ಭಾನುವಾರ, ಮೇ 9, 2021
17 °C

ನಿವೃತ್ತರು ಸಮಾಜ ತಿದ್ದುವ ಕೆಲಸ ಮಾಡಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ನಿವೃತ್ತ ನೌಕರರು ಸಮಾಜದ ಓರೆ, ಕೋರೆಗಳನ್ನು ತಿದ್ದುವ ಕೆಲಸ ಮಾಡಬೇಕು ಎಂದು ಶಾಸಕ ಶ್ರೀಶೈಲಪ್ಪ ಬಿದರೂರ ಹೇಳಿದರು. ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಸಂಘದ 4ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಿವೃತ್ತರು ಸಂಘದಲ್ಲಿ ಸಕ್ರೀಯವಾಗಿ ತೊಡಗುವ ಮೂಲಕ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದ ಅವರು, ಸಂಘಕ್ಕೆ ನಿವೇಶನ ಹಾಗೂ ರೂ 5 ಲಕ್ಷ ಅನುದಾನ ನೀಡುವುದಾಗಿ ಅವರು ಭರವಸೆ ನೀಡಿದರು.ನಗರಸಭೆ ಅಧ್ಯಕ್ಷ ಶಿವಣ್ಣ ಮುಳಗುಂದ ಮಾತನಾಡಿ, ಹಿರಿಯರ ಬಗ್ಗೆ ಅಸಡ್ಡೆ ಭಾವನೆ ತೋರದೆ, ಅವರನ್ನು ಗೌರವಿಸಿ ಅವರ ಮಾರ್ಗ ದರ್ಶನದಲ್ಲಿ ಪ್ರತಿಯೊಬ್ಬರೂ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಪಿ.ಎಸ್. ಧರಣೆಪ್ಪನವರ ಮಾತನಾಡಿ, ನಿವೃತ್ತರು ಸದಾ ಕ್ಷೇಮ ವಾಗಿರಬೇಕು. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಸಹಕರಿಸಬೇಕು.ನಿವೃತ್ತರು ತಮ್ಮ ಅನುಭವಗಳನ್ನು ಸಮಾಜದಲ್ಲಿ ಇತರರಿಗೆ ಹಂಚಬೇಕು. ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಶ್ರಮಿಸುವ ಅಗತ್ಯವಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಎಸ್.ಸಿ. ಗಾಣಿಗೇರ ಅವರು ಸಂಘದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿಯನ್ನು ಶಾಸಕರಿಗೆ ನೀಡಿದರು.ಎನ್.ಬಿ. ನೀಲಗುಂದ, ಬಿ.ಎಸ್. ನಾಯ್ಕರ, ಎಸ್.ಐ. ಹೊನ್ನಗುಡಿ, ಎಚ್.ಎಂ. ಮಡಿವಾಳರ, ಎಂ.ಐ. ಕಮ್ಮಾರ, ವಿ.ಸಿ. ಹಂಚಿನಾಳ, ಸುಭಾಷ ನೀಲಗಾರ, ಎಸ್.ಆರ್. ಹಿರೇಮಠ, ಆರ್.ಬಿ. ಕಮತ, ಎಂ.ಎಚ್. ಕುಲಕರ್ಣಿ, ಎಸ್.ಟಿ. ಶೇಷಗಿರಿ, ಬಿ. ವೀರಮ್ಮ, ಶಾಸ್ತ್ರಿಬಾಯಿ, ಎಸ್.ಎನ್. ಪಂಚಬಾವಿ, ಎಚ್.ಬಿ. ತಳವಾರ ಮತ್ತಿತರರು ಹಾಜರಿದ್ದರು.

ಬಿ.ಎಂ. ಮರಡೂರ ಪ್ರಾರ್ಥಿಸಿದರು. ಐ.ಕೆ. ಬಳೂಚರಿ ಸ್ವಾಗತಿಸಿದರು. ರಾಜ ಶೇಖರ ಕರಡಿ ವರದಿ ವಾಚಿಸಿದರು. ಬಿ.ಬಿ. ಬಾವಿಕಟ್ಟಿ ನಿರೂಪಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.