ಗುರುವಾರ , ಮೇ 6, 2021
33 °C

ನಾಯರ್ ಅರ್ಜಿ ವಜಾ: ಕೇಂದ್ರ ಸರ್ಕಾರ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಚ್ಚಿ (ಪಿಟಿಐ): ಇಸ್ರೋ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ಅರ್ಜಿಯನ್ನು ವಜಾಗೊಳಿಸುವಂತೆ ಶನಿವಾರ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ)ಯನ್ನು ಕೋರಿದ ಕೇಂದ್ರವು, ಅಂತರಿಕ್ಷ್-ದೇವಾಸ್ ಒಪ್ಪಂದದಲ್ಲಿನ ಲೋಪದೋಷ ಮತ್ತು ಅವ್ಯವಹಾರಗಳಲ್ಲಿ ಅವರ ಪಾತ್ರವಿದೆ ಎಂದು ಹೇಳಿದೆ.ಎರಡು ಉನ್ನತ ಮಟ್ಟದ ಸಮಿತಿ ಸಲ್ಲಿಸಿರುವ ಸತ್ಯಶೋಧನಾ ವರದಿಗಳ ಆಧಾರದಲ್ಲಿ ಕ್ರಮ ಕೈಗೊಳ್ಳುವುದಾಗಿಯೂ ಸರ್ಕಾರ ಸ್ಪಷ್ಟಪಡಿಸಿದೆ.ವಿವಾದಿತ ಅಂತರಿಕ್ಷ್-ದೇವಾಸ್ ಒಪ್ಪಂದಲ್ಲಿ ಪಾತ್ರವಿರುವುದಾಗಿ ಆರೋಪಿಸಿ ತಮ್ಮ ಮತ್ತು ಇತರ ಮೂವರು ವಿಜ್ಞಾನಿಗಳು ಯಾವುದೇ ಸರ್ಕಾರಿ ಹುದ್ದೆಗಳನ್ನು ಅಲಂಕರಿಸದಂತೆ ನಿರ್ಬಂಧಿಸಲು ಸರ್ಕಾರ ಕೈಗೊಂಡ ಕ್ರಮವನ್ನು ಪ್ರಶ್ನಿಸಿ ಮತ್ತು ಈ ನಿರ್ಧಾರವನ್ನು ರದ್ದುಪಡಿಸಲು ಕೋರಿ ನಾಯರ್ ಕಳೆದ ತಿಂಗಳು `ಕ್ಯಾಟ್~ ಮೊರೆ ಹೋಗಿದ್ದರು.`ನಾಯರ್ ತಮ್ಮ ವಿರುದ್ಧ ನಿಷೇಧ ಆದೇಶ ಹೊರಬಿದ್ದ ದಿನದಿಂದಲೂ ಸರ್ಕಾರ, ಬಾಹ್ಯಾಕಾಶ ಇಲಾಖೆ (ಡಿಓಎಸ್) ಹಾಗೂ ಅದರ ಕಾರ್ಯದರ್ಶಿ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಸ್ವತಃ ಬೇಜವಾಬ್ದಾರಿತನದ ನಡವಳಿಕೆ ತೋರಿದ್ದಾರೆ~ ಎಂದೂ `ಕ್ಯಾಟ್~ ವಿಚಾರಣೆಗೆ ಹಾಜರಾಗಿದ್ದ ಬಾಹ್ಯಾಕಾಶ ಇಲಾಖೆಯ ಉಪಕಾರ್ಯದರ್ಶಿ ರಾಧಾ ಜೈಸಿಂಹ ದೂರಿದರು.`ನಾಯರ್ ನಡವಳಿಕೆಯು ಸರ್ಕಾರವು ಅವರ ಮೇಲಿಟ್ಟಿದ್ದ ವಿಶ್ವಾಸದ ಉಲ್ಲಂಘನೆಯಾಗಿದ್ದು, ಅವರ ತಪ್ಪಿನಿಂದಾಗಿಯೇ ವಿರುದ್ಧದ ಆದೇಶ ಹೊರಬಿದ್ದಿದೆ.ನಾಯರ್ ಬೇಡಿಕೆಯು ಕಾಲ್ಪನಿಕ, ಸುಳ್ಳಿನದು ಹಾಗೂ ಹಾದಿತಪ್ಪಿಸುವಂತಹದ್ದಾಗೊದೆ. ಈಗ ಅವರು ಸರ್ಕಾರಿ ಅಧಿಕಾರಿಯಲ್ಲದ ಕಾರಣ ಅವರ ಅರ್ಜಿಯನ್ನು ವಜಾಗೊಳಿಸಬೇಕು~ ಎಂದು ವಾದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.