ಶನಿವಾರ, ಏಪ್ರಿಲ್ 10, 2021
25 °C

ನೀರು, ಕಲ್ಲಿದ್ದಲು, ಅಣುಶಕ್ತಿಯನ್ನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಡಿ: ಇಂಡಿ ಪಟ್ಟಣದ ವಿದ್ಯಾನಗರ, ಬಸವರಾಜೇಂದ್ರ ನಗರ, ಬೀರಪ್ಪ ನಗರದ ಬಡಾವಣೆಯಲ್ಲಿ ಸಮರ್ಪಕ ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ ಮಂಗಳವಾರ ಮಹಿಳೆಯರು ಹಾಗೂ ಅಲ್ಲಿನ ನಿವಾಸಿಗಳು ಖಾಲಿ ಕೊಡ ಗಳೊಂದಿಗೆ ಸಿಂದಗಿ ರಸ್ತೆಯಲ್ಲಿ ರಸ್ತೆ ತಡೆ ನಡೆಸಿ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಕಳೆದ 6 ತಿಂಗಳಿನಿಂದ ಕುಡಿಯುವ ನೀರಿಗಾಗಿ ಈ ಬಡಾವಣೆ ನಿವಾಸಿಗಳು ಅಲೆದಾಡುವಂತಾಗಿದೆ. ಬೇಸಿಗೆ ಆದ ಕಾರಣ ಸಮಸ್ಯೆ ಉಲ್ಬಣಗೊಂಡಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನೆಯಾಗಿಲ್ಲ.ಈ ಬಗ್ಗೆ ಪುರಸಭೆ ನಿರ್ಲಕ್ಷ್ಯ ಧೋರಣೆ ತಾಳಿದೆ. ಕುಡಿಯಲು ನೀರಿಲ್ಲದ ಸಮಯದಲ್ಲಿ ರಸ್ತೆಯನ್ನು ಕಾಂಕ್ರೀಟ್ ಮಾಡಲು ಹೊರಟಿರುವುದು ನಾಚಿಕೆ ಗೇಡು ಎಂದು ಪ್ರತಿಭಟನಾಕಾರರು ವ್ಯಂಗ್ಯವಾಡಿದರು. ಸ್ಥಳಕ್ಕೆ ಆಗಮಿಸಿದ ಪುರಸಭೆ ಅಧ್ಯಕ್ಷೆ ಯಮುನಾಜಿ ಸಾಳುಂಕೆ, ಸದಸ್ಯ ಉಸ್ಮಾನಗನಿ ಶೇಖ, ಭೀಮನಗೌಡ ಪಾಟೀಲ, ದೇವೇಂದ್ರ ಪಾಟೀಲ. ಹಾವಿನಾಳ ಮಠ, ಪುರಸಬೆ ವ್ಯವಸ್ಥಾಪಕ ಜಿ.ಜಿ.ವಾಲಿ ಮಾತನಾಡಿ ಕುಡಿಯುವ ನೀರು ಪೂರೈಕೆಗೆ ಎರಡು ದಿನಗಳಲ್ಲಿ ತುರ್ತು ಕ್ರಮ ಕೈಗೊಳ್ಳ ಲಾಗುವುದು. ಅಗತ್ಯ ಇದ್ದೆಡೆ ಬೋರ್‌ವೆಲ್ ಹಾಕಿಸಲಾಗುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು.ಶಾಂತಾಬಾಯಿ ಜ್ಯೋತಿ, ಸರೂಬಾಯಿ ಕಾಖಂಡಕಿ, ಜಯಶ್ರೀ ಬಿರಾದಾರ, ದಾಕ್ಷಾಯಿಣಿ ಮೈದರಗಿ, ಮಂಗಳಾ ಲಾಳಸಂಗಿ, ರೇಣುಕಾ ಲಾಳಸಂಗಿ, ಶಾಂತಾಬಾಯಿ ಹೊಸಮನಿ, ಮಂಜುಳಾ ಪಾಟೀಲ, ಮೋಹಿನಿ ಶೆಟ್ಟಿ, ಗೀತಾ ಜೋಶಿ ಶ್ರುತಿ ಹಿರೇಮಠ, ಶ್ರೀದೇವಿ ಅವಟಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.