ಪ್ಯಾರಿಸ್ (ರಾಯಿಟರ್ಸ್/ ಐಎ ಎನ್ಎಸ್): ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗ ದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಸ್ವಿಟ್ಜರ್ ಲೆಂಡ್ನ ಸ್ಟಾನಿಸ್ಲಾಸ್ ವಾವ್ರಿಂಕ ಸೋಮವಾರ ಪ್ರಕಟವಾಗಿರುವ ಎಟಿಪಿ ನೂತನ ವಿಶ್ವ ರ್ಯಾಂಕಿಂಗ್ನಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.

ಭಾನುವಾರ ನಡೆದ ಫೈನಲ್ ಹೋರಾಟದಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ಗೆ ಆಘಾತ ನೀಡಿದ್ದ ವಾವ್ರಿಂಕ ಫ್ರೆಂಚ್ ಓಪನ್ನಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದ ಹಿರಿಮೆಗೆ ಪಾತ್ರರಾಗಿದ್ದರು. ಈ ಗೆಲುವಿನೊಂದಿಗೆ ಈ ಆಟಗಾರ ಒಟ್ಟು ಪಾಯಿಂಟ್ಸ್ ಅನ್ನು 5,835ಕ್ಕೆ ಹೆಚ್ಚಿಸಿಕೊಂಡಿರುವ ಜತೆಗೆ ಐದು ಸ್ಥಾನ ಮೇಲೇರಿ ಈ ಸಾಧನೆ ಮಾಡಿದ್ದಾರೆ.

ಫೈನಲ್ನಲ್ಲಿ ಸೋಲು ಕಂಡಿದ್ದ ನೊವಾಕ್ ಜೊಕೊವಿಚ್ ಅಗ್ರ ಸ್ಥಾನ ಕಾಪಾಡಿಕೊಂಡಿದ್ದಾರೆ. ಅವರ ಖಾತೆ ಯಲ್ಲಿ 13,845 ಪಾಯಿಂಟ್ಸ್ಗಳಿವೆ. ಸ್ವಿಟ್ಜರ್ಲೆಂಡ್ನ ರೋಜರ್ ಫೆಡರರ್ (9,415), ಬ್ರಿಟನ್ನ ಆ್ಯಂಡಿ ಮರ್ರೆ (7040) ಮತ್ತು ಜಪಾನ್ನ ಕೀ ನಿಶಿ ಕೋರಿ (5570) ಕ್ರಮವಾಗಿ ಎರಡು, ಮೂರು ಮತ್ತು ಐದನೇ ಸ್ಥಾನಗಳಲ್ಲಿ ದ್ದಾರೆ. ಆದರೆ ಸ್ಪೇನ್ನ ರಫೆಲ್ ನಡಾಲ್ 10ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

ಅಗ್ರ ಸ್ಥಾನದಲ್ಲಿ ಸೆರೆನಾ: ಮಹಿಳೆಯರ ವಿಭಾಗದ ಸಿಂಗಲ್ಸ್ನಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್ ಅಗ್ರ ಸ್ಥಾನವನ್ನು ಇನ್ನಷ್ಟು ಬಲಪಡಿಸಿಕೊಂಡಿದ್ದಾರೆ. ಫ್ರೆಂಚ್ ಓಪನ್ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ 20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳ ಒಡತಿ ಎಂಬ ಶ್ರೇಯ ತಮ್ಮದಾಗಿಸಿ ಕೊಂಡಿರುವ ಅವರು ಒಟ್ಟು 11, 291 ಪಾಯಿಂಟ್ಸ್ ಹೊಂದಿದ್ದಾರೆ.

ಕ್ವಾರ್ಟರ್ ಫೈನಲ್ನಲ್ಲಿ ಸೋಲು ಕಂಡಿದ್ದ ರಷ್ಯಾದ ಮರಿಯಾ ಶರಪೋವಾ ಎರಡು ಸ್ಥಾನ ಕಳೆದುಕೊಂಡು ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ 6,870 ಪಾಯಿಂಟ್ಸ್ಗಳನ್ನು ಗಳಿಸಿ ಈ ಸ್ಥಾನ ಆಕ್ರಮಿಸಿಕೊಂಡಿದ್ದಾರೆ.

ರೊಮೇನಿಯಾದ ಸಿಮೊನಾ ಹಲೆಪ್ (6,130) ಮೂರನೇ ಸ್ಥಾನದಲ್ಲಿದ್ದು, ಡೆನ್ಮಾರ್ಕ್ನ ಕರೋಲಿನ್ ವೋಜ್ನಿಯಾಕಿ (5,000) ಐದನೇ ಸ್ಥಾನ ಹೊಂದಿದ್ದಾರೆ. ಫ್ರೆಂಚ್ ಓಪನ್ನಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ ಸೋಲು ಕಂಡಿದ್ದ ಜೆಕ್ ಗಣರಾಜ್ಯದ ಲೂಸಿ ಸಫರೋವಾ (4,055) ಏಳನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಸಫರೋವಾ ವೃತ್ತಿ ಜೀವನದ ಗರಿಷ್ಠ ರ್ಯಾಂಕಿಂಗ್ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.