ಭಾನುವಾರ, ಮೇ 22, 2022
24 °C

ನಾಳೆ ವ್ಯಾನಿಟಿ ಬ್ಯಾಗ್ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಚಾರಿ ಥಿಯೇಟರ್ ತಂಡದಿಂದ ಶುಕ್ರವಾರ (ಜೂ.8) `ವ್ಯಾನಿಟಿ ಬ್ಯಾಗ್~ ನಾಟಕ ಪ್ರದರ್ಶನವಿದೆ.



ಸಂಚಾರಿ ಥಿಯೇಟರ್ ಪ್ರಯೋಗದ `ವ್ಯಾನಿಟಿ ಬ್ಯಾಗ್~ ವೈದೇಹಿಯ ಕಾವ್ಯಲೋಕದ ವಿವಿಧ ನೆಲೆಗಳನ್ನು ಅನಾವರಣಗೊಳಿಸುತ್ತಾ ಆ ಮೂಲಕ ಹೆಣ್ಣಿನ ಚಿತ್ತಾರದ ಅನೂಹ್ಯ ಸಂಗತಿಗಳನ್ನು ಹೆಣ್ಣಿಗೆ ಮಾತ್ರ ಅನುಭವಗಮ್ಯವಾಗುವ ಹಲವು ಅಮೂರ್ತ ಪ್ರಸಂಗಗಳನ್ನು, ಅವಳ ಭಾವ ಪ್ರಪಂಚದ ಸೂಕ್ಷ್ಮ ನೇಯ್ಗೆಗಳನ್ನು ದೃಶ್ಯ ರೂಪಕದಲ್ಲಿ ನಾಟಕ ಅನಾವರಣಗೊಳಿಸಲಿದೆ.

 

`ನೋಡಬಾರದು ಚೀಲದೊಳಗನು~ ಎನ್ನುವ ವೈದೇಹಿ ಅವರ ಮಾತನ್ನೇ ವಿಸ್ತರಿಸುತ್ತಾ, `ನೋಡಲಾಗದ~ ಆ ಬ್ಯಾಗಿನ ಒಳಗಿರುವ ವಸ್ತು ಪ್ರಪಂಚವನ್ನು ವೈದೇಹಿಯವರ ಕಾವ್ಯಲೋಕದ ಹಲವು ಪ್ರಸಂಗಗಳ ಮೂಲಕ ಪ್ರಸ್ತುತಪಡಿಸಲಾಗುತ್ತದೆ. ವೈದೇಹಿ ಅವರ ಕವನಗಳಲ್ಲಿನ ಕೇಂದ್ರ ಬಿಂದು ಹೆಣ್ಣು.



ವ್ಯಾನಿಟಿ ಬ್ಯಾಗ್‌ನ ರೂಪಕದಲ್ಲಿ ಹೆಣ್ಣಿನ ಅಂತರಂಗದ ಒಳನೋಟಗಳಿಗೆ ಸರ್ಚ್ ಲೈಟ್ ಬೀರಿ, ಹೆಣ್ಣಿನ ವಿಶ್ವರೂಪ ದರ್ಶನ ಮಾಡಿಸುವ ವೈದೇಹಿಯವರ ಪ್ರಯತ್ನವನ್ನು ದೃಶ್ಯರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಸಂಚಾರಿ ಥಿಯೇಟರ್ ತಂಡದ್ದಾಗಿದೆ.



ಒಟ್ಟಾರೆ ನಿತ್ಯ ಕಷ್ಟ ಸುಖಗಳ ಕಡಲಲ್ಲಿ, ನಿತ್ಯ ಸುಡುತಿಹ ಸೂರ್ಯಳಾಗಿ ಪ್ರಜ್ವಲಿಸುತ್ತಿರುವ ಹೆಣ್ಣಿನ ಮನಸ್ಸಿನ ಒಳಲೋಕವನ್ನು ಪ್ರತಿನಿಧಿಸುವ ರೂಪಕವಾದ `ವ್ಯಾನಿಟಿ ಬ್ಯಾಗ್~ನಲ್ಲಿ ವೈದೇಹಿಯ ಎಲ್ಲ ಪ್ರಮುಖ ಕವನಗಳ ಸಾರವನ್ನು ಅಡಗಿಸಿಟ್ಟಿರುವುದು ಈ ರಂಗಪ್ರಯೋಗದ ವಿಶೇಷ. ಮಂಗಳಾ.ಎನ್ ನಾಟಕ ನಿರ್ದೇಶಿಸಿದ್ದಾರೆ.



ಸ್ಥಳ: ರಂಗಶಂಕರ, ಜೆ.ಪಿ.ನಗರ 2ನೇ ಹಂತ. ಸಂಜೆ 7.30. ಟಿಕೆಟ್ ಹಾಗೂ ಮಾಹಿತಿಗೆ: 88843 45569

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.