪಾಟೀಲ, ವಿಠಲ ಹೇರೂರ, ಮಕ್ಬೂಲ್ ಪಟೇಲ, ಸಿದ್ದಯ್ಯ ಹಿರೇಮಠ, ಕಪ್ಪು ಬಾವುಟ ಪ್ರದರ್ಶನ ಮಾಡಿದ್ದರು. ಇವರಿಗೆ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ. ಪತ್ರಿಕೆಯ ಮುಖಾಂತರ ಎಂ.ವೈ.ಪಾಟೀಲರು ಭೀಮಾ ಬ್ಯಾರೇಜ್ಕ್ಕೆ ಬಾಗಿನ ಅರ್ಪಿಸುವ ಬಗ್ಗೆ ವ್ಯಂಗವಾಗಿ ಟೀಕೆ ಮಾಡಿದ್ದಾರೆ.

ಅವರಿಗೆ ತೆಲೆ ಕೆಟ್ಟಿದೆ ಹುಚ್ಚು ಆಸ್ಪತ್ರೆಗೆ ಸೇರಿಸಬೇಕು ಎಂದು ತಿಳಿಸಿದರು.
ರೈತರಿಗಾಗಿ ಕೃಷಿ ವಿಜ್ಞಾನಿಗಳಾದ ದಯಾನಂದ ಮಹಾಲಿಂಗ, ರಾಜು ತೆಗ್ಗಳ್ಳಿ, ಬಿಎಚ್ ಪಾಟೀಲ, ಚಂದ್ರಕಾಂತ ಜೀವಣಗಿ, ರಾಹುಲಕುಮಾರ ಭಾವಿದೊಡ್ಡ ಅವರಗಳಿಂದ ಕೃಷಿ ಮಾಹಿತಿ ಕುರಿತು ವಿಚಾರ ಸಂಕೀರ್ಣ ಏರ್ಪಡಿಸಲಾಯಿತು. ಬಡದಾಳದ ಚನ್ನಮಲ್ಲ ಶಿವಾಚಾರ್ಯರು, ಚಿನ್ಮಯಗಿರಿಯ ಸಿದ್ರಾಮ ಶಿವಾರ್ಯಯರು, ಅಫಜಲಪುರದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಅವರಿಂದ ಭೀಮಾ ಬ್ಯಾರೇಜ್ಕ್ಕೆ ಬಾಗಿನ ಅರ್ಪಿಸಲಾಯಿತು.

ಸಮಾರಂಭದಲ್ಲಿ ಮುಖಂಡರಾದ ಬಸವಣ್ಣಪ್ಪ ಪಾಟೀಲ ಅಂಕಲಗಿ, ಸಿದ್ಧು ಹಳಗೋಧಿ, ಸಿದ್ದಣ್ಣಗೌಡ ಪಾಟೀಲ, ಶಿವಪುತ್ರಪ್ಪ ಸಂಗೋಳಗಿ, ಶಿವಪುತ್ರಪ್ಪ ಗೌಡಗಾಂವ, ಸುರೇಶ ಗುತ್ತೇದಾರ, ವಿಜಯಕುಮಾರ ಪಾಟೀಲ, ರಿತೇಶ, ಕುಶಾಲ, ವಿನಯ ಗುತ್ತೇದಾರ, ನಿತೀನ ಗುತ್ತೇದಾರ ಮುಖ್ಯ ಎಂಜನಿಯರ್ಗಳಾದ ಎಮ್ಜಿ ಶಿವಕುಮಾರ, ಬಿ.ಬಿ.ರಾಂಪೂರೆ, ಕಾರ್ಯಪಾಲಕ ಎಂಜನಿಯರ್, ಬಿಎಸ್ ಬಿರಾದಾರ ಭಾಗವಹಿಸಿದ್ದರು. ಮಹಾಂತೇಶ ಪಾಟೀಲ ಸ್ವಾಗತಿಸಿದರು ವಿಶ್ವನಾಥ ರೇವೂರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.