ಚಿಕ್ಕಬಳ್ಳಾಪುರ: ‘ಪಶ್ಚಿಮ ಘಟ್ಟದಿಂದ ಬಯಲುಸೀಮೆ ಪ್ರದೇಶಕ್ಕೆ ನೀರು ಹರಿಸುವ ಕನಸು ನನಸಾಗುವವರೆಗೆ ನಾನು ಸುಮ್ಮನೆ ಕೂರುವವನಲ್ಲ. ಸರ್ಕಾರದ ಮೇಲೆ ಒತ್ತಡ ಹೇರಿ, ಉಪವಾಸಕ್ಕೆ ಕೂತಾದರೂ ನನ್ನ ನೀರಾವರಿ ಯೋಜನೆ ವರದಿ ಜಾರಿಯಾಗುವಂತೆ ಮಾಡುತ್ತೇನೆ’.

ಬರಪೀಡಿತ ಬಯಲುಸೀಮೆ ಜಿಲ್ಲೆಗಳಿಗೆ ನೀರು ಹರಿಸುವ ತಮ್ಮ ಮನದಾಳದ ಹೆಬ್ಬಯಕೆಯನ್ನು ಹೀಗೆ ಹಂಚಿಕೊಂಡವರು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ. ಜನವರಿ 30ರಂದು ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ‘ಪ್ರಜಾವಾಣಿ’ಗೆ ಕೊನೆಯ ಸಂದರ್ಶನ ನೀಡಿದ್ದ ಅವರು, ‘ಸರ್ಕಾರವು ನನ್ನ ವರದಿಯತ್ತ ನಿರ್ಲಕ್ಷ್ಯ ತೋರುತ್ತಲೇ ಬಂದಿದೆ. ಆದರೆ ಅದಕ್ಕೆ ಮನನೊಂದು ಸುಮ್ಮನೆ ಕೂರುವಂತಹ ವ್ಯಕ್ತಿ ನಾನಲ್ಲ’ ಎಂದು ಹೇಳಿದ್ದರು. ಆದರೆ ಅವರೇ ಈಗ ಕಣ್ಮರೆಯಾಗಿದ್ದಾರೆ.

ಶಾಶ್ವತ ನೀರಾವರಿ ಯೋಜನೆಗಾಗಿ ಕಳೆದೆರಡು ದಶಕಗಳಿಂದ ಹೋರಾಟ ನಡೆಸುತ್ತಿರುವ ಅವಿಭಜಿತ ಕೋಲಾರ ಜಿಲ್ಲೆ ಮತ್ತು ಬಯಲುಸೀಮೆ ಜನರಿಗೆ ಪರಮಶಿವಯ್ಯ ಒಂದರ್ಥದಲ್ಲಿ ಸರ್ ಎಂ.ವಿಶ್ವೇಶ್ವರಯ್ಯನವರ ಪ್ರತಿರೂಪದಂತೆ ಇದ್ದರು. ‘ನೀವು ನಮ್ಮ ಪ್ರದೇಶಕ್ಕೆ ನೀರುಹರಿಸಿಬಿಡಿ. ಮನೆಯಲ್ಲಿ ದೇವರುಗಳ ಸಾಲಿನಲ್ಲಿ ನಿಮ್ಮ ಭಾವಚಿತ್ರವಿಟ್ಟು ಪ್ರತಿನಿತ್ಯ ಪೂಜಿಸುತ್ತೇವೆ. ನೀವೇ ನಮ್ಮ ಪಾಲಿನ ಭಗೀರಥರು. ನೀರು ತರುವ ದೇವರು’ ಎಂದು ರೈತರು ಧನ್ಯತೆಯಿಂದ ಕೈಮುಗಿಯುತ್ತಿದ್ದರು.

ಎಂಜಿನಿಯರ್ರಾಗಿದ್ದ ಪರಮಶಿವಯ್ಯ ಅವರಿಗೆ ಯಾವುದೇ ಡಾಕ್ಟರೇಟ್ ಪದವಿಗೆ ಪಾತ್ರವಾಗದಿದ್ದರೂ ಜನರು ಅವರನ್ನು ಡಾಕ್ಟರ್ಎಂದೆ ಸಂಬೋಧಿಸುತ್ತಿದ್ದರು.

96ರ ಹರೆಯದಲ್ಲೂ ಅದಮ್ಯ ಉತ್ಸಾಹ: ಪರಮಶಿವಯ್ಯ ಅವರು ತುಮಕೂರಿನಲ್ಲಿ ವಾಸವಿದ್ದರೂ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳೊಂದಿಗೆ ಹೆಚ್ಚಿನ ನಂಟು ಹೊಂದಿದ್ದರು. ನೀರಾವರಿಗೆ ಸಂಬಂಧಿಸಿದಂತೆ ಯಾವುದೇ ಹೋರಾಟ ಅಥವಾ ಸಮಾವೇಶ ನಡೆದರೂ ಅವರು ಹಾಜರಾಗುತ್ತಿದ್ದರು. 96ರ ಇಳಿವಯಸ್ಸಿನಲ್ಲಿ ಆಯಾಸ ಮತ್ತು ನಿಶ್ಯಕ್ತಿ ಕಾಡಿದರೂ ಅದನ್ನು ತೋರಗೊಡೆದೇ ಆತ್ಮವಿಶ್ವಾಸದಿಂದ ಪಾಲ್ಗೊಂಡು ತಮ್ಮ ವಿಚಾರಗಳನ್ನು ಪ್ರಸ್ತುತಪಡಿಸುತ್ತಿದ್ದರು. ನೀರು ಹರಿಸುವ ಆಶಾಭಾವ ವ್ಯಕ್ತಪಡಿಸುತ್ತಿದ್ದರು.

ಕೆಲ ತಿಂಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಅವರ ಆರೋಗ್ಯ ರಕ್ಷಣೆಗಾಗಿ ಚಿಕ್ಕಬಳ್ಳಾಪುರದ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಸಲಾಗಿತ್ತು. ನಿರಂತರ ಹೋರಾಟ ನಡೆಸಿದರೂ ಸರ್ಕಾರದಿಂದ ಸ್ಪಂದನೆ ಸಿಗದಿರುವುದಕ್ಕೆ ಕೆಲ ಬಾರಿ ಹೋರಾಟಗಾರರು ನೊಂದುಕೊಂಡರೂ ಹುರಿದುಂಬಿಸುತ್ತಿದ್ದ ಪರಮಶಿವಯ್ಯ, ‘ಆತ್ಮವಿಶ್ವಾಸ ಮತ್ತು ಆಶಾಭವಾನೆ ಎಂದಿಗೂ ಕಳೆದುಕೊಳ್ಳಬಾರದು’ ಎನ್ನುತ್ತಿದ್ದರು.

ಉತ್ತಮ ಜ್ಞಾಪಕ ಶಕ್ತಿ ಹೊಂದಿದ್ದ ಅವರು ನೀರಾವರಿಗೆ ಸಂಬಂಧಿಸಿದಂತೆ ಯಾವುದೇ ವಿಷಯವಿದ್ದರೂ ನಿಖರವಾಗಿ ವಿವರಿಸುತ್ತಿದ್ದರು. ಮೊಬೈಲ್ ಫೋನ್ ತಮ್ಮ ಬಳಿಯೇ ಇಟ್ಟುಕೊಳ್ಳುತ್ತಿದ್ದ ಅವರು ದೂರವಾಣಿ ಕರೆಗಳಿಗೆ ಪ್ರತಿಕ್ರಿಯಿಸುವುದರ ಜೊತೆಗೆ ಫೋನ್ನಲ್ಲೇ ಸಂದರ್ಶನ ನೀಡಿದ ಉದಾಹರಣೆಗಳಿವೆ. ತಮ್ಮ ನೀರಾವರಿ ವರದಿ ಅನುಷ್ಠಾನಗೊಳ್ಳುವುದರ ಬಗ್ಗೆ ಅಚಲ ವಿಶ್ವಾಸ ಹೊಂದಿದ್ದ ಅವರು ನೀರು ಹರಿಸುವಿಕೆಗಾಗಿ ಏನೂ ಮಾಡಲು ಸಿದ್ಧ ಎನ್ನುತ್ತಿದ್ದರು.

ಕೊನೆಯ ಕ್ಷಣದವರೆಗೆ ಆಶಾಭಾವನೆ: ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಕೋರಿಯಾ ದೇಶದ ವಿನೂತನ ಮಾದರಿಯ ಯೋಜನೆಯೊಂದನ್ನು ಸಿದ್ಧಪಡಿಸಲಾಗಿದ್ದು, ಸರ್ಕಾರ ಅವಕಾಶ ನೀಡಬೇಕು.

ಪಶ್ಚಿಮಘಟ್ಟದಿಂದ ಸುಮಾರು 440 ಟಿಎಂಸಿ ನೀರು ಹರಿಸಬಹುದು. ಒಂಬತ್ತು ಜಿಲ್ಲೆಗಳಿಗೆ 328 ಟಿಎಂಸಿ ನೀರು, ಗ್ರೇಟರ್ ಬೆಂಗಳೂರಿಗೆ 12 ಟಿಎಂಸಿ ನೀರು ಮತ್ತು ಭತ್ತ, ಕಬ್ಬು ಮುಂತಾದವು ಬೆಳೆಯಲು 100 ಟಿಎಂಸಿ ನೀರು ಸದ್ಬಳಕೆ ಮಾಬಹುದು ಎಂದು ಅವರು ಕೊನೆಯ ಬಾರಿ ವರದಿಯ ಬಗ್ಗೆ ಹೇಳಿದ್ದರು.

‘ಸರ್ಕಾರವು ನನ್ನ ವರದಿಯತ್ತ ಎಷ್ಟೇ ನಿರ್ಲಕ್ಷ್ಯ ಅಥವಾ ನಿರಾಸಕ್ತಿ ತೋರಲಿ, ಅದು ವೈಜ್ಞಾನಿಕವೆಂದು ವಾದಿಸುವ ಸಾಮರ್ಥ್ಯ ನನ್ನಲ್ಲಿದೆ. ಕೇಂದ್ರ ಸಚಿವ ವೀರಪ್ಪ ಮೊಯಿಲಿ ಅವರು ಬಯಸಿದ್ದಲ್ಲಿ, ಅವರು ಇರುವ ಸ್ಥಳಕ್ಕೆ ತೆರಳಿ ನೀರಾವರಿ ವರದಿ ಬಗ್ಗೆ ವಿವರಿಸುತ್ತೇನೆ. ವರದಿಯು ವೈಜ್ಞಾನಿಕ ಅಂಶಗಳಿಂದ ಕೂಡಿದ್ದು, ಸಾಧ್ಯವಾದಷ್ಟು ಬೇಗ ನೀರು ಹರಿಸಬಹುದು ಎಂಬುದನ್ನು ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುತ್ತೇನೆ’ ಎಂದು ಪರಮಶಿವಯ್ಯ ಹೇಳಿದ್ದರು.

ಆದರೆ ದುರಾದೃಷ್ಟವಶಾತ ಅವರಿಗೆ ವೀರಪ್ಪ ಮೊಯಿಲಿ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ತಮ್ಮ ವರದಿಯತ್ತ ಯಾಕೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಸರ್ಕಾರಕ್ಕೆ ಪ್ರಶ್ನಿಸಲು ಸಹ ಸಾಧ್ಯವಾಗಲಿಲ್ಲ. ಶಾಶ್ವತ ನೀರಾವರಿ ಯೋಜನೆ ವರದಿ ಅನುಷ್ಠಾನಗೊಳಿಸುವ ಕನಸು ಕನಸಾಗಿಯೇ ಉಳಿಯಿತು. ಬದುಕಿರುವಾಗಲೇ ನೀರು ತರುವ ದೇವರನ್ನು ಪೂಜಿಸಬೇಕೆಂದು ಬಯಸಿದ್ದ ರೈತರಿಗೆ ದೇವರೇ ದೂರವಾಗಿರುವುದಕ್ಕೆ ನಿರಾಸೆ ಆವರಿಸಿಕೊಂಡಿದೆ.

ಪರಮಶಿವಯ್ಯ ಅವರ ನಿಧನಕ್ಕೆ ಅವಿಭಿಜತ ಕೋಲಾರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಿ.ವಿ.ಶ್ರೀರಾಮರೆಡ್ಡಿ, ಮುಖಂಡರಾದ ಡಾ. ಮಧುಸೀತಪ್ಪ, ಆರ್.ಆಂಜನೇಯರೆಡ್ಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.