ಶುಕ್ರವಾರ, ಏಪ್ರಿಲ್ 16, 2021
22 °C

ನಿರಾಸೆ ತಂದಿತ್ತ ಮಳೆ

ಗೇಮ್ ಪ್ಲಾನ್ Updated:

ಅಕ್ಷರ ಗಾತ್ರ : | |

ಆಸ್ಟ್ರೆಲಿಯಾ ಮತ್ತು ಶ್ರೀಲಂಕಾ ತಂಡಗಳ ನಡುವಿನ ಪಂದ್ಯ ಮಳೆಯಿಂದಾಗಿ ರದ್ದುಗೊಂಡದ್ದು ನಿರಾಸೆ ಉಂಟುಮಾಡಿದೆ.ರೋಚಕ ಪೈಪೋಟಿಯ ಸೂಚನೆ ಲಭಿಸಿದ ಸಂದರ್ಭದಲ್ಲೇ ಮಳೆ ಸುರಿದಿದೆ. ಆತಿಥೇಯ ತಂಡದವರು ಉತ್ತಮ ಮೊತ್ತ ಪೇರಿಸುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದರು. ಆಸ್ಟ್ರೇಲಿಯಾದ ಆಟಗಾರರಿಗೆ ಅಗ್ನಿಪರೀಕ್ಷೆ ಎದುರಾಗುವ ಸಾಧ್ಯತೆಯಿತ್ತು.ಪಂದ್ಯದ ಆರಂಭದಲ್ಲಿ ತಿಲಕರತ್ನೆ ದಿಲ್ಶಾನ್ ಮತ್ತು ಶಾನ್ ಟೇಟ್ ಅವರು ಮಾತಿಕ ಚಕಮಕಿ ನಡೆಸಿದ್ದರು.ಎರಡು ಬಲಿಷ್ಠ ತಂಡಗಳು ಪೈಪೋಟಿ ನಡೆಸುವ ಸಂದರ್ಭ ಇಂತಹ ಘಟನೆಗಳು ನಡೆಯುವುದು ಸಾಮಾನ್ಯ.ಇನ್ನು ಆಸ್ಟ್ರೇಲಿಯಾ ತಂಡದ ಎರಡು ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ಕೀನ್ಯಾ ವಿರುದ್ಧದ ಪಂದ್ಯಕ್ಕೆ ಮುನ್ನ ತಂಡಕ್ಕೆ ಒಂದು ವಾರದ ವಿಶ್ರಾಂತಿ ಲಭಿಸಿದೆ. ಆ ಬಳಿಕ ಬೆಂಗಳೂರಿನಲ್ಲೇ ತಂಡ ಕೆನಡಾ ಜೊತೆ ಪೈಪೋಟಿ ನಡೆಸಲಿದೆ.ಕಳೆದ ಒಂದು ವಾರದ ಅವಧಿಯಲ್ಲಿ ಕ್ರಿಕೆಟ್ ವಲಯದಲ್ಲಿ ಬೆಂಗಳೂರಿನ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಏಕೆಂದರೆ ವಿಶ್ವಕಪ್ ಟೂರ್ನಿಯ ಎರಡು ರೋಚಕ ಪಂದ್ಯಗಳಿಗೆ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಗಿದೆ.ಮೊದಲು ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಪಂದ್ಯ ‘ಟೈ’ನಲ್ಲಿ ಕೊನೆಗೊಂಡಿತು. ಆ ಬಳಿಕ ಕೆವಿನ್ ಒಬ್ರಿಯನ್ ಅವರ ಭರ್ಜರಿ ಶತಕದ ನೆರವಿನಿಂದ ಐರ್ಲೆಂಡ್ ತಂಡ ಇದೇ ತಾಣದಲ್ಲಿ ಇಂಗ್ಲೆಂಡ್ ವಿರುದ್ಧ ಅಚ್ಚರಿಯ ಗೆಲುವು ಪಡೆಯಿತು. ಆದರೆ ಆಸ್ಟ್ರೇಲಿಯ ತಂಡದವರು ಬೆಂಗಳೂರಿನಲ್ಲಿ ಆಡುವ ವೇಳೆ ಈ ಎರಡು ಪಂದ್ಯಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಕ್ಕಿಲ್ಲ. ಪಂದ್ಯದ ವೇಳೆ ಯೋಜನೆಯನ್ನು ಸೂಕ್ತ ರೀತಿಯಲ್ಲಿ ಕಾರ್ಯರೂಪಕ್ಕಿಳಿಸುವುದು ಮುಖ್ಯ. ವಿಶ್ವದ ಯಾವುದೇ ಭಾಗದಲ್ಲೂ ಗೆಲುವು ಪಡೆಯುವ ತಾಕತ್ತು ಆಸೀಸ್ ತಂಡಕ್ಕಿದೆ.ರಿಕಿ ಪಾಂಟಿಂಗ್ ಬಳಗದವರು ಇನ್ನು ಒಂದೆರಡು ದಿನಗಳ ವಿಶ್ರಾಂತಿ ಪಡೆದು ಬಳಿಕ ಮುಂದಿನ ಪಂದ್ಯಕ್ಕಾಗಿ ಅಭ್ಯಾಸ ನಡೆಸುವ ಸಾಧ್ಯತೆಯಿದೆ. ಎದುರಾಳಿ ಯಾರೇ ಇರಲಿ, ಆಸೀಸ್ ತಂಡ ಸೂಕ್ತ ರೀತಿಯಲ್ಲಿ ಸಜ್ಜಾಗುವುದು ವಾಡಿಕೆ. ಕೀನ್ಯಾ ಮತ್ತು ಕೆನಡಾ ವಿರುದ್ಧದ ಪಂದ್ಯಗಳ ಬಳಿಕ ತಂಡಕ್ಕೆ ಪಾಕಿಸ್ತಾನದ ಸವಾಲು ಎದುರಿಸಬೇಕಿದೆ. ಪಾಕ್ ತಂಡ ಪ್ರಸಕ್ತ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಲೀಗ್‌ನಲ್ಲಿ ಇನ್ನೂ ಕೆಲವು ಪಂದ್ಯಗಳು ನಡೆಯಬೇಕಿದ್ದು, ಅಗ್ರಸ್ಥಾನಕ್ಕಾಗಿ ಪ್ರಬಲ ಪೈಪೋಟಿ ಕಾಣಬಹುದು. ಇತರ ತಂಡಗಳಲ್ಲಿ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ಇದುವರೆಗೆ ಉತ್ತಮ ಪ್ರದರ್ಶನ ನೀಡಿದೆ. ವೆಸ್ಟ್ ಇಂಡೀಸ್ ಕೂಡಾ ಲಯ ಕಂಡುಕೊಳ್ಳುತ್ತಿದೆ. ಶ್ರೀಲಂಕಾ ಮತ್ತು ಭಾರತ ತಂಡಗಳನ್ನೂ ಕಡೆಗಣಿಸುವಂತಿಲ್ಲ. ಒಂದು ರೀತಿಯಲ್ಲಿ ಪ್ರಸಕ್ತ ಟೂರ್ನಿ ‘ಓಪನ್’ ಎನಿಸಿಕೊಂಡಿದೆ. ಯಾವ ತಂಡ ಬೇಕಾದರೂ ಕಪ್ ಗೆಲ್ಲಬಹುದು. ಕೀನ್ಯಾ ಮತ್ತು ಕೆನಡಾ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಹೆಚ್ಚಿನ ಸಮಸ್ಯೆ ಎದುರಿಸದು ಎಂಬುದು ನನ್ನು ಭಾವನೆ. ಆಸೀಸ್ ತಂಡ ಸುಲಭವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.