ಬಾಗೇಪಲ್ಲಿ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮದ ದಲಿತರಿಗೆ ನಿವೇಶನ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಶುಕ್ರವಾರ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಗೌನಿಪಲ್ಲಿ ಗ್ರಾಮದಿಂದ ತಾಲ್ಲೂಕು ಕಚೇರಿ ಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಗೌನಿಪಲ್ಲಿ ಗ್ರಾಮದಿಂದ ಹೊರಟ ಗ್ರಾಮಸ್ಥರು ಹಾಗೂ ಕಾರ್ಯಕರ್ತರು ರೆಡ್ಡಿಕೆರೆ ಮೂಲಕ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ತಾಲ್ಲೂಕು ಕಚೇರಿಯ ಎದುರು ಜಮಾಯಿಸಿದ ಅವರು, `ದಲಿತರಿಗೆ ನಿವೇಶನ ಕಲ್ಪಿ ಸುವಲ್ಲಿ ತಾಲ್ಲೂಕು ಆಡಳಿತ ವರ್ಗ ವಿಫಲವಾಗಿದೆ~ ಎಂದು ಆರೋಪಿಸಿದರು.

ಸಮಿತಿ ಸಂಚಾಲಕ ಕೆ.ಸಿ.ರಾಜಾ ಕಾಂತ್ ಮಾತನಾಡಿ, ` ಅಸ್ಪೃಶ್ಯತೆ ಮತ್ತು ಅಸಮಾನತೆಯಿಂದ ದಲಿತರು ಶೋಷಣೆಗೆ ಒಳಗಾಗುತ್ತಿದ್ದಾರೆ. ಮೂಲ ಸೌಕರ್ಯಗಳಿಂದ ವಂಚಿತ ರಾಗುತ್ತಿದ್ದಾರೆ. ಇಂದಿಗೂ ದಲಿತರ ಸ್ಥಿತಿಗತಿಯಲ್ಲಿ ಯಾವುದೇ ಬದಲಾವಣೆ ಗಳು ಆಗಿಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

`ಗೌನಿಪಲ್ಲಿ ಗ್ರಾಮದಲ್ಲಿ ದಲಿತರು ಮನೆ-ನಿವೇಶನಗಳಿಲ್ಲದೆ ಪರದಾಡು ತ್ತಿದ್ದಾರೆ. ಅವರಿಗೆ ವಿತರಿಸಿದ ತಾತ್ಕಾಲಿಕ ಪಡಿತರ ಚೀಟಿಗಳನ್ನು ಕಾಯಂ ಗೊಳಿಸಬೇಕು. ಕುಟುಂಬದ ಸದಸ್ಯರಿಗೆ ಅಗತ್ಯ ಇರುವಷ್ಟು ಧಾನ್ಯಗಳನ್ನು ವಿತರಿಸಬೇಕು~ ಎಂದು ಆಗ್ರಹಪಡಿಸಿದರು.

ಸಮಿತಿ ಮುಖಂಡರಾದ ಬಿ.ವಿ.ವೆಂಕಟ ರವಣ, ಸಿ.ಜಿ ಗಂಗಪ್ಪ, ನಾರಾಯಣ ಸ್ವಾಮಿ, ಲಕ್ಷ್ಮೀನರಸಿಂಹಪ್ಪ, ಕೋಟಪ್ಪ, ಜಿ.ನರಸಿಂಹಪ್ಪ, ನಾರಾಯಣಪ್ಪ, ಪ್ರಕಾಶ, ರಾಜು, ಕೆ.ಸಿ.ರವಣಪ್ಪ, ಬಾಲಕೃಷ್ಣ, ಮಹೇಶ್, ನಾಗರಾಜ, ರಮಣ, ನರೇಶ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.