ಎಣಿಸಲು ಬರುವ ನಾಮಪದಗಳು (Countable Nouns)
ನಿಸರ್ಗದಲ್ಲಿ ಒಂದೊಂದು ಜಾತಿಗೆ ಸೇರಿದ ಅನೇಕ ಜೀವಿಗಳಿವೆ. ಬರಿಗಣ್ಣಿಗೆ ಕಾಣುವಂತಹ ಪ್ರಾಣಿಗಳು ಕೆಲವಾದರೆ, ಕಣ್ಣಿಗೆ ಕಾಣದಿರುವ ಅನೇಕ ಜೀವಿಗಳಾಗಿರಬಹುದು. ಭಗವಂತನ ಸೃಷ್ಟಿಯಲ್ಲಿ ಲೆಕ್ಕವಿಲ್ಲದಷ್ಟು ಒಂದೊಂದು ಜಾತಿಗೆ ಸೇರಿದ ಅನೇಕ ನಿರ್ಜೀವ ವಸ್ತುಗಳಿವೆ. ಇದಲ್ಲದೆ ಯಾವ ರೂಪವನ್ನು ಪಡೆಯದಿರುವ ಭಾವನೆಗಳು, ಆಲೋಚನೆಗಳು, ಅನಿಸಿಕೆಗಳು ಹಾಗೂ ಕಲ್ಪನೆಗಳು ಇರಬಹುದು. ಒಂದು ಸಾಮ್ಯತೆ ಏನೆಂದರೆ ಇವೆಲ್ಲವುಗಳನ್ನು ಎಣಿಸಲು ಸಾಧ್ಯ. ಆದ್ದರಿಂದ ಎಣಿಸಲು ಬರುವ ಯಾವುದನ್ನು ಕೂಡ ‘ಎಣಿಸಲು ಬರುವ ನಾಮಪದ/Countable Nouns’ ಗಳೆಂದು ಕರೆಯುತ್ತಾರೆ.

ವಾಕ್ಯವೊಂದರಲ್ಲಿ ಎಣಿಸಲು ಬರುವ ನಾಮಪದವೊಂದು ಏಕವಚನ ರೂಪದಲ್ಲಿದ್ದರೆ ಆ ಪದದ ಮೊದಲಿಗೆ A ಮತ್ತು An ಅಥವಾ The ಎಂಬ ಉಪಪದವು ಬರುತ್ತದೆ. ಇದು ಎಲ್ಲಾ ಸಂದರ್ಭಗಳಲ್ಲಿ ಈ ಉಪಪದಗಳು ನಾಮಪದದ ಮೊದಲಿಗೆ ಕೆಲವು ಷರತ್ತುಗಳಾನುಸಾರವಾಗಿ ಬರಲಿಕ್ಕಿಲ್ಲ.

ಹಾಗಾಗಿ ಈ ವಿಷಯವನ್ನು ಗಂಭೀರವಾಗಿ ತಿಳಿದುಕೊಳ್ಳಬೇಕಾಗಿದೆ. ಯಾವ ಯಾವ ಸಂದರ್ಭಗಳಲ್ಲಿ ಎಣಿಸಲು ಬರುವ ಏಕವಚನ ರೂಪದ ನಾಮಪದದ ಮೊದಲಿಗೆ ಉಪಪದಗಳು ಬರಬೇಕೊ ಅಥವ ಬರಕೂಡದೊ ಎನ್ನುವುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವುದು ಅತಿ ಅವಶ್ಯ (ಮುಂಬರುವ ಪಾಠಗಳಲ್ಲಿ ಈ ವಿಷಯದ ಕುರಿತು ದೀರ್ಘವಾಗಿ ವಿವರಿಸಲಾಗುವುದು). ಎಣಿಸಲು ಬರುವ ನಾಮಪದಗಳನ್ನು ರೂಢನಾಮಗಳಲ್ಲಿ ಸಂಯುಕ್ತ ನಾಮಪದಗಳಲ್ಲಿ ಸಮೂಹ ವಾಚಕ ನಾಮಪದಗಳಲ್ಲಿ ಹಾಗೂ ಭಾವಸೂಚಕ ನಾಮಪದಗಳಲ್ಲೂ ಕೂಡ ಕಾಣಬಹುದಾಗಿದೆ.

ಉದಾಹರಣೆಗಳು: ವಿಳಾಸ/Address, ವಕೀಲ/Advocate, ಮಗು/Baby, ಹುಡುಗ/Boy, ಪಂಜರ/Cage, ಬೆಕ್ಕು/Cat, ಕುರ್ಚಿ/Chair, ಪುತ್ರಿ/Daughter, ವೈದ್ಯ/ Doctor, ನಾಯಿ/ Dog

ಎಣಿಸಲು ಬಾರದ ನಾಮಪದಗಳು (Uncountable Nouns)
ಕೆಲವು ವಸ್ತುಗಳನ್ನು ಎಣಿಸಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಮನಸ್ಸಿನಲ್ಲಿ ಮೂಡುವ ಮಂಥನಗಳಲ್ಲಿ ಜನ್ಮತಾಳುವ ಕೆಲವು ಭಾವನೆಗಳಲ್ಲಿ ಕೆಲವೊಂದನ್ನು ಎಣಿಸಲು ಬರುವುದಿಲ್ಲ. ಭಾವಸೂಚಕ ನಾಮಪದಗಳಲ್ಲಿ ಅಂತಹ ಕೆಲವೊಂದು ಎಣಿಸಲು ಬರುವ ನಾಮಪದಗಳಿವೆ. ಇಂತಹ ನಾಮಪದಗಳನ್ನು ಎಣಿಸಲು ಬಾರದ ನಾಮಪದಗಳೆಂದು ಕರೆಯುತ್ತಾರೆ. ವಾಕ್ಯದಲ್ಲಿ ಇಂತಹ ನಾಮಪದಗಳಿದ್ದಾಗ ಅವುಗಳ ಮೊದಲಿಗೆ ಉಪಪದಗಳು ಬರುವುದಿಲ್ಲ. ಈ ವರ್ಗಕ್ಕೆ ಸೇರಿದ ನಾಮಪದಗಳಿಗೆ ಬಹುವಚನ ರೂಪವಿರುವುದಿಲ್ಲ.

ಉದಾಹರಣೆಗಳು: ಹಾಲು/Milk, ಎಣ್ಣೆ/Oil, ಚಿನ್ನ/Gold, ಅಕ್ಕಿ/Rice, ಸಕ್ಕರೆ/Sugar, ನೀರು/Water.

ಸಮೂಹ ವಾಚಕ ನಾಮಪದಗಳು (Collective Nouns)
ವ್ಯಕ್ತಿಗಳ, ಪ್ರಾಣಿಗಳ ಅಥವಾ ವಸ್ತುಗಳ ಸಮೂಹವನ್ನು ಅಥವಾ ವರ್ಗವನ್ನು ಸೂಚಿಸುವ ಅಥವಾ ಪ್ರತಿನಿಧಿಸುವ ಹೆಸರನ್ನು ಸಮೂಹವಾಚಕ ನಾಮಪದವೆಂದು ಕರೆಯಲಾಗುತ್ತದೆ. ನಿರ್ದಿಷ್ಟ ಸಂಖ್ಯೆಯ ಅಥವಾ ಅನಿರ್ದಿಷ್ಟ ಸಂಖ್ಯೆಯ ವ್ಯಕ್ತಿಗಳನ್ನಾಗಲೀ, ಪ್ರಾಣಿಗಳನ್ನಾಗಲೀ ಅಥವಾ ವಸ್ತುಗಳನ್ನಾಗಲೀ ಒಟ್ಟಾಗಿ ಅಥವಾ ಒಂದು ಘಟಕದಂತೆ ಪರಿಗಣಿಸಿಕೊಂಡು ಹೇಳುವ ಹೆಸರೇ ಸಮೂಹವಾಚಕ ನಾಮಪದವಾಗಿರುತ್ತದೆ.

ಉದಾಹರಣೆಗಳು: ಸೈನ್ಯ/ಸೈನಿಕರದಳ/ An army, ಮನೆಗಳ ಗುಂಪು/ A block, , ತಂಡ/ A batch, ಸಮಿತಿ/A committee, ದನಕರುಗಳು/ A cattle, ವರ್ಗ/ತರಗತಿ/A class, ಜನಸಮೂಹ/ A crowd ಸಂಸಾರ/ಕುಟುಂಬ/ A family, ಹಡಗು ಪಡೆ/ A fleet, ಕುರಿ ಮಂದೆ/ A flock, ಮಂದೆ/ಹಿಂಡು/A heard, ನ್ಯಾಯಾಧೀಶರ ಗುಂಪು/A judge, ದೊಂಬಿ/ಗಲಭೆಯಗುಂಪು/A mob, ಯಂತ್ರ ಸಮೂಹ/A machinery, ಒಂದೇ ದೇಶದ ಜನತೆ/ದೇಶ/ ರಾಷ್ಟ್ರ/A nation, ನೌಕಾದಳ /A navy, ಲೋಕಸಭೆ/A parliament, ಕೋಳಿಗುಂಪು/A poultry, ಆಟಗಾರರ ತಂಡ /A team.

ಮೇಲಿನ ಉದಾಹರಣೆಗಳನ್ನು ಗಮನಿಸಿದಾಗ ತಿಳಿಯುವುದೇನೆಂದರೆ ಪ್ರತಿ ನಾಮಪದದ ಹಿಂದೆ A ಅಥವಾ An ಎಂಬ ಉಪಪದ ಇದೆ. ಈಗಾಗಲೇ ನಿಮಗೆ ಗೊತ್ತಿರುವಂತೆ ಎಣಿಸಲು ಬರುವ ನಾಮಪದದ ಹಿಂದೆ A ಅಥವಾ An ಎಂಬ ಉಪಪದ ಬಂದರೆ ಆ ನಾಮಪದವು ಏಕವಚನ ರೂಪದಲ್ಲಿದೆ ಎಂದು ಖಚಿತವಾಗುತ್ತದೆ.

ಮೇಲಿನ ನಾಮಪದಗಳೆಲ್ಲವು ಸಮಾನ ಅಂಶಗಳನ್ನು ಹೊಂದಿದ ವ್ಯಕ್ತಿ, ಪ್ರಾಣಿ ಮತ್ತು ನಿರ್ಜೀವ ವಸ್ತುಗಳ ಗುಂಪುಗಳಾಗಿವೆ. ಈ ಕಾರಣಕ್ಕಾಗಿ ಈ ರೂಪದ ನಾಮಪದವನ್ನು ಬಹುವಚನವೆಂದು ತಿಳಿಯದೆ ಏಕವಚನ ಎಂದು ತಿಳಿದು ವಾಕ್ಯದಲ್ಲಿ ಅದನ್ನು ಕರ್ತೃ ರೂಪದಲ್ಲಿ ಕಂಡಾಗ ಏಕವಚನ ರೂಪದ ಕರ್ತೃವೆಂದು ತಿಳಿದು ಕ್ರಿಯಾಪದದ ಕಾಲಕ್ಕೆ ಅನುಗುಣವಾಗಿ ಕ್ರಿಯಾಪದವು ರೂಪಗೊಳ್ಳುತ್ತದೆ. ಸಮಾನ ಅಂಶಗಳನ್ನು ಹೊಂದಿರುವ ಗುಂಪೊಂದನ್ನು ಒಂದು ಘಟಕ ಎಂದು ತಿಳಿಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.