ಸೋಮವಾರ, ಮೇ 17, 2021
27 °C

ನಳದಲ್ಲಿ ಬಂದ ಕೊಳಚೆ ನೀರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಳಂದೂರು: ಬುಧವಾರ ಪಟ್ಟಣ ಜನರು ನಲ್ಲಿಗಳಲ್ಲಿ ಬಂದ ಕೆಸರು ಮಿಶ್ರಿತ ಹಾಗೂ ಚರಂಡಿ ನೀರಿಗಿಂತಲೂ ಕಳಪೆ ಗುಣಮಟ್ಟದ ನೀರು ಬಂದಿದ್ದನ್ನು ನೋಡಿ ಬೆಚ್ಚಿ ಬಿದ್ದರು.`ಕಾವೇರಿ ಕುಡಿಯುವ ನೀರು ಕಲುಷಿತವಾಗಿ ಬರುತ್ತಿದೆ. ಕರ್ನಾಟಕ ಜಲಮಂಡಳಿಗೆ ಇದು ಕುಡಿಯಲು ಯೋಗ್ಯವಾಗಿಲ್ಲ ಎಂದು ಸಾರ್ವಜನಿಕರು ಹಾಗೂ ಪ.ಪಂ. ಅಧ್ಯಕ್ಷರು, ಸದಸ್ಯರು ದೂರಿದ್ದರು. ಶುಚಿಯಾದ ನೀರು ಬರುವ ತನಕ ಇದನ್ನು ತೆಗೆದುಕೊಳ್ಳುವುದಿಲ್ಲ~ ಎನ್ನುತ್ತಿರುವಾಗಲೇ ಕೆಸರು ಮಿಶ್ರಿತ ನೀರು ಬಂದಿದೆ.ಮಹಾನವಮಿ, ದಸರಾಗೆ ಬಟ್ಟೆ ಒಗೆಯಲು ತೊಡಗಿದ್ದ ಮಹಿಳೆಯರು ಈ ನೀರು ನೋಡಿ ಬೇಸರ ವ್ಯಕ್ತ ಪಡಿಸಿದ್ದಾರೆ. 1ನೇ ವಾರ್ಡ್‌ನ ಬಹುತೇಕ ಮನೆಗಳು ತಗ್ಗು ಪ್ರದೇಶದಲ್ಲಿವೆ. ಇಲ್ಲಿನ ನಲ್ಲಿಗಳಿಗೆ ನೀರು ರಭಸವಾಗಿ ನಗ್ಗುತ್ತದೆ. ಬುಧವಾರ ಬಂದ ನೀರಿನ ರಭಸವೂ ಹೆಚ್ಚಿತ್ತು, ಹಾಗಾಗಿ ಮನೆಯ ಮುಂದಿನ ನಲ್ಲಿಯಲ್ಲಿ ನೀರು ಬಂದ ರಭಸಕ್ಕೆ ಸ್ಥಳದಲ್ಲಿ ಇಡಲಾದ ಬಟ್ಟೆ, ಪಾತ್ರೆ ಮತ್ತೆ ಕಲುಷಿತಗೊಂಡವು ಎಂದು ನಿವಾಸಿಗಳಾದ ರಾಜಮ್ಮ, ಗೌರಮ್ಮ, ಲಕ್ಷ್ಮಿ, ಮಹೇಶ್, ಮಹದೇವಸ್ವಾಮಿ, ಆರ್. ಗೋಪಾಲಕೃಷ್ಣ ಅವರು ದೂರಿದರು.

ಪರಿಶೀಲನೆ: ಘಟನೆ ನಡೆದ ತಕ್ಷಣ ಪಟ್ಟಣ ಪಂಚಾಯಿತಿ ಪ್ರಭಾರ ಮುಖ್ಯಾಧಿಕಾರಿ ಹಾಗೂ ಆರೋಗ್ಯಾಧಿಕಾರಿ ಉಮಾಶಂಕರ್ ಸದಸ್ಯರಾದ ಜಯರಾಂ ಭೇಟಿ ನೀಡಿ ಪರಿಶೀಲಿಸಿದರು.ಬುಧವಾರ ಬಂದ ನೀರು ತುಂಬಾ ಕಲುಷಿತವಾಗಿದೆ. ಬಳಕೆಗೆ ಯೋಗ್ಯವಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರಿಗೆ ಮನವರಿಕೆ ಮಾಡಿಕೊಟ್ಟು ಮುಂದೆ ಸಮಸ್ಯೆ ಬಾರದ ಹಾಗೆ ನೋಡಿಕೊಳ್ಳುವಂತೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ತಿಳಿಸಿದರು.ಕಾಮಗಾರಿ ಮುಗಿಸಿ ನೀರು ಪೂರೈಸಿ: ಕರ್ನಾಟಕ ಜಲ ಮಂಡಳಿ ಹಲವು ವರ್ಷಗಳಿಂದ ಕಾವೇರಿ ಕುಡಿಯುವ ನೀರು ಪೂರೈಸುವ ಕಾಮಗಾರಿ ನಡೆಸುತ್ತಿದೆ. ಆದರೆ ಕೆಲಸ ಮಾತ್ರ ಪೂರ್ಣವಾಗಿಲ್ಲ. ಅಪಾರ ವೆಚ್ಚದಲ್ಲಿ ತಾಲ್ಲೂಕಿನ ಕೆಲವು ಹಳ್ಳಿಗಳಿಗೆ ಹಾಗೂ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಇದನ್ನು ಆರಂಭಿಸಲಾಗಿದೆ. ಆದರೆ ಪಟ್ಟಣದ 11 ವಾರ್ಡ್‌ಗಳಲ್ಲಿ ಕೇವಲ 6 ವಾರ್ಡ್‌ಗಳಿಗೆ ಮಾತ್ರ ಇದರ ಪೈಪ್ ಅಳವಡಿಸಲಾಗಿದೆ. ಇನ್ನುಳಿದ ವಾರ್ಡ್‌ಗಳಿಗೆ ನೀರು ಪೂರೈಕೆಯಾಗುತ್ತಿಲ್ಲ.ಈ ನೀರು ಕುಡಿಯಲು ಯೋಗ್ಯವಾಗಿಲ್ಲ. ಶುದ್ಧೀಕರಣ ಘಟಕದ ಕಾಮಗಾರಿ ಸಹ ಸಂಪೂರ್ಣಗೊಂಡಿಲ್ಲ. ಆದ್ದರಿಂದ ಗುಣಮಟ್ಟದ ನೀರು ಪೂರೈಕೆಯಾಗುವ ವರೆಗೆ, ಸಂಪೂರ್ಣ ಕಾಮಗಾರಿ ಮುಗಿಯದೇ ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿಮಹದೇವಸ್ವಾಮಿ `ಪ್ರಜಾವಾಣಿ~ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.