ಭಾನುವಾರ, ಏಪ್ರಿಲ್ 18, 2021
24 °C

ನುಸುಳುಕೋರರ ವಿರುದ್ಧ ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಅಸ್ಸಾಂ ಗಲಭೆಯನ್ನು ಖಂಡಿಸಿ, ನುಸುಳುಕೋರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬುಧವಾರ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.ಐಡಿಎಸ್‌ಜಿ ಸರ್ಕಾರಿ ಕಾಲೇಜು ಬಳಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾ ನಿರತರು, ಕೆ.ಎಂ. ರಸ್ತೆ ಹಾಗೂ ಎಂ.ಜಿ. ರಸ್ತೆಯಲ್ಲಿ ಸಾಗಿದರು. ಆಜಾದ್ ಮೈದಾನ ತಲುಪಿ ಅಲ್ಲಿ ಬಹಿರಂಗ ಸಭೆ ನಡೆಸಿದರು.ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾ ನಿರತರು, `ಬಾಂಗ್ಲಾದ ವಲಸಿಗರನ್ನು ಹೊರಗಟ್ಟಬೇಕು~ `ಎಚ್ಚರ ಜಾಗೃತಗೊಂಡಿದೆ ಯುವಜನತೆ~ ಎಂದು ಸಾರುವ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು.ಅಸ್ಸಾಂನಲ್ಲಿ ಗಲಭೆಗೆ ಕಾರಣರಾದವರನ್ನು ಕೂಡಲೇ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಮೂಲನಿವಾಸಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಎಬಿವಿಪಿ ಮುಖಂಡ ದಯಾನಂದ ತಿರುಗುಣ, ಅಸ್ಸಾಂನ ಮೂಲ ನಿವಾಸಿಗಳು ಅಲ್ಲಿ ಅಲ್ಪ ಸಂಖ್ಯಾತರಾಗುತ್ತಿದ್ದಾರೆ. ಅವರ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ದೌರ್ಜನ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.`ಅಸ್ಸಾಂನಲ್ಲಿ ಗಲಭೆ ಉಂಟಾಗುತ್ತಿದ್ದಂತೆ ಈಶಾನ್ಯ ರಾಜ್ಯದ ವಿದ್ಯಾರ್ಥಿಗಳು ಆ ರಾಜ್ಯಕ್ಕೆ ತೆರಳಿದ್ದಾರೆ. ಅವರು ಕೂಡಲೇ ವಿದ್ಯಾಭ್ಯಾಸಕ್ಕೆ ಹಿಂದಿರುಗಬೇಕು. ನಾವು ಜತೆಗೆ ಇರುತ್ತೇವೆ~ ಎಂದು ಮನವಿ ಮಾಡಿದರು.ವಿದ್ಯಾರ್ಥಿ ಸಂಘಟನೆ ಮುಖಂಡ ಸಂತೋಷ್ ಕೋಟ್ಯಾನ್ ಮಾತನಾಡಿ, ಗಲಭೆಗೆ ಕಾರಣರಾದ ಕೆಲವರನ್ನು ಮಾತ್ರ ಪೊಲೀಸ್ ಇಲಾಖೆ ವಶಕ್ಕೆ ತೆಗೆದುಕೊಂಡಿದೆ. ದೇಶದೊಳಗೆ ನುಸುಳಿರುವವರನ್ನು ಪತ್ತೆಹಚ್ಚಿ, ಕೂಡಲೇ ಅವರನ್ನು ದೇಶದಿಂದ ಹೊರಗಟ್ಟಬೇಕು ಎಂದರು.ಮುಖಂಡರಾದ ದರ್ಶನ್ ಹಿರೇಮಠ್, ನವೀನ್ ಪೂಜಾರಿ, ಜೀವನ್ ಕೋಟೆ, ಸ್ವರೂಪ್, ಲವಕುಶ, ಶರತ್, ನೌಷದ್, ಸ್ವರೂಪ್, ಕಿಶೋರ್, ಇಮ್ರಾನ್, ವಿದ್ಯಾರ್ಥಿ ಮುಖಂಡರಾದ ಪೂಜಾಗೌಡ, ಪೂಜಾ, ಸಂತೋಷ್, ರಂಗಸ್ವಾಮಿ, ಅಂಕುಶ್, ಜುನೈದ್ ಪ್ರತಿಭಟನೆ ಮುಂಚೂಣಿಯಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.