ಶುಕ್ರವಾರ, ಏಪ್ರಿಲ್ 23, 2021
31 °C

ನಾಡಿನ ಏಕತೆ ಕಾಪಾಡಿ : ಬಿಇಒ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರಟಗೆರೆ: ವೈವಿಧ್ಯಮಯ ನಾಡಿನಲ್ಲಿ ಏಕತೆ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ ಎಂದು ಬಿಇಒ ಟಿ.ಎಸ್. ಆಂಜಿನಪ್ಪ                      ಅಭಿಪ್ರಾಯಪಟ್ಟರು.ಪಟ್ಟಣದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಲಾಗಿದ್ದ ಪಟ್ಟಣದ ಸರ್ಕಾರಿ ಹಾಗೂ ಅನುದಾನಿತ ಎಲ್ಲ ಪ್ರಾಥಮಿಕ ಶಾಲೆಗಳ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಶೈಕ್ಷಣಿಕ ಪ್ರಗತಿಗೆ ಶಿಕ್ಷಕರೇ ಮೂಲ ಕಾರಣರಾಗಿದ್ದು, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಪಾತ್ರ ಬಹು ಮುಖ್ಯ ಎಂದರು.ತಹಶೀಲ್ದಾರ್ ಬಿ.ಆಂಜನೇಯಶೆಟ್ಟಿ, ನಿವೃತ್ತ ಪ್ರಾಚಾರ್ಯ ಎಚ್.ವೀರಭದ್ರಯ್ಯ, ತಾ.ಪಂ. ಅಧ್ಯಕ್ಷೆ ಸುಧಾ ಹನುಮಂತರಾಯಪ್ಪ, ಪ.ಪಂ.ಅಧ್ಯಕ್ಷೆ ಸುಮಾರಾಜು, ಜಿ.ಪಂ.ಸದಸ್ಯೆ ದಾಕ್ಷಾಯಿಣಿ ರಾಜಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.ತಾ.ಪಂ. ಇಒ ಎಂ.ಎ.ಗೋಪಾಲ್, ಜಿ.ಪಂ.ಸದಸ್ಯೆ ಪ್ರೇಮಮಹಾಲಿಂಗಪ್ಪ, ತಾ.ಪಂ.ಸದಸ್ಯರಾದ ಎಚ್.ವಿ. ಪ್ರಕಾಶ್, ಸಾಕರಾಜು, ಪ.ಪಂ.ಸದಸ್ಯ ನಯಾಜ್, ಸಮನ್ವಯ ಅಧಿಕಾರಿ ಗಂಗಾಧರ್, ಹನುಮಮೂರ್ತಿ, ಪಾತಲಿಂಗಪ್ಪ, ಮುಖ್ಯಶಿಕ್ಷಕ ಎಂ.ರಾಜಶೇಖರ್, ಕೃಷ್ಣಪ್ಪರೆಡ್ಡಿ  ಭಾಗವಹಿಸಿದ್ದರು.ಆಹಾರ ಭದ್ರತೆ: ನಬಾರ್ಡ್ ಯೋಜನೆ

ಗುಬ್ಬಿ: ಕೃಷಿ ಉತ್ಪನ್ನದ ಹೆಚ್ಚಳದ ಮೂಲಕ ಆಹಾರ ಭದ್ರತೆ ಒದಗಿಸುವ ಉದ್ದೇಶದಿಂದ ನಬಾರ್ಡ್ ಜಂಟಿ ಬಾಧ್ಯತಾ ಗುಂಪುಗಳನ್ನು ರೂಪಿಸಿದೆ ಎಂದು ನಬಾರ್ಡ್‌ನ ಡಿಡಿಎಂ ಸಿ.ಜಿ.ಅನಂತಕೃಷ್ಣ ತಿಳಿಸಿದರು.ಸಾಧನಾ ಎಜುಕೇಷನ್ ಅಂಡ್ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಎಸ್‌ಬಿಎಂ ಗುಬ್ಬಿ ಶಾಖೆ ಹಾಗೂ ನಬಾರ್ಡ್ ವತಿಯಿಂದ ಈಚೆಗೆ ಇಲ್ಲಿ ಆಯೋಜಸಿದ್ದ ಸ್ವಸಹಾಯ ಸಂಘ ಹಾಗೂ ಜೆಎಲ್‌ಜಿ ಸಂಘಗಳಿಗೆ ಸಾಲ ಜೋಡಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷಿಯೇತರ ವಲಯದಲ್ಲಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಉದ್ದಿಮೆದಾರರಿಗೆ ಸಮರ್ಪಕ ಸಾಲ ಯೋಜನೆ ಸಹ ನೀಡಲಾಗುವುದು ಎಂದರು.ಎಸ್‌ಬಿಎಂ ವಲಯ ಮುಖ್ಯ ವ್ಯವಸ್ಥಾಪಕ ನರಹರಿ, ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ಸತ್ಯನ್ ಮಾತನಾಡಿದರು. ಎಸ್‌ಬಿಎಂ ವ್ಯವಸ್ಥಾಪಕ ನರಸಿಂಗರಾವ್ ಕಾರ್ಯಕ್ರಮ ಉದ್ಘಾಟಿಸಿದರು. ತಾಲ್ಲೂಕು ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಅಧಿಕಾರಿ ಎಂ.ಮುದ್ದಣ, ಫೀಲ್ಡ್ ಆಫೀಸರ್ ನರಸಿಂಹಮೂರ್ತಿ, ಸಾಧನಾ ಸಂಸ್ಥೆಯ ಕಾರ್ಯದರ್ಶಿ ವೀರೇಶ್, ನವಕೋಟಿ ಇತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.