ಭಾನುವಾರ, ಜೂನ್ 20, 2021
28 °C

ನೀತಿಸಂಹಿತೆ ಪಾಲನೆಗೆ ಸೂಕ್ತ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ಏಪ್ರಿಲ್ 17ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಶಿಸ್ತುಬದ್ಧವಾಗಿ ಜಾರಿಗೊಳಿಸಲು ತಾಲ್ಲೂಕು ಆಡಳಿತ ಸನ್ನದ್ಧವಾಗಿದೆ ಎಂದು ಉಪ ವಿಭಾಗಾಧಿಕಾರಿ ಪಿ.ಎನ್.ಲೋಕೇಶ್‌ ಹೇಳಿದರು.ಗುರುವಾರ ಮಿನಿ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಮಾದರಿ ನೀತಿಸಂಹಿತೆ ತಂಡ, ಸ್ಟೀಪ್ ತಂಡ, ಫ್ಲೈಯಿಂಗ್ ಸ್ಕ್ವಾಡ್‌, ವೀಡಿಯೊ ಚಿತ್ರೀಕರಣ ವಿಚಕ್ಷಣ ದಳ ಸೇರಿದಂತೆ ಹಲವು ತಂಡಗಳನ್ನು ರಚಿಸಲಾಗಿದೆ. ಪೊಲೀಸ್‌ ಇಲಾಖೆಯ ವೃತ್ತ ನಿರೀಕ್ಷಕ ಎಂ.ಎನ್‌.ರುದ್ರಪ್ಪ ಹಾಗೂ ಅಬಕಾರಿ ಇಲಾಖೆಯ ವೃತ್ತ ನಿರೀಕ್ಷಕಿ ಕೆ.ಎಸ್‌.ಲತಾ ಅವರ ನೇತೃತ್ವದಲ್ಲಿ ನೀತಿಸಂಹಿತೆ ತಂಡ ರಚಿಸಲಾಗಿದೆ. ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ನಟರಾಜ ಪಾಟೀಲ್‌, ಪ್ರಭುಸ್ವಾಮಿ, ನಾಗರಾಜ ಹಾಗೂ ಆಯಾ ಪೊಲೀಸ್‌ ಠಾಣಾ ವ್ಯಾಪ್ತಿಯ ಪಿಎಸ್‌ಐ ನೇತೃತ್ವದಲ್ಲಿ ವಿಚಕ್ಷಣ ದಳ ರಚಿಸಲಾಗಿದೆ. ಚುನಾವಣಾ ಪ್ರಚಾರಕ್ಕೆ ರಾಜಕೀಯ ಪಕ್ಷಗಳು ಸಂಬಂಧಿಸಿದ ಪ್ರಾಧಿಕಾರದಿಂದ ಪರವಾನಿಗೆ ಪಡೆಯದೇ ನಡೆಸುವ ಪ್ರಚಾರ ಸಭೆ, ಮೆರವಣಿಗೆ, ರೋಡ್ ಷೊ ಮೇಲೆ ಕಣ್ಗಾವಲು ಹಾಕಲಾಗಿದೆ ಎಂದು ತಿಳಿಸಿದರು.ನೀತಿ ಸಂಹಿತೆ ಉಲ್ಲಂಘನೆ ಘಟನೆಗಳು ಕಂಡುಬಂದಲ್ಲಿ ತಂಡದ ಮುಖ್ಯಸ್ಥರಿಗೆ, ಚುನಾವಣಾಧಿಕಾರಿಗೆ ಅಥವಾ ಸಹಾಯವಾಣಿ ಸಂಖ್ಯೆ: 18004252029ಗೆ ಕರೆ ಮಾಡಬಹುದು. ಇತರೆ ಮಾಹಿತಿ ಇದ್ದಲ್ಲಿ ದೂರವಾಣಿ ಸಂಖ್ಯೆ: 08192 233 071, 233 081, 233 051ಗೆ ಕರೆ ಮಾಡುವಂತೆ ಅವರು ತಿಳಿಸಿದರು.ತಾಲ್ಲೂಕಿನ 1,91,326 ಮತದಾರರು ಮತ ಚಲಾಯಿಸುವ ಅರ್ಹತೆ ಹೊಂದಿದ್ದಾರೆ. ಮಾರ್ಚ್‌ 9 ಹಾಗೂ 16ರಂದು ನಡೆಸಿದ ವಿಶೇಷ ಮತದಾರರ ನೋಂದಣಿ ಕಾರ್ಯಕ್ರಮದಲ್ಲಿ 4,064 ನೂತನ ಮತದಾರರು ಸೇರ್ಪಡೆಯಾಗಿದ್ದಾರೆ. ಪ್ರಥಮ ಬಾರಿ ಮತ ಚಲಾಯಿಸು ವವರ ಸಂಖ್ಯೆ 2,764 ಇದ್ದು, ಈ ಪೈಕಿ, 1,488 ಪುರುಷ ಹಾಗೂ 1,276 ಮಹಿಳಾ ಮತದಾರರು ಸೇರಿದ್ದಾರೆ. ತಾಲ್ಲೂಕಿನಲ್ಲಿ ಹೊಸದಾಗಿ 29 ಮತಗಟ್ಟೆ ಸ್ಥಾಪಿಸಲಾಗಿದೆ. ಈ ಪೈಕಿ, 72 ಅತಿಸೂಕ್ಷ್ಮ ಹಾಗೂ 68 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ತಹಶೀಲ್ದಾರ್‌ ಎಂ.ಆರ್‌.ನಾಗರಾಜ್‌ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.