ನವದೆಹಲಿ(ಪಿಟಿಐ): ಬ್ಯಾಂಕ್ನ ನಷ್ಟಕ್ಕೆ ಕಾರಣವಾಗುತ್ತಿರುವ ಶಾಖೆಗಳನ್ನು ಮುಚ್ಚುವಂತೆಯೂ, ಸಿಬ್ಬಂದಿ ಸಂಖ್ಯೆಯಲ್ಲಿ ಸಹ ಕಡಿತ ಮಾಡುವಂತೆಯೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಿಗೆ ಕೇಂದ್ರ ಸರ್ಕಾರ ಸದ್ಯದಲ್ಲಿಯೇ ನಿರ್ದೇಶನ ನೀಡುವ ಸಾಧ್ಯತೆ ದಟ್ಟವಾಗಿದೆ.

ಅನುತ್ಪಾದಕ ಆಸ್ತಿ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿರುವ ಶಾಖೆಗಳನ್ನು ಮುಚ್ಚುವ ಮೂಲಕ ಬ್ಯಾಂಕ್ನ ಆರ್ಥಿಕ ಸ್ಥಿತಿಯನ್ನು ಸುಸ್ಥಿತಿಯಲ್ಲಿಡಲು ಈ ಕ್ರಮ ಅಗತ್ಯ. ಅಲ್ಲದೆ, ಸಿಬ್ಬಂದಿ ಸಂಖ್ಯೆ ಬ್ಯಾಂಕ್ಗೆ ಹೊರೆಯಾಗುವ ಪ್ರಮಾಣದಲ್ಲಿದ್ದರೆ ಕಡಿತ ಮಾಡುವುದೂ ಅನಿವಾರ್ಯವಾಗಲಿದೆ.

ಈ ಬಗ್ಗೆ ನಿರಂತರ ಮಾತುಕತೆ ನಡೆದಿದೆ ಎಂದು ಕೇಂದ್ರ ಹಣಕಾಸು ಸೇವೆಗಳ ಕಾರ್ಯದರ್ಶಿ ಡಿ.ಕೆ.ಮಿತ್ತಲ್ ಹೇಳಿದರು. ಸಿಐಐ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ನಂತರ ಸುದ್ದಿಸಂಸ್ಥೆ ಜತೆ ಮಾತನಾಡಿದ ಅವರು, ಬ್ಯಾಂಕ್ಗಳಿಗಷ್ಟೇ ಅಲ್ಲ, ವಿಮಾ ಕಂಪನಿಗಳೂ ಈ ಕ್ರಮ ಅನಿವಾರ್ಯವಾಗಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.