ಶನಿವಾರ, ಏಪ್ರಿಲ್ 17, 2021
22 °C

ನಾಟಿ ಚಿಕಿತ್ಸೆಯ ವೈಜ್ಞಾನಿಕ ವಿಶ್ಲೇಷಣೆ ಆಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಗಲೂ ಪಾರ್ಶ್ವವಾಯು, ಜಾಂಡಿಸ್, ತಲೆ ಶೂಲೆ, ಹಾವು ಕಡಿತ  ಮೊದಲಾದುವುಗಳಿಗೆ ಹಳ್ಳಿಯ ನಾಟಿ ವೈದ್ಯರು ಪರಿಣಾಮಕಾರಿ ಚಿಕಿತ್ಸೆ ನೀಡುತ್ತಿದ್ದಾರೆ. ನಮ್ಮ ಮನೆತನ ಸುಮಾರು 200 ವರ್ಷಗಳಿಂದ ನಾಟಿ ಚಿಕಿತ್ಸೆ ನೀಡುತ್ತಾ ಬಂದಿದೆ.

 

ಈಗಿನ ತಲೆಮಾರಿನ ಜನತೆ ಅಲೋಪಥಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲು ಸಿದ್ಧ. ಆದರೆ ನಾಟಿ ವೈದ್ಯ ಪದ್ಧತಿ ಬಗ್ಗೆ ಅವರಿಗೆ ಅಲರ್ಜಿ. ಆದರೆ ಆಧುನಿಕ ಚಿಕಿತ್ಸೆ ಫಲಕಾರಿ ಆಗದಿದ್ದರೆ ಮಾತ್ರ ನಾಟಿ ವೈದ್ಯರಲ್ಲಿಗೆ ಬರುತ್ತಾರೆ. ಗಿಡಮೂಲಿಕೆಗಳ ಬಗ್ಗೆ ಈಗಿನ ನಾಟಿ ವೈದ್ಯರ ಜ್ಞಾನವೂ ಕಡಿಮೆ ಆಗುತ್ತಿದೆ.

 

ನಾಟಿವೈದ್ಯರ ಕುಟುಂಬದ ಮಕ್ಕಳೇ ನಾಟಿ ವೈದ್ಯ ಪದ್ಧತಿಯನ್ನು ಕಲಿಯಲು ಮುಂದೆ ಬರುತ್ತಿಲ್ಲ. ಹಾಗಾಗಿ ಈ ಪಾರಂಪರಿಕ ಜ್ಞಾನದ ಬಗ್ಗೆಯೂ ಅಧ್ಯಯನ ನಡೆಸಿ, ದಾಖಲಿಸಬೇಕು. ನಾಟಿ ಚಿಕಿತ್ಸೆಯ ಪರಿಣಾಮದ ಬಗ್ಗೆ  ವೈಜ್ಞಾನಿಕ ವಿಶ್ಲೇಷಣೆಯೂ ನಡೆಯಬೇಕು~

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.