ಗುರುವಾರ , ಮೇ 6, 2021
23 °C

ನಿಜಕ್ಕೂ ಇದು ಮಾಫಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜ್ಯೋತಿಷಿ-ಪುರೋಹಿತ-ಅರ್ಚಕರ ಮಾಫಿಯಾ ಕುರಿತ (ಸಂಗತ ಏ.18) ಲೇಖನದ ವಿಚಾರ ಚಿಂತನೆಗೆ ಅರ್ಹವಾಗಿದೆ. ಲೇಖಕರಿಗೆ ಈ ಮಾಫಿಯಾ ಬಗ್ಗೆ  ಭಯವಾದಂತಿದೆ. ಲೇಖನದ ಕಡೆಯಲ್ಲಿ ಅದು ವ್ಯಕ್ತವಾಗಿದೆ.ಜ್ಯೋತಿಷ್ಯವು ಪ್ರಾಯೋಗಿಕ ವಿಜ್ಞಾನವಲ್ಲ. ಜ್ಯೋತಿಷಿಗಳು-ವಾಸ್ತು ಪ್ರವೀಣರೆನಿಸಿಕೊಂಡವರು  ನಿತ್ಯ ಕಿರುತೆರೆಯ ಚಾನೆಲ್‌ಗಳಲ್ಲಿ  ತಮ್ಮ ಮೂಗಿನ ನೇರಕ್ಕೆ ಜ್ಯೋತಿಷ್ಯ, ವಾಸ್ತು ವಿಜ್ಞಾನ ಕುರಿತು ವಾದ ಮಾಡುವುದನ್ನು ನೋಡುತ್ತಿದ್ದೇವೆ.ಅವರು ಕತ್ತಿ, ಚೂರಿಗಳನ್ನು ಸೊಂಟದಲ್ಲಿ ಸಿಕ್ಕಿಸಿಕೊಂಡು ಕುಳಿತಿರಬಹುದೇ ಎಂಬ ಭಯ ಉಂಟಾಗುತ್ತದೆ. ಸಾರ್ವಜನಿಕರನ್ನು ಮೌಢ್ಯದ ಕಡೆಗೆ ನಡೆಸುವ ಇಂತಹ ವಿಚಾರಗಳು ಬಹಳ ಹೊಂದಾಣಿಕೆಯಿಂದ ನಡೆಯುತ್ತಿವೆ.ಇಂಥವರ ವಿರುದ್ಧ ಬುದ್ಧ, ಬಸವಣ್ಣ ಇತ್ಯಾದಿ ಹಲವು ವಿಚಾರವಂತರು ಹೋರಾಟ ಮಾಡಿದ್ದಾರೆ. ಇಂಥವರ ವಿರುದ್ಧ ಜನರನ್ನು ಎಚ್ಚರಿಸುವ ಕೆಲಸವನ್ನು ವಿಚಾರವಂತರು ಮಾಡಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.