ಮಂಗಳವಾರ, ಮೇ 11, 2021
19 °C

ನಾಯಿಗೆ ಕಲ್ಲು ಎಸೆದ ವ್ಯಕ್ತಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಇನ್ನು ಮುಂದೆ ಬೀದಿ ನಾಯಿಗಳಿಗೆ ಕಲ್ಲೆಸೆಯುವ ಮುನ್ನ ಒಮ್ಮೆ ಯೋಚಿಸಿ. ಯಾಕೆಂದರೆ ನಿಮ್ಮ ಈ ವರ್ತನೆಗೆ 1960ರ ಪ್ರಾಣಿ ಹಿಂಸೆ ತಡೆ ಕಾಯ್ದೆ ಪ್ರಕಾರ ಜೈಲು ಶಿಕ್ಷೆಯಾಗುವ ಸಾಧ್ಯತೆಯೂ ಇದೆ!ಮಧ್ಯರಾತ್ರಿ ಬೊಗಳುತ್ತಿದ್ದ ಬೀದಿ ನಾಯಿಗೆ ಹೊಡೆದು ಅದರ ಕಾಲು ಮುರಿದ ಪರಿಣಾಮ ಇಲ್ಲಿನ ಸೈನಿಕಪುರಿ ವಸತಿ ಸಂಕೀರ್ಣದ ಕಾವಲುಗಾರ ಚಂದ್ರಂ (30) ಎಂಬುವರನ್ನು ಬಂಧಿಸಲಾಗಿದ್ದು ಪ್ರಕರಣ ದಾಖಲಿಸಲಾಗಿದೆ ಮತ್ತು ಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ ಎಂದು ಕುಶೈಗುಡದ ಎಸ್‌ಐರಾಜಶೇಖರ ತಿಳಿಸಿದ್ದಾರೆ.ಪ್ರಾಣಿ ಹಿಂಸೆ ತಡೆ ಕಾಯ್ದೆಯ ಪರಿಚ್ಛೇದ 11(0)ರ ಅಡಿಯಲ್ಲಿ ಚಂದ್ರಂ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಸೋಮವಾರ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಕಾಯ್ದೆ ಪ್ರಕಾರ ಆರೋಪಿಗೆ ಗರಿಷ್ಠ 3 ತಿಂಗಳ ಸಜೆ, 150 ರೂ ದಂಡ, ನಾಯಿಯ ಚಿಕಿತ್ಸೆಯ ಖರ್ಚು ನೀಡುವಂತೆ ಕೋರ್ಟ್ ಆದೇಶಿಸುವ ಸಾಧ್ಯತೆ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.