ನೀರಜ್ 13, ವಿಖ್ಯಾತ್ 21ನೇ ರ್ಯಾಂಕ್

ಮಂಗಳೂರು: 2015ನೇ ಸಾಲಿನ ಸಿಇಟಿ ಎಂಜಿನಿಯರಿಂಗ್, ಮೆಡಿಕಲ್, ಐಎಸ್ ಎಂಎಚ್, ಪಶುವೈದ್ಯಕೀಯ, ಕೃಷಿ ವಿಜ್ಞಾನ ಹೀಗೆ ಐದು ವಿಭಾಗದ ಸಿಇಟಿ ಪರೀಕ್ಷೆಯಲ್ಲಿ ಮೊದಲ ಐವತ್ತು ರ್ಯಾಂಕ್ ಗಳಲ್ಲಿ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ 13 ಮಂದಿ ವಿದ್ಯಾರ್ಥಿಗಳು ವಿವಿಧ ರ್ಯಾಂಕ್ಗಳನ್ನು ಪಡೆದುಕೊಂ ಡಿದ್ದಾರೆ.
ನೀರಜ್ ಕುಮಾರ್ ಕೆ.ಎಸ್. (ಮೆಡಿ ಕಲ್ನಲ್ಲಿ 13, ಐಎಸ್ಎಂಎಚ್ನಲ್ಲಿ 27, ಪಶುವೈದ್ಯಕೀಯ ವಿಭಾಗದಲ್ಲಿ 13), ವಿಖ್ಯಾತ್ ಡಿ. ಪ್ರಸಾದ್ (ಮೆಡಿಕಲ್ನಲ್ಲಿ 21, ಎಂಜಿನಿಯರಿಂಗ್ನಲ್ಲಿ 147, ಐಎಸ್ಎಂಎಚ್ನಲ್ಲಿ 15, ಕೃಷಿ ವಿಜ್ಞಾನದಲ್ಲಿ 18, ಪಶುವೈದ್ಯಕೀಯ ವಿಭಾಗದಲ್ಲಿ 21), ನಿಶಾಂತ್ ಭಟ್ ಕೆ. (ಮೆಡಿಕಲ್ನಲ್ಲಿ 31, ಐಎಸ್ಎಂ ಎಚ್ ನಲ್ಲಿ 42, ಕೃಷಿ ವಿಜ್ಞಾನದಲ್ಲಿ 44, ಪಶುವೈದ್ಯ ಕೀಯ ವಿಭಾಗದ ಲ್ಲಿ 31), ಅಭಿನ್ ರೈ ಕೆ.ಎಸ್. (ಮೆಡಿ ಕಲ್ನಲ್ಲಿ 33, ಎಂಜಿನಿಯ ರಿಂಗ್ನಲ್ಲಿ 57, ಐಎಸ್ಎಂ ಎಚ್ನಲ್ಲಿ 17, ಕೃಷಿ ವಿಜ್ಞಾನದಲ್ಲಿ 7, ಪಶುವೈದ್ಯಕೀಯ ವಿಭಾಗದಲ್ಲಿ 33), ಮೇಘಾ ಎ.ಸಿ (ಮೆಡಿಕಲ್ನಲ್ಲಿ 34, ಎಂಜಿನಿಯರಿಂಗ್ನಲ್ಲಿ 285, ಐಎಸ್ಎಂ ಎಚ್ನಲ್ಲಿ 31, ಕೃಷಿ ವಿಜ್ಞಾನದಲ್ಲಿ 53, ಪಶುವೈದ್ಯಕೀಯ ವಿಭಾಗದಲ್ಲಿ 34), ದಿಶಾ ಎಸ್. (ಮೆಡಿಕಲ್ನಲ್ಲಿ 35, ಎಂಜಿನಿಯರಿಂಗ್ನಲ್ಲಿ 16, ಐಎಸ್ಎಂ ಎಚ್ನಲ್ಲಿ 10, ಕೃಷಿ ವಿಜ್ಞಾನದಲ್ಲಿ 4, ಪಶುವೈದ್ಯಕೀಯ ವಿಭಾಗದಲ್ಲಿ 31), ಅನುಷಾ ಜಿ. ಸಜ್ಜನ್ (ಮೆಡಿಕಲ್ನಲ್ಲಿ 38, ಎಂಜಿನಿಯರಿಂಗ್ನಲ್ಲಿ 153, ಐಎಸ್ಎಂಎಚ್ನಲ್ಲಿ 20, ಕೃಷಿ ವಿಜ್ಞಾನ ದಲ್ಲಿ 13, ಪಶುವೈದ್ಯಕೀಯ ವಿಭಾಗದಲ್ಲಿ 38), ಗಿರೀಶ್ ಆರ್ ಭಾಗವತ್ (ಮೆಡಿಕಲ್ನಲ್ಲಿ 40, ಐಎಸ್ಎಂಎಚ್ ನಲ್ಲಿ 36, ಕೃಷಿ ವಿಜ್ಞಾನದಲ್ಲಿ 14, ಪಶುವೈದ್ಯಕೀಯ ವಿಭಾಗದಲ್ಲಿ 40), ದೀಪಾಲಿ ಜೆ. ಶೆಟ್ಟಿ (ಮೆಡಿಕಲ್ನಲ್ಲಿ 47, ಐಎಸ್ಎಂಎಚ್ನಲ್ಲಿ 46, ಕೃಷಿ ವಿಜ್ಞಾನದಲ್ಲಿ 20, ಪಶುವೈದ್ಯಕೀಯ ವಿಭಾಗದಲ್ಲಿ 47), ಶೇಷಾ ಶೈಲೇಶ್ ಬಸವರಾಜ್ (ಮೆಡಿಕಲ್ನಲ್ಲಿ 48, ಪಶುವೈದ್ಯಕೀಯ ವಿಭಾಗದಲ್ಲಿ 48), ಸುಖಿತ್ ಟಿ.ಆರ್ (ಮೆಡಿಕಲ್ನಲ್ಲಿ 49, ಪಶುವೈದ್ಯಕೀಯ ವಿಭಾಗದಲ್ಲಿ 49), ನವೀನ್ ಎಂ.ವಿ. (ಐಎಸ್ಎಂಎಚ್ನಲ್ಲಿ 43), ಸುದೀಪ್ ಅತ್ರೇಯಾ ಎನ್. (ಎಂಜಿ ನಿಯರಿಂಗ್ 33) ರ್ಯಾಂಕ್ ಪಡೆದ ಪ್ರಮುಖಕರು. ಉತ್ತಮ ರ್ಯಾಂಕ್ಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅಭಿನಂದಿಸಿದರು.
‘ದಿನಕ್ಕೆ ಆರು ಗಂಟೆ ನಿದ್ದೆ’
ಮಂಗಳೂರು: ದಿನಕ್ಕೆ ಆರು ಗಂಟೆ ಮಾತ್ರ ನಿದ್ದೆ ಮಾಡುತ್ತಿದ್ದೆ. ನನ್ನ ಸಾಧನೆಗೆ ಎಕ್ಸ್ಪರ್ಟ್ ಸಂಸ್ಥೆಯ ಮಾರ್ಗದರ್ಶನವೇ ಕಾರಣ ಎಂದು ಮೆಡಿಕಲ್ನಲ್ಲಿ 13ನೇ ರ್ಯಾಂಕ್ ಪಡೆದ ನೀರಜ್ ಕುಮಾರ್ ಕೆ. ಎಸ್. ಸಂಭ್ರಮದಿಂದ ಹೇಳಿಕೊಂಡರು.
21 ನೇ ರ್ಯಾಂಕ್ ಪಡೆದ ವಿಖ್ಯಾತ್ ಡಿ. ಪ್ರಸಾದ್ ಅವರಿಗೆ ಮಾಹೆಯು ನಡೆಸಿದ ಅಖಿಲ ಭಾರತ ಮಟ್ಟದ ಪ್ರವೇಶ ಪರೀಕ್ಷೆಯಲ್ಲಿ 309ನೇ ರ್ಯಾಂಕ್ ದೊರೆತಿದೆ.
ಆದ್ದರಿಂದ ಮಾಹೆಯಲ್ಲಿ ಮೆಡಿಕಲ್ ಓದುವ ಕನಸು ಹೊಂದಿರುವುದಾಗಿ ಅವರು ಹೇಳುತ್ತಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.