ಸೋಮವಾರ, ಮೇ 25, 2020
27 °C

ನಿಷೇಧ:ಅನಿಲ್ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಷೇರುಪೇಟೆ ವಹಿವಾಟಿನಲ್ಲಿ ಭಾಗವಹಿಸಬಾರದು ಎಂದು ತಮ್ಮ ಕಂಪೆನಿ ಹಾಗೂ ನಿರ್ದೇಶಕರ ಮೇಲೆ ಭಾರತೀಯ ಷೇರು ನಿಯಂತ್ರಣ ಮಂಡಳಿ (ಸೆಬಿ) ಯಾವುದೇ ನಿಷೇಧ ಹೇರಿಲ್ಲ ಎಂದು ಅನಿಲ್ ಅಂಬಾನಿ ಸ್ಪಷ್ಟಪಡಿಸಿದ್ದಾರೆ.

ಭಾನುವಾರ ಇಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಿಲಯನ್ಸ್ ಇನ್‌ಫ್ರಾ ಮತ್ತು ರಿಲಯನ್ಸ್ ನ್ಯಾಚುರಲ್ ರಿಸೋರ್ಸಸ್ (ಆರ್‌ಎನ್‌ಆರ್‌ಎಲ್) ಕಂಪೆನಿಗಳಿಗೆ ತನಿಖೆ ಇತ್ಯರ್ಥ ಪಡಿಸಲು ‘ಸೆಬಿ’ ರೂ 50 ಕೋಟಿ ದಂಡ ವಿಧಿಸಿದೆ. ಇದನ್ನು ಪಾವತಿಸಲಾಗುವುದು. ಆದರೆ, ಷೇರು ವಹಿವಾಟಿಗೆ ಸಂಬಂಧಿಸಿದಂತೆ ‘ಸೆಬಿ’ ಜತೆ ನಡೆದಿರುವ ಚರ್ಚೆ ಮತ್ತು  ಮಂಡಳಿ ನೀಡಿರುವ ಮಾರ್ಗಸೂಚಿಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಇಚ್ಛಿಸುವುದಿಲ್ಲ’ ಎಂದರು.

 ಸುಮಾರು 20 ನಿಮಿಷಗಳ ಪವರ್ ಪಾಯಿಂಟ್ ಪ್ರಾತ್ಯಕ್ಷಿಕೆಯಲ್ಲಿ ಅವರು  ಪ್ರಮುಖವಾಗಿ ಕಂಪೆನಿಯ 11 ದಶಲಕ್ಷ ಹೂಡಿಕೆದಾರರ ಹಿತಾಸಕ್ತಿಯ ಕುರಿತು ಮಾತನಾಡಿದರು. ‘ಷೇರು ಪೇಟೆಯಲ್ಲಿನ ಹೂಡಿಕೆಯ ಮೇಲೆ ‘ಸೆಬಿ’ ನಿಷೇಧ ಹೇರಿದೆ ಎನ್ನುವ ವರದಿಗಳಿಗೆ ಜನರು ಕಿವಿಗೊಡಬಾರದು’ ಎಂದು ಮನವಿ ಮಾಡಿದರು.

 ಷೇರುವಹಿವಾಟಿಗೆ ಸಂಬಂಧಿಸಿಂತೆ ಅಮೆರಿಕದಲ್ಲಿ 2007ರಲ್ಲೇ ಒಪ್ಪಿತ ಮಾರ್ಗದರ್ಶಿಗಳನ್ನು ಜಾರಿಗೆ ತರಲಾಗಿದೆ. ಷೇರು ನಿಯಂತ್ರಣ ಮಂಡಳಿ ಶೇಕಡ 90ರಷ್ಟು ಪ್ರಕರಣಗಳನ್ನು ಈ ನಿಯಮದಡಿಯೇ ಇತ್ಯರ್ಥಗೊಳಿಸುತ್ತದೆ. ಭಾರತದಲ್ಲಿ ‘ಸೆಬಿ’ ಕಳೆದ ನಾಲ್ಕು ವರ್ಷಗಳಲ್ಲಿ ಇಂತಹ 1,000 ಕ್ಕೂ ಹೆಚ್ಚು ಆದೇಶಗಳನ್ನು ಜಾರಿಗೊಳಿಸಿದೆ ಎಂದು ಅನಿಲ್ ಹೇಳಿದರು.

 ‘ಈ ವಿವಾದವನ್ನು ತಮ್ಮ ಕಂಪೆನಿಯೇ ಬಗೆಹರಿಸಿಕೊಳ್ಳಲಿದೆ. ಇದರಿಂದ ರಿಲಯನ್ಸ್ ಕಮ್ಯುನಿಕೇಷನ್ಸ್, ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್ ಮೀಡಿಯಾ ವರ್ಕ್ಸ್ ವ್ಯವಹಾರಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.    ಹೊಸ ಷೇರುಪತ್ರಗಳನ್ನು ಕೊಳ್ಳುವುದಾಗಲಿ,  ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಆಲೋಚನೆಯಾಗಲಿ ಸದ್ಯಕ್ಕೆ  ಇಲ್ಲ ಎಂದು ಅನಿಲ್ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.