ಕೋಲಾರ: ನೀರಿನ ಸಮಸ್ಯೆ ನೀಗಿಸಲು ಕ್ರಮ ಕೈಗೊಳ್ಳಬೇಕು. ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಕೋರಿ ನೀಡಿದ ಮನವಿಗೆ ನಗರಸಭೆ ಆಯುಕ್ತರು ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು 18ನೇ ವಾರ್ಡಿನ ಪ್ರತಿನಿಧಿ ಎಸ್.ರಿಯಾಜ್ಪಾಷಾ ಆರೋಪಿಸಿದ್ದಾರೆ.

ಬೇಸಿಗೆ ಶುರುವಾಗುವ ಮುನ್ನವೇ ನಗರದಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದೆ. 18ನೇ ವಾರ್ಡಿನ ವ್ಯಾಪ್ತಿಯಲ್ಲಿ ನೀರಿನ ಕೊರತೆಯ ಸಮಸ್ಯೆ ಹೆಚ್ಚಿದೆ. ಈ ನಿಟ್ಟಿನಲ್ಲಿ ವಾರ್ಡ್ ವೀಕ್ಷಣೆಗೆ ಬರಬೇಕು ಎಂದು ಕೋರಿ ಕಳೆದ ಫೆ.28ರಂದೇ ಸಲ್ಲಿಸಿದ ಮನವಿಗೆ ಆಯುಕ್ತರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

ನಗರಸಭೆ ಸದಸ್ಯರ ಮನವಿಯನ್ನೇ ಈ ರೀತಿ ನಿರ್ಲ್ಯಕ್ಷಿಸುವ ಆಯುಕ್ತರು ಜನಸಾಮಾನ್ಯ ಸಮಸ್ಯೆಗಳನ್ನು ಹೇಗೆ ಬಗೆಹರಿಸುತ್ತಾರೆ ಎಂದು ರಿಯಾಜ್ಪಾಷಾ ಪ್ರಶ್ನಿಸಿದ್ದಾರೆ. ವಾರ್ಡ್ನ ಷಹಿನ್ಷಾ ನಗರ, ಮಹಾಲಕ್ಷ್ಮಿ ಬಡಾವಣೆ, ತೇರಳ್ಳಿ ರಸ್ತೆಯ ಪ್ರದೇಶಗಳಲ್ಲಿ ನೀರಿನ ಅಭಾವವಿದೆ. ಬಡಾವಣೆಯಲ್ಲಿರುವ ಸುಮಾರು ಒಂದು ಸಾವಿರ ಮನೆಗಳಿಗೆ ಕೇವಲ ಒಂದೇ ಕೊಳವೆಬಾವಿಯಿಂದ ನೀರು ಪೂರೈಸಲಾಗುತ್ತಿದೆ. ಅಧಿಕ ಒತ್ತಡ ತಾಳಗಾಗದೆ ಆ ಕೊಳವೆಬಾವಿಯ ಮೀಟರ್ ಪಂಪ್ಸೆಟ್ ಪ್ಯಾನೆಲ್ ಬೋರ್ಡ್ ಕೆಟ್ಟಿದೆ. ಹೀಗಾಗಿ ಹಲವು ನೀರು ದೊರೆಯುತ್ತಿಲ್ಲ. ಆ ಬಗ್ಗೆ ಅನೇಕ ಬಾರಿ ನಗರಸಭೆ ಕಚೇರಿಗೆ ಮಾಹಿತಿ ನೀಡಿ, ಮನವಿಪತ್ರಗಳನ್ನು ನೀಡಲಾಗಿದೆ. ಕ್ರಮ ಕೈಗೊಳ್ಳದಿದ್ದರೆ ಧರಣಿ ನಡೆಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ. ಆದರೂನಗರಸಭೆ ಆಯುಕ್ತರು ಕಣ್ಣು-ಕಿವಿಗಳಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಡತ ಮಾಯ: ವಾರ್ಡ್ನಲ್ಲಿ ಜನ ಎದುರಿಸುತ್ತಿರುವ ನೀರಿನ ಸಮಸ್ಯೆ, ಒಳಚರಂಡಿ ಸಮಸ್ಯೆಗಳ ಬಗ್ಗೆ ನೀಡಿರುವ ಮನವಿಗಳನ್ನೆ ನಾಪತ್ತೆ ಮಾಡಲಾಗಿದೆ. ಕಡತಗಳೂ ಇಲ್ಲವಾಗಿವೆ. ಈ ಕುರಿತು ಪ್ರಶ್ನಿಸಿದರೆ, ಕಳೆದುಹೋಗಿವೆ ಎಂಬ ನಿರ್ಲಕ್ಷ್ಯದ ಉತ್ತರ ದೊರೆಯುತ್ತಿದೆ. ಅದರ ಪರಿಣಾಮವಾಗಿ ಜನ ದಿನವೂ ಪರದಾಡುವಂತಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಜನರ ಸಮಸ್ಯೆಗಳನ್ನು ಪರಿಹರಿಸದ ಆಯುಕ್ತರು ನಗರದಲ್ಲಿ ಹೇಗೆ ಸಂಚರಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಸಮಸ್ಯೆಗಳ ಬಗ್ಗೆ ಮಾತನಾಡಲು ಹೋದರೆ ಅದನ್ನು ಕೇಳಿಸಿಕೊಳ್ಳಲು ಆಸಕ್ತಿ ತೋರದ ಆಯುಕ್ತರು ಕಾನೂನುಗಳ ಬಗ್ಗೆ ಮಾತನಾಡುತ್ತಾರೆ. ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ ಎಂದು ರಿಯಾಜ್ಪಾಷಾ ಆರೋಪಿಸಿದ್ದಾರೆ.

ಮನವಿ ನೀಡಿ 15 ದಿನವಾದರೂ ಯಾವುದೇ ಕ್ರಮ ಕೈಗೊಳ್ಳದೆ ಆಯುಕ್ತರು ಸತಾಯಿಸುತ್ತಿದ್ದಾರೆ. ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಧರಣಿ, ರಸ್ತೆ ತಡೆ ನಡೆಸುವ ಕುರಿತೂ ಅರ್ಜಿಯಲ್ಲಿ ತಿಳಿಸಿರುವೆ. ಆದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ ಎಂದು ತಿಳಿಸಿದ್ದಾರೆ.

ಕಣ್ಣಿನ ಸಮಸ್ಯೆ: ಕಣ್ಣಿನ ಶಸ್ತ್ರಚಿಕಿತ್ಸೆ ಹಿನ್ನೆಲೆಯಲ್ಲಿ ವಿಶ್ರಾಂತಿ ಪಡೆಯಲು ನನಗೆ ವೈದ್ಯರು ಸೂಚಿಸಿದ್ದಾರೆ. ಅಸಹಾಯಕನಾಗಿರುವ ನಾನು ಹೀಗಾಗಿ ಸಮಸ್ಯೆಗಳ ನಿವಾರಣೆಗೆ ಹಲವಾರು ಬಾರಿ ದೂರವಾಣಿ ಮೂಲಕ ಆಯುಕ್ತರಿಗೆ ಮನವಿ ಸಲ್ಲಿಸಿರುವೆ. ಆದರೂ ಆಯುಕ್ತರಿಂದ ಪ್ರಯೋಜನವಾಗಿಲ್ಲ. ಹೀಗಾಗಿ ವಾರ್ಡಿನಲ್ಲಿರುವ ಸಮಸ್ಯೆಗಳನ್ನು ಕೂಡಲೇ ಪರಿಹರಿಸದಿದ್ದರೆ ನಗರಸಭೆ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.