ಅದೆಷ್ಟೋ ಅಭಿನಯ ಚತುರರು ತಮ್ಮ ಜೀವನದ ಮುಕ್ಕಾಲು ಭಾಗವನ್ನು ಬಣ್ಣ ಅಚ್ಚುವುದರಲ್ಲೇ ಕಳೆದಿದ್ದಾರೆ. ಹೀಗೆ ನಾಟಕ ಕಂಪನಿಗಳಿಗೂ ಚಿತ್ರರಂಗಕ್ಕೂ ಅವಿನಾಭಾವ ಸಂಬಂಧ ಇದೆ. ಕನ್ನಡ ಚಿತ್ರರಂಗ ಕಂಡಂತಹ ಶ್ರೇಷ್ಠ ನಟ ರಾಜ್ಕುಮಾರ್ ಸಹ ಮೊದ ಮೊದಲು ನಾಟಕಗಳಲ್ಲಿ ಬಣ್ಣ ಹಚ್ಚುತ್ತಲೇ ಬೆಳೆದಿರುವವರು. ಹೀಗೆ ಅವರಂತೆಯೇ ಗ್ರಾಮಿಣ ಪ್ರದೇಶದ ಅನೇಕ ಉತ್ಸಾಹಿ ಅಭಿನಯಗಾರರು ಜೀವನದಲ್ಲಿ ಒಂದು ಬಾರಿಯಾದರೂ ಮುಖಕ್ಕೆ ಬಣ್ಣ ಹಚ್ಚಲೇಬೇಕು ಎನ್ನುವವರೇ ಹೆಚ್ಚು ಅಂತವರಲ್ಲಿ ಬಳ್ಳಾರಿ ಜಿಲ್ಲೆಯ ಹಂಪಾಪಟ್ಟಣ ಗ್ರಾಮದ ಎಲೆಗಾರ ಕುಬೇರಪ್ಪ ಒಬ್ಬರು.

ಕುಬೇರಪ್ಪನವರು ಚಿಕ್ ಕವಯಸ್ಸಿನಿಂದಲೂ ಶಾಲೆ, ಕಾಲೇಜಿನ ಓದಿನ ಜೊತೆಗೆ ಬಣ್ಣ ಹಚ್ಚುವುದು ನಡೆದೇ ಇತ್ತು. ಗ್ರಾಮದಲ್ಲಿ ನಡೆ ಯುತ್ತಿದ್ದ ನಾಟಕಗಳನ್ನು ನೋಡುತ್ತಲೇ ಬೆಳೆದವರು. ನಂತರ ಅವರಲ್ಲಿಯೂ ಅಭಿನಯಿಸುವ ಅಭಿಲಾಸೆ ಹೆಚ್ಚಿತು. ಗ್ರಾಮದ ನಾಟಕ ಮಾಸ್ತರಗಳಾದ ರಾಮಣ್ಣ ಅವರ ಬಳಿ ತನ್ನ ಮಾತು ಗಾರಿಕೆಯಿಂದ ‘ರಕ್ತರಾತ್ರಿ’ ನಾಟಕದಲ್ಲಿ ಒಂದು ಪಾತ್ರವನ್ನು ಗಿಟ್ಟಿಸಿಕೊಂಡರು.

ಇವರ ಅಭಿನಯವನ್ನು ಕಂಡ ಮಾಸ್ತರ ರಾಮಣ್ಣ ಬೆನ್ನು ತಟ್ಟಿದರು. ಈ ಪ್ರೋತ್ಸಾಹವೇ ಕುಬೇರಪ್ಪನಿಗೆ ಬಣ್ಣದ ಲೋಕಕ್ಕೆ ಹಂಬಲಿಸುವಂತೆ ಮಾಡಿತು. ನಂತರ ಹೆಸರಾಂತ ನಾಟಕಗಳಾದ ಉದಾಹರಣೆಗೆ ಗೌಡ್ರು ಗದ್ದಲ, ಭೂಲೋಕದ ಯಮರಾಜ ನಾಟಕದಲ್ಲಿ ಖಳನಾಯಕ ಪಾತ್ರಕ್ಕೆ ಜೀವತುಂಬಿದ್ದಾರೆ, ಇವರು ನಾಟಕದಲ್ಲಿ ಖಳ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾನೆ ಎಂದರೆ ಅದರ ಗತ್ತೇ ಬೇರೆ ಎನ್ನುತ್ತಾರೆ ಗ್ರಾಮಸ್ಥರು.

ಕಲಿಯುಗದ ಶಕುನಿ ನಾಟಕದಲ್ಲಿ ಬಣ್ಣ ಅಚ್ಚಿ ಖಳನಾಯಕನ ಪಾತ್ರದಲ್ಲಿ ಅಭಿನಯಿಸಿದರೆ ಪ್ರೇಕ್ಷಕರ ಸಿಳ್ಳೆ, ಕೇಕೆಗಳು ಸುರಿಮಳೆಗಯ್ಯುತ್ತಿದ್ದವು. ಕುಬೇರಪ್ಪ ವೃತ್ತಗೆ ಸೇರಿಕೊಂಡರೂ ಬಣ್ಣ ಹಚ್ಚುವುದನ್ನು ಮರೆತಿಲ್ಲ. ಐವತ್ತು ವಯಸ್ಸು ದಾಟಿದರೂ ನಾಟಕದಲ್ಲಿ ಅಭಿನಯಿಸುವ ಹಂಬಲ ಹೆಚ್ಚಾಗುತ್ತಿದೆ.

ನನ್ನ ಮನಸ್ಸಿಗೆ ಹೆಚ್ಚು ಮುದ ನೀಡುವುದು ನಾಟಕದಲ್ಲಿ ಅಭಿನಯಿ ಸುದೇ ಎನ್ನುತ್ತಾರೆ ಕುಬೇರಪ್ಪ. ಅವರ ಉಸಿರಲ್ಲಿ ನಾಲ್ಗೆಯಲ್ಲಿ ನಾಟಕದ ತುಣುಕುಗಳು ರಾರಾಜಿಸುತ್ತಿವೆ. ಹಳೆಗನ್ನಡದ ನಾಟಕದ ಪದಗಳನ್ನು ಸರಾಗವಾಗಿ ಪಟಪಟನೇ ಹೇಳುವುದು ಕುಬೇರಪ್ಪನಿಗೆ ಸುಲಭದ ಕೆಲಸ. ಹೀಗೆ ಗ್ರಾಮೀಣ ಅಭಿನಯಗಾರ ಕುಬೇರಪ್ ಪನಿಗೆ ಐವತ್ತರ ವಯಸ್ಸಿನಲ್ಲೂ ನಾಟಕ ದಲ್ಲಿ ಅಭಿನಯಿಸುವ ಉತ್ಸಾಹ ಕ್ಷೀಣಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.