ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗೂಢ ‘ವ್ಯಾಪಂ’ ಹಗರಣ...

ಸುದ್ದಿ ಹಿನ್ನೆಲೆ
Last Updated 5 ಜುಲೈ 2015, 19:30 IST
ಅಕ್ಷರ ಗಾತ್ರ

ಮಧ್ಯಪ್ರದೇಶ ವೃತ್ತಿಪರ ಶಿಕ್ಷಣ ಕೋರ್ಸ್‌ಗಳ ಪ್ರವೇಶ ಮತ್ತು ನೇಮಕಾತಿ ಹಗರಣವು ದಿನೇ ದಿನೇ ಹೆಚ್ಚೆಚ್ಚು ಗೋಜಲಾಗುತ್ತಿದೆ. ಹಗರಣಕ್ಕೆ ಸಂಬಂಧಿ ಸಿದಂತೆ ವರದಿಯಾಗುತ್ತಿರುವ ಅಸಹಜ ಸಾವಿನ ಪ್ರಕರಣಗಳು ಈ ಹಗರಣದ ನಿಗೂಢತೆಗೆ ಕನ್ನಡಿ ಹಿಡಿಯುತ್ತವೆ. ಆರೋಪಿಗಳು, ಮಧ್ಯವರ್ತಿಗಳು, ಸಾಕ್ಷಿಗಳು, ವರದಿ ಮಾಡಲು ಹೋದ ಪತ್ರಕರ್ತ ಸೇರಿದಂತೆ ವರದಿಯಾ ಗಿರುವ ಅಸಹಜ ಸಾವಿನ ಪ್ರಕರಣಗಳ ಸಂಖ್ಯೆ ಈಗ 46 ಮೀರಿದೆ.  ರಸ್ತೆ ಅಪಘಾತ (10), ಆತ್ಮಹತ್ಯೆ (3), ನಿಗೂಢ ಕಾಯಿಲೆ (11) ಮುಂತಾದವು ಈ ಸಾವುಗಳ ಹಿಂದಿನ ಕಾರಣಗಳಾಗಿವೆ.

ದೊಡ್ಡ ಸಂಚಿನ ಭಾಗವಾಗಿಯೇ ಸಾಕ್ಷಿಗಳು ಮತ್ತು ಆರೋಪಿಗಳ ಧ್ವನಿ ಅಡಗಿಸಲಾಗುತ್ತಿದೆ ಎನ್ನುವ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. 2010ರಲ್ಲಿ ನಡೆದ ಪ್ರವೇಶ ಪರೀಕ್ಷೆಯಲ್ಲಿ ಹಗರಣದ ಆರೋಪಿಗಳ ನೆರವಿನಿಂದ ಉತ್ತೀರ್ಣಗೊಂಡಿದ್ದ  ವಿದ್ಯಾರ್ಥಿನಿ ನರ್ಮತಾ ದಾಮೋರ್‌ಳ  (19)  ಶವ ರೈಲ್ವೆ ಹಳಿ ಬಳಿ ಪತ್ತೆಯಾಗಿತ್ತು. ತಮ್ಮ ಮಗಳನ್ನು ಕೊಲೆ ಮಾಡಲಾಗಿದೆ ಎಂದು ನರ್ಮತಾಳ ತಂದೆ ದೂರಿದ್ದಾರೆ.   ಹಣ ಪಾವತಿ ಮಾಡುವ ಬಗ್ಗೆ ಡಾ. ಸಾಗರ್ ಮತ್ತು ನರ್ಮತಾಳ ತಂದೆ ಮಧ್ಯೆ ವಿವಾದ ಉಂಟಾಗಿತ್ತು ಎನ್ನುವುದು ಪೊಲೀಸರು ವಶಪಡಿಸಿಕೊಂಡ ಸಿ.ಡಿಯಲ್ಲಿ ದಾಖಲಾಗಿದೆ.

ಇನ್ನೊಬ್ಬ ವಿದ್ಯಾರ್ಥಿ ತರುಣ್‌ ಮಾಚರ್‌ ಎಂಬಾತ ಕೂಡ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಆತನ ಬೈಕ್‌ಗೆ ಡಿಕ್ಕಿ ಹೊಡೆದ ಅಪರಿಚಿತ ವಾಹನವನ್ನು  ಪತ್ತೆಹಚ್ಚಲು ಪೊಲೀಸರು ವಿಫಲರಾಗಿದ್ದಾರೆ. ಎಸ್‌ಐಟಿ, ಈತನನ್ನು ವಿಚಾರಣೆಗೆ ಗುರಿಪಡಿಸುವ ಮುನ್ನವೇ ಆತನ (ಅಸಹಜ) ಸಾವು ಸಂಭವಿಸಿತ್ತು. ಸ್ವಾಯತ್ತ ಸಂಸ್ಥೆಯಾಗಿರುವ ಮಧ್ಯಪ್ರದೇಶ ವ್ಯವಸಾಯಿಕ್ ಪರೀಕ್ಷಾ ಮಂಡಳಿಯು ನಡೆಸಿರುವ ಪ್ರವೇಶ ಪರೀಕ್ಷೆ ಮತ್ತು ನೇಮಕಾತಿಯು ‘ವ್ಯಾಪಂ’  ( Vyapam - MP Vyavasayik Pariksha Mandal) ಹಗರಣ ಎಂದೇ ಕುಖ್ಯಾತಿ ಪಡೆದಿದೆ.  

ಈ ಹಗರಣದಲ್ಲಿ ಮಾಜಿ ಶಿಕ್ಷಣ ಸಚಿವ ಲಕ್ಷ್ಮೀಕಾಂತ ಶರ್ಮಾ ಸೇರಿದಂತೆ ರಾಜಕಾರಣಿಗಳು, ಹಿರಿಯ ಅಧಿಕಾರಿ ಗಳು, ಉದ್ಯಮಿ ಗಳು ಭಾಗಿಯಾಗಿದ್ದಾರೆ. ವೃತ್ತಿ ಶಿಕ್ಷಣ ಪ್ರವೇಶ, ವೈದ್ಯರು, ಕಾನ್‌ಸ್ಟೆಬಲ್ , ಶಿಕ್ಷಕರು ಮತ್ತಿತರ ಹುದ್ದೆಗಳ ನೇಮ ಕಾತಿಗೆ ಸಂಬಂಧಿ ಸಿದ ಪ್ರವೇಶ ಪರೀಕ್ಷೆಗಳನ್ನು ಈ ಮಂಡಳಿ ನಡೆಸುತ್ತಿದೆ. ಮಧ್ಯವರ್ತಿಗಳು ರಾಜಕಾರ ಣಿಗಳು ಮತ್ತು ಅಧಿಕಾರಿಗಳ ನೆರವಿನಿಂದ ನಡೆಸಿದ ಅಕ್ರಮಗ ಳಿಂದಾಗಿ ಅನರ್ಹರೂ ಕೂಡ ವೈದ್ಯಕೀಯ ಕಾಲೇಜ್ ಪ್ರವೇಶ ಪಡೆಯಲು ಸರ್ಕಾರಿ ನೌಕರಿ ಗಿಟ್ಟಿಸಲು ಸಾಧ್ಯವಾಗಿದೆ.

ವೈದ್ಯ ಪ್ರವೇಶ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಪರವಾಗಿ ಇನ್ನೊಬ್ಬರು ಭಾಗಿಯಾಗಿರುವ ಪ್ರಕರಣಗಳು  ಬಹಿರಂಗವಾಗಿದ್ದ ರಿಂದ ಈ ಹಗರಣವು 2013ರಲ್ಲಿ ಬೆಳಕಿಗೆ ಬಂದಿತು.    ಅಭ್ಯರ್ಥಿಗಳ ಪರವಾಗಿ ಇನ್ನೊಬ್ಬರು ಪರೀಕ್ಷೆಗೆ ಕುಳಿತುಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ 2013ಕ್ಕೂ ಮುಂಚೆಯೇ ಹಲವು ಪ್ರಕರಣಗಳು ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದವು. 2009ರಿಂದಲೇ ಇಂತಹ ಅಕ್ರಮಗಳು ನಡೆಯುತ್ತಲೇ ಬಂದಿವೆ. 2013ರ ಜುಲೈ ತಿಂಗಳಲ್ಲಿ ಇಂದೋರ್ ಪೊಲೀಸರು ಪ್ರಕರಣದ ರೂವಾರಿ ಡಾ. ಜಗದೀಶ್‌ ಸಾಗರ್‌ನನ್ನು ಮುಂಬೈನಲ್ಲಿ ಬಂಧಿಸಿದ ನಂತರ ಹಗರಣವು ಹೆಚ್ಚು ಸುದ್ದಿ ಮಾಡತೊಡಗಿತು. 100 ರಿಂದ 150 ಅನರ್ಹ ವೈದ್ಯರು ಅಕ್ರಮ ಮಾರ್ಗದಲ್ಲಿ ಪದವಿ ಪಡೆದು ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಲು ನೆರವಾಗಿರುವುದಾಗಿ ಸಾಗರ್‌, ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದ.

ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ನಡೆದ ಪರೀಕ್ಷೆಯಲ್ಲಿ ಅರ್ಹತೆ ಇಲ್ಲದ 876 ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿತ್ತು ಎಂದು ವಿಶೇಷ ತನಿಖಾ ತಂಡವೂ ಅಂದಾಜಿಸಿತ್ತು. ವೈದ್ಯಕೀಯ ಸೀಟಿಗಾಗಿ  ₨ 25 ಲಕ್ಷ  ಮತ್ತು ತಮ್ಮ ಬದಲಿಗೆ ಪರೀಕ್ಷೆಗೆ ಕುಳಿತುಕೊಳ್ಳುವವರಿಗೆ ಹಣ ನೀಡಲು  ಮುಂದೆ ಬಂದಿದ್ದ ವಿದ್ಯಾರ್ಥಿಗಳ ಬಗ್ಗೆ ಆರಂಭ ದಲ್ಲಿ ತನಿಖೆ ಕೇಂದ್ರೀಕೃತವಾಗಿತ್ತು.

ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸಲು ಕಾಂಗ್ರೆಸ್‌ ಒತ್ತಾಯಿಸುತ್ತ ಬಂದಿದ್ದರೂ ಈ ಹಕ್ಕೊತ್ತಾಯಕ್ಕೆ ಇದುವರೆಗೂ ಮಾನ್ಯತೆ ಸಿಕ್ಕಿಲ್ಲ. ಹೈಕೋರ್ಟ್‌ ಕೂಡ ಸಿಬಿಐ ತನಿಖೆಗೆ ಆದೇಶಿಸದೆ ವಿಶೇಷ ತನಿಖಾ ತಂಡ (Special Investigation Team –SIT) ರಚಿಸಿತ್ತು.  ಇದು ಕಾಲ ಕಾಲಕ್ಕೆ ಹೈಕೋರ್ಟ್‌ಗೆ ವರದಿ ಸಲ್ಲಿಸುತ್ತಿತ್ತು. ಇದು ಕೂಡ ವಿವಾದಕ್ಕೆ ಎಡೆ ಮಾಡಿಕೊಟ್ಟಾಗ, ‘ಎಸ್‌ಐಟಿ’ಗೆ ಸ್ವತಂತ್ರ ವಾಗಿ ತನಿಖೆ ಮಾಡುವ ಅಧಿಕಾರ ಇಲ್ಲ. ಸರ್ಕಾರ ರಚಿಸಿರುವ ವಿಶೇಷ ಕಾರ್ಯ ಪಡೆಯ (Special Task Force –STF) ತನಿಖೆಯ ಮೇಲ್ವಿಚಾರಣೆಯನ್ನಷ್ಟೆ ನಡೆಸ ಬೇಕು ಎಂದು ಹೈಕೋರ್ಟ್‌ ಸೂಚಿಸಿತ್ತು. ಹಗರಣದಲ್ಲಿ ಭಾಗಿಯಾದ ಕೆಲ ಪ್ರಭಾವಿ ವ್ಯಕ್ತಿಗಳಿಂದ ಜೀವ ಬೆದರಿಕೆ ಕರೆಗಳು ಬಂದಿವೆ ಎಂದು ‘ಎಸ್‌ಟಿಎಫ್’ನ ಇಬ್ಬರು ಹಿರಿಯ ಅಧಿಕಾರಿಗಳೇ ಹೇಳಿದ್ದಾರೆ.

ಅಸಹಜ ಸಾವಿನ ಪ್ರಕರಣಗಳಲ್ಲಿ  ಮಧ್ಯಪ್ರದೇಶ ರಾಜ್ಯಪಾಲ ರಾಂ ನರೇಶ್ ಯಾದವ್ ಅವರ ಮಗ ಶೈಲೇಶ್  (50) ಅವರ ಸಾವು ಕೂಡ ಸೇರಿದೆ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ರಾಂ ನರೇಶ್ ಯಾದವ್ ಅವರ ವಿರುದ್ಧವೂ ಆರಂಭದಲ್ಲಿ ಆರೋಪಗಳು ಕೇಳಿ ಬಂದಿದ್ದವು. ಇಂದೋರ್ ಮೂಲದ ವೈದ್ಯ ಡಾ. ಆನಂದ್ ರೈ, ಈ ಹಗರಣ ಬೆಳಕಿಗೆ ಬರಲು ಪ್ರಮುಖ ಕಾರಣರಾಗಿದ್ದಾರೆ.

ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಮತ್ತು ಕೇಂದ್ರ ಸಚಿವ ನರೇಂದ್ರ ಸಿಂಗ್‌ ತೋಮರ್ ಅವರ ಹತ್ತಿರದ ಸಂಬಂಧಿಗಳಾದ ಇಬ್ಬರು ಮಧ್ಯವರ್ತಿಗಳನ್ನು ಎಸ್‌ಟಿಎಫ್‌ ಇದುವರೆಗೂ ತನಿಖೆಗೆ ಒಳಪಡಿಸದಿರುವುದು ತನಿಖೆ ಸಾಗುತ್ತಿರುವ ಹಾದಿಯ ಬಗ್ಗೆ ಅನುಮಾನ ಮೂಡಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT