ಬುಧವಾರ, ಏಪ್ರಿಲ್ 21, 2021
30 °C

ನೇರ ತೆರಿಗೆ ವಿಧೇಯಕ: ಬಿಜೆಪಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಸಹಕಾರಿ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ನೇರ ತೆರಿಗೆ ವಿಧೇಯಕವನ್ನು ಜಾರಿಗೊಳಿಸುವುದರ ಮೂಲಕ ಕೊಡಲಿ ಪೆಟ್ಟು ನೀಡುತ್ತಿರುವ ಕ್ರಮವನ್ನು ವಿರೋಧಿಸಿ ಗಾಂಧಿ ವೃತ್ತದಲ್ಲಿ ಮಂಗಳವಾರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಧರಣಿ ನಡೆಸಿದರು. ರಾಜ್ಯದಲ್ಲಿ ಸರ್ಕಾರ ವೈದ್ಯನಾಥನ್ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಲು ಶ್ರಮಿಸುತ್ತಿದೆ. ಸಹಕಾರಿ ಕ್ಷೇತ್ರಕ್ಕೆ ಹೆಚ್ಚಿನ ಸ್ವಾಯತ್ತತೆ ನೀಡಿ, ಧಾರವಾಡ ಡಿಸಿಸಿ ಬ್ಯಾಂಕ್ ಅಭಿವೃದ್ಧಿಗೆ ಶ್ರಮಿಸಿದೆ. ಮುಂಬರುವ ದಿನಗಳಲ್ಲಿ ರೈತರಿಗೆ ಶೇ.1ರ ಬಡ್ಡಿ ದರದಲ್ಲಿ ವ್ಯವಸಾಯ ಸಾಲ ನೀಡಲಾಗುತ್ತದೆ. ಆದರೆ, ಕೇಂದ್ರ ಸರ್ಕಾರ ಸಹಕಾರಿ ಕ್ಷೇತ್ರಕ್ಕೆ ತೆರಿಗೆ ವಿಧೇಯಕ ಜಾರಿಗೊಳಿಸುತ್ತಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಮಾರ್ಚ್ 7ರಂದು ನವದೆಹಲಿಯಲ್ಲಿ ಪಕ್ಷದ ವತಿಯಿಂದ ಸಹಕಾರಿ ವಿಭಾಗ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಪ್ರತಿಭಟಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ಕರಿಗೌಡರ, ಪರಶುರಾಮ ಹೆಬಸೂರ, ಶ್ರೀನಿವಾಸ ಹುಬ್ಬಳ್ಳಿ. ಎಸ್.ಬಿ. ಸಂಕಣ್ಣವರ, ಎ.ಎನ್. ಗೌಡರ, ಅಶೋಕ ನವಲಗುಂದ, ಜಿ.ಪಿ. ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು. ಗವಾಯಿಗಳ ಜಯಂತ್ಯುತ್ಸವ ನಾಳೆ


ಗದಗ: ಡಾ. ಪಂ. ಪುಟ್ಟರಾಜ ಗವಾಯಿಗಳವರ ಅಂಧರ ಶಿಕ್ಷಣ ಸಮಿತಿಯ ನೌಕರರ ಸಂಘದ ಆಶ್ರಯದಲ್ಲಿ ಲಿಂ. ಡಾ. ಪಂ. ಪುಟ್ಟರಾಜ ಗವಾಯಿಯವರ 98ನೇ ಜಯಂತ್ಯುತ್ಸವವನ್ನು ಮಾ. 3ರಂದು ವೀರೇಶ್ವರ ಪುಣ್ಯಾಶ್ರ ಮದ ಪುಟ್ಟರಾಜ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಸವರಾಜ ಹಿಡ್ಕಿಮಠ ಗೋಷ್ಠಿಯಲ್ಲಿ ತಿಳಿಸಿದರು.ಹಾನಗಲ್ ವಿರಕ್ತಮಠದ ಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಮುಂಡರಗಿಯ ಅನ್ನದಾನೀಶ್ವರ ಸ್ವಾಮೀಜಿ ಸಮ್ಮುಖ ವಹಿಸುವರು. ವೀರೇಶ್ವರ ಪುಣ್ಯಾಶ್ರ ಮದ ಕಲ್ಲಯ್ಯಜ್ಜನವರು, ಪಂಚಾಕ್ಷರ ಶಿವಾಚಾರ್ಯರು, ತೋಟೇಂದ್ರ ಶಿವಾಚಾರ್ಯರು ಹಾಜರಿರುವರು. ಮಾಜಿ ಶಾಸಕ ಜಿ.ಎಸ್. ಪಾಟೀಲ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ, ಕವಿವಿ ಕುಲಪತಿ ಎಚ್.ಡಿ. ವಾಲಿಕಾರ, ದೇವಾನಂದ ಗಾಂವಕರ, ವೆಂಕಟೇಶ ಮಾಚಕನೂರ ಮತ್ತಿತರರು ಅತಿಥಿ ಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಡಾ. ಬಿ.ಎಫ್. ದಂಡಿನ, ರೇಣುಕ ಪ್ರಸಾದ ಶಿಗ್ಲಿಮಠ, ವಿ.ಎಸ್. ಕಂಬಾಳಿಮಠ, ಕೆ.ಬಿ. ತೊಂಡಿಹಾಳ ಮತ್ತಿತರ ಗಣ್ಯರನ್ನು ಸನ್ಮಾನಿಸಲಾಗುವುದು.ಕಲಾವಿದರಾದ ಮೌನೇಶಕುಮಾರ ಛಾವಣಿ, ಕುಮಾರ ಕಣವಿ, ಮಾಲಾಶ್ರೀ ಕಣವಿ, ಪಂಚಾಕ್ಷರಿ ಕಣವಿ, ರವೀಂದ್ರ ಜಕಾತಿ, ಕಿರಣ ಹಾನಗಲ್, ಲತಾ ನಾಡಿಗೇರ, ನಾರಾಯಣ ಅಕ್ಕಸಾಲಿ, ಮಲ್ಲಿ ಕಾರ್ಜುನ ಆರಾಧ್ಯಮಠ, ಮುದ್ದಣ್ಣ ಕೊನೇಹೊಲ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. ಸಂಘದ ಅಧ್ಯಕ್ಷ ವಿ.ಎಂ. ಗುರುಮಠ, ಆರ್.ಜಿ. ಚಿಕ್ಕಮಠ, ಜಿ.ಎಸ್. ಯತ್ನಟ್ಟಿ ಎಸ್.ಸಿ. ಹಿರೇಮಠ ಮತ್ತಿತರರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.