ಬುಧವಾರ, ಮಾರ್ಚ್ 3, 2021
25 °C

ನಾಯಕನಾಗಿ ದೋನಿ 300 ಪಂದ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಯಕನಾಗಿ ದೋನಿ 300 ಪಂದ್ಯ

ಮೆಲ್ಬರ್ನ್‌ (ಪಿಟಿಐ): ಭಾರತ ತಂಡದ ನಾಯಕನಾಗಿ 300 ಪಂದ್ಯಗಳನ್ನು ಆಡಿದ ಕೀರ್ತಿ ಮಹೇಂದ್ರ ಸಿಂಗ್‌ ದೋನಿ ಪಾಲಾಯಿತು.ದೋನಿ 60 ಟೆಸ್ಟ್‌, 189 ಏಕದಿನ ಮತ್ತು 51 ಅಂತರರಾಷ್ಟ್ರೀಯ ಟ್ವೆಂಟಿ–20 ಪಂದ್ಯಗಳಿಗೆ ತಂಡವನ್ನು ಮುನ್ನಡೆಸಿದ್ದರು.ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌ 324 ಮತ್ತು ನ್ಯೂಜಿಲೆಂಡ್‌ನ ಸ್ಟೀಫನ್‌ ಫ್ಲೆಮಿಂಗ್‌ 303  ಪಂದ್ಯಗಳಿಗೆ ನಾಯಕರಾಗಿ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ.ಪಿಐಎಲ್‌ ಸಲ್ಲಿಸಬೇಕು: ‘ನನ್ನ ನಾಯಕತ್ವವನ್ನು ಪರಾಮರ್ಶಿಸ ಬೇಕಾ ದರೆ ನ್ಯಾಯಾಧೀಶರಿಗೆ ಪಿಐಎಲ್‌ ಸಲ್ಲಿಸಬೇಕೇನೋ’ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್‌ ದೋನಿ ಪತ್ರಿಕಾಗೋಷ್ಠಿಯಲ್ಲಿ ಹೀಗೆ ಹೇಳಿದರು.ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯ ದಲ್ಲಿ ಸೋಲು ಅನುಭವಿಸಿದ ಬಳಿಕ ಮಾತನಾಡಿದ ಅವರು, ‘ಭಾರತ ತಂಡದ ನಾಯಕನಾಗಿ ನನ್ನ ಆಟದ ಬಗ್ಗೆ ವಿಮರ್ಶೆ ಮಾಡಿಕೊಳ್ಳಲೇಬೇಕು. ಇದ ಕ್ಕಾಗಿ ಪಿಐಎಲ್‌ ಸಲ್ಲಿಸಬೇಕು’ ಎಂದು ನಗೆ  ಅರಳಿಸಿದರು.ಬಳಿಕ ಗಂಭೀರವಾಗಿ ಮಾತು ಆರಂಭಿಸಿದ ದೋನಿ ‘ತಂಡದ ಬೌಲಿಂಗ್‌ ಸಾಮರ್ಥ್ಯ ಕುಸಿಯುತ್ತಿರುವು ದಕ್ಕೆ ಅನುಭವದ ಕೊರತೆ ಮಾತ್ರ ಕಾರಣ ಅಲ್ಲ. ಬೌಲಿಂಗ್‌ ಮತ್ತು ಫೀಲ್ಡಿಂಗ್ ವಿಭಾಗದ ದೌರ್ಬಲ್ಯವೂ ಕಾರಣ’ ಎಂದರು.‘ಇಶಾಂತ್‌ ಶರ್ಮಾ ಸಾಕಷ್ಟು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಆಸ್ಟ್ರೇಲಿಯಾದ ನೆಲದಲ್ಲಿಯೂ ಹೆಚ್ಚು ಬಾರಿ ಆಡಿದ ಅನುಭವ ಹೊಂದಿದ್ದಾರೆ. ಆದರೂ ಈಗ ಸ್ಥಿರವಾಗಿ ಆಡುತ್ತಿಲ್ಲ. ಉಮೇಶ್‌ ಯಾದವ್‌ ಆಗಾಗ ಮಿಂಚಿ ಮರೆಯಾಗುತ್ತಾರೆ. ಇದರಿಂದ ಪ್ರತಿಯೊಬ್ಬ ಆಟಗಾರನ ಬೆಳವಣಿಗೆ ಯನ್ನು ನಾಯಕ ಗಮನಿಸಬೇಕಾಗುತ್ತದೆ’ ಎಂದು ದೋನಿ ಅಭಿಪ್ರಾಯಪಟ್ಟಿದ್ದಾರೆ.‘ಮೇಲಿನ ಕ್ರಮಾಂಕದ ಬ್ಯಾಟ್ಸ್‌ ಮನ್‌ಗಳ ಶ್ರಮವನ್ನು ಶ್ಲಾಘಿಸಬೇಕು. ರೋಹಿತ್‌ ಶರ್ಮಾ ಮೊದಲ ಎರಡು ಪಂದ್ಯಗಳಲ್ಲಿ ಶತಕ ಬಾರಿಸಿದ್ದರು. ವಿರಾಟ್‌ ಕೊಹ್ಲಿ ಸ್ಥಿರವಾಗಿ ಆಡುತ್ತಿದ್ದಾರೆ’ ಎಂದು ದೋನಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.