ನೈಟ್ ರೈಡರ್ಸ್ ಫೇವರಿಟ್

ಭಾನುವಾರ, ಮೇ 26, 2019
31 °C

ನೈಟ್ ರೈಡರ್ಸ್ ಫೇವರಿಟ್

Published:
Updated:

ಹೈದರಾಬಾದ್: ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪ್ರಧಾನ ಹಂತದ ಮೇಲೆ ಕಣ್ಣಿಟ್ಟಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಬುಧವಾರ ನಡೆಯಲಿರುವ ಅರ್ಹತಾ ಹಂತದ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್‌ನ ಸಾಮರ್ಸೆಟ್ ವಿರುದ್ಧ ಪೈಪೋಟಿ ನಡೆಸಲಿದೆ.ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಆಕ್ಲೆಂಡ್ ವಿರುದ್ಧ ಎರಡು ರನ್‌ಗಳ ರೋಚಕ ಗೆಲುವು ಪಡೆದಿದ್ದ ನೈಟ್ ರೈಡರ್ಸ್ ತಂಡ ಆತ್ಮವಿಶ್ವಾಸದಲ್ಲಿದೆ. ಉಪ್ಪಳದ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಗೆಲುವು ಪಡೆದರೆ ಕೋಲ್ಕತ್ತ ತಂಡ ಪ್ರಧಾನ ಹಂತ ಪ್ರವೇಶಿಸಲಿದೆ.ಗೌತಮ್ ಗಂಭೀರ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿರುವ ನೈಟ್ ರೈಡರ್ಸ್ ಕಳೆದ ಪಂದ್ಯದಲ್ಲಿ ಸೋಲಿನ ಸುಳಿಯಿಂದ ಪಾರಾಗಿ ಬಂದಿತ್ತು. ಬ್ಯಾಟ್ಸ್‌ಮನ್‌ಗಳು ವಿಫಲರಾದರೂ, ಬೌಲರ್‌ಗಳ ಪ್ರಭಾವಿ ಪ್ರದರ್ಶನದಿಂದ ತಂಡಕ್ಕೆ ಗೆಲುವು ಲಭಿಸಿತ್ತು. ಸಾಮರ್ಸೆಟ್ ತಂಡವನ್ನು ಅಲ್ಫೊನ್ಸೊ ಥಾಮಸ್ ಮುನ್ನಡೆಸುತ್ತಿದ್ದಾರೆ. ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಕ್ರೆಗ್ ಕೀಸ್‌ವೆಟರ್ ತಂಡದಲ್ಲಿದ್ದಾರೆ.

ಇಂದಿನ ಅರ್ಹತಾ ಪಂದ್ಯಗಳು:ಲೀಸ್ಟರ್‌ಷೈರ್- ರುಹುನಾ ಇಲೆವೆನ್ (ಸಂಜೆ 4.00ಕ್ಕೆ)

ಕೋಲ್ಕತ್ತ ನೈಟ್ ರೈಡರ್ಸ್- ಸಾಮರ್ಸೆಟ್ (ರಾತ್ರಿ 8.00ಕ್ಕೆ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry