ಮಂಗಳವಾರ, ಜನವರಿ 21, 2020
19 °C
ಪಿಕ್ಚರ್ ಪ್ಯಾಲೆಸ್

ನಾವೆಲ್ಲಾ ಒಂದೇ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾವೆಲ್ಲಾ ಒಂದೇ

ಆರ್ಕಿಡ್ಸ್‌ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ‘ಇನ್‌ಕ್ರೆಡಿಬಲ್‌ ಇಂಡಿಯಾ’ ಹೆಸರಿನಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರುವ ಅನೇಕ ಕಾರ್ಯಕ್ರಮ ನಡೆಸಿಕೊಟ್ಟರು.28 ರಾಜ್ಯಗಳ ಕಲೆ, ಸಂಸ್ಕೃತಿ, ಸಾಹಿತ್ಯ, ಭಾಷೆ, ಉತ್ಸವ ಹಾಗೂ ನೃತ್ಯಗಳನ್ನು ಒಂದೇ ವೇದಿಕೆಯಲ್ಲಿ ಪ್ರದರ್ಶಿಸಿ ವಿವಿಧತೆಯಲ್ಲಿ ಏಕತೆ ಮಂತ್ರ ಸಾರಿದರು. ಭಾರತೀಯ ಪರಂಪರೆ ಹಾಗೂ ದೇಸಿ ಸೊಗಡನ್ನು ಬಿಂಬಿಸುವ ನೃತ್ಯ, ವಿವಿಧ ರಾಜ್ಯಗಳ ವೇಷಭೂಷಣಗಳು ಈ ಸಮಾರಂಭಕ್ಕೆ ಕಳೆಕಟ್ಟಿದವು.ನಾವೆಲ್ಲರೂ ಒಂದೇ ಎಂಬ ಭಾವೈಕ್ಯ ಸಾರುವ ಪುಟಾಣಿಗಳ ವೈವಿಧ್ಯಮಯ ಪ್ರದರ್ಶನಗಳಿಗೆ ಸಾಕ್ಷಿಯಾಗಿ ಸಾವಿರಾರು ಮಂದಿ ಪ್ರೇಕ್ಷಕರಿದ್ದರು.

ಪ್ರತಿಕ್ರಿಯಿಸಿ (+)