ಸೋಮವಾರ, ಜೂನ್ 21, 2021
28 °C
ಮಾಡಿ ನಲಿ :ಸರಣಿ–55

ನರ್ತಿಸುವ ಮೊಂಬತ್ತಿ

ಪ್ರೊ ಸಿ.ಡಿ ಪಾಟೀಲ್ Updated:

ಅಕ್ಷರ ಗಾತ್ರ : | |

ಸಾಮಗ್ರಿ: ಮೊಂಬತ್ತಿ, ಎರಡು ಇಟ್ಟಿಗೆ, ದಪ್ಪ ಹಾಗೂ ಉದ್ದನೆಯ ಸೂಜಿ, ಬೆಂಕಿ ಪೆಟ್ಟಿಗೆ.

ವಿಧಾನ:

*ಒಂದು ಮೊಂಬತ್ತಿಯ ಮಧ್ಯದಲ್ಲಿ ದಪ್ಪ ಹಾಗೂ ಉದ್ದ ಸೂಜಿಯನ್ನು ಸೇರಿಸಿ.

*ಚಿತ್ರದಲ್ಲಿ ತೋರಿಸಿದಂತೆ ಮೊಂಬತ್ತಿಯ ಇನ್ನೊಂದು ಕಡೆಗೆ ಸ್ವಲ್ಪ ಮೇಣವನ್ನು ಕತ್ತರಿಸಿ ಹಾಕಿ, ಬತ್ತಿ ಕಾಣುವ ಹಾಗಿಡಿ.

*ಈಗ ಮೊಂಬತ್ತಿಯನ್ನು ಚಿತ್ರದಲ್ಲಿ ತೋರಿಸಿದಂತೆ ಇಟ್ಟಿಗೆಗಳ ಮೇಲೆ ಇಡಿ. ಮೊಂಬತ್ತಿಯ ಎರಡೂ ಕಡೆಗೆ ಬೆಂಕಿ ಕಡ್ಡಿಯಿಂದ ಬತ್ತಿಯನ್ನು ಉರಿಸಿ.

ಪ್ರಶ್ನೆ: ಈಗ ಮೊಂಬತ್ತಿಯ ವರ್ತನೆಯನ್ನು ವೀಕ್ಷಿಸಿ. ಏನಾಗುತ್ತದೆ? ಯಾಕೆ?

ಉತ್ತರ: ಮೊಂಬತ್ತಿ, ಮೊದಲು ಉರಿಯಲು ಪ್ರಾರಂಭಿಸಿದ ಭಾಗ (ಅ) ಸ್ವಲ್ಪ ಉರಿದಿರುವುದರಿಂದ ಇನ್ನೊಂದು ಭಾಗಕ್ಕೆ(ಬ) ಹೋಲಿಸಿದರೆ ಹಗುರವಾಗಿರುತ್ತದೆ. ಆದ್ದರಿಂದ ಅದು ಸ್ವಲ್ಪ ಮೇಲೇರುತ್ತದೆ. ಈಗ ‘ಬ’ ಭಾಗ ಹೆಚ್ಚು ಉರಿಯಲು ಪ್ರಾರಂಭಿಸುತ್ತದೆ. ಆಗ ಅದು ಸ್ವಲ್ಪ ಹಗುರಾಗುವುದರಿಂದ ‘ಅ’ ಕೆಳಗೆ ಹೋಗಿ ‘ಬ’ ಮೇಲೆರುತ್ತದೆ. ಈ ಕ್ರಿಯೆ ನಿರಂತರವಾಗಿ ಜರುಗುವುದರಿಂದ ಮೊಂಬತ್ತಿ ‘ನರ್ತನ’ ಮಾಡಿದಂತೆ ಕಾಣುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.