ಸವಣೂರು (ಪುತ್ತೂರು): ಸಮಾಜದಲ್ಲಿ ವೈರತ್ಯ ಬೆಳೆಯಲು ಮತ್ತು ಗೊಂದಲ ಸೃಷ್ಠಿಯಾಗಲು ನೈತಿಕ ಶಿಕ್ಷಣದ ಕೊರತೆಯೇ ಕಾರಣವಾಗಿದ್ದು, ಈ ನಿಟ್ಟಿನಲ್ಲಿ ನೈತಿಕ ಶಿಕ್ಷಣಕ್ಕೆ ಒತ್ತು ನೀಡುವ ಪ್ರಯತ್ನ ನಡೆಯಬೇಕು ಎಂದು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಹೇಳಿದರು.

ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ದಶಕ ಸಂಭ್ರಮದ ಪ್ರಯುಕ್ತ ಬುಧವಾರ ನಡೆದ `ಸ್ಥಾಪಕರ ಸಂಭ್ರಮ~ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವುದು ಅನಿವಾರ್ಯವಾಗಿದೆ. ಯಾವುದೇ ಮಾಧ್ಯಮದ ಶಿಕ್ಷಣವಿರಲಿ, ಅದರಲ್ಲಿ ನೈತಿಕತೆ ಇರುವುದು ತೀರಾ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.
ಒಳ್ಳೆಯ ಶಿಕ್ಷಣ ಸಂಸ್ಥೆಗಳಿರುವ ಊರು ಅಭಿವೃದ್ಧಿಯಾಗುತ್ತದೆ ಎಂಬುವುದಕ್ಕೆ ಸವಣೂರೇ ಸಾಕ್ಷಿ ಎಂದರು.

ಮಂಗಳೂರಿನ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಎ.ಜೆ.ಶೆಟ್ಟಿ ಅವರು ವಿದ್ಯಾಲಯದ ಸಂಸ್ಥಾಪಕ ದಿ. ಶೀಂಟೂರು ನಾರಾಯಣ ರೈ ಅವರ ಪ್ರತಿಮೆ ಅನಾವರಣಗೊಳಿಸಿದರು. ಸಂಸ್ಥೆಯಲ್ಲಿ ಶೀಂಟೂರು ನಾರಾಯಣ ರೈ ಪ್ರತಿಷ್ಠಾನ ಸ್ಥಾಪಿಸಿ, ಆ ಮೂಲಕ ಪ್ರತಿಭಾವಂತ, ಬಡ ಮತ್ತು ಕ್ರೀಡಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ತಾವು ರೂ.3ಲಕ್ಷ ದೇಣಿಗೆ ನೀಡುವುದಾಗಿ ಅವರು ತಿಳಿಸಿದರು.

ಮುಖ್ಯ ಅತಿಥಿಗಳಾಗಿದ್ದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಕೆ.ರಾಮ ಭಟ್ ಮತ್ತು ಮಂಗಳೂರಿನ ಮಿಲಾಗ್ರೀಸ್ ಇನ್ಸ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ಆಡಳಿತಾಧಿಕಾರಿ ಫ್ರಾನ್ಸಿಸ್ ಕ್ಸೇವಿಯರ್ ಗೋಮ್ಸ ಅವರು ಶೀಂಟೂರು ನಾರಾಯಣ ರೈ ಅವರ ಆದರ್ಶ ಮತ್ತು ಸೀತಾರಾಮ ರೈ ಅವರ ಶಿಕ್ಷಣ ಸೇವೆಯನ್ನು ಶ್ವಾಘಿಸಿದರು.

ಎಸ್.ಎನ್.ಆರ್.ರೂರಲ್ ಎಜುಕೇಶನ್ ಟ್ರಸ್ಟ್ನ ಆಡಳಿತ ನಿರ್ದೇಶಕ ಮತ್ತು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು, ಟ್ರಸ್ಟ್ನ ನಿರ್ದೇಶಕರಾದ ಕೆ.ಎಸ್.ಎನ್. ನಿಡ್ವಣ್ಣಾಯ, ಎನ್.ಸುಂದರ ರೈ ಸವಣೂರು , ಮಹೇಶ್ ರೈ ಸವಣೂರು, ಡಾ.ರಾಜೇಶ್ ರೈ ಸವಣೂರು, ಪೂರ್ಣಿಮಾ ಎಸ್.ಆಳ್ವ , ರಶ್ಮಿ ಅಶ್ವಿನ್ ಶೆಟ್ಟಿ , ಪ್ರೊ. ಬಿ.ಜೆ.ಸುವರ್ಣ , ಶಿಕ್ಷಕರಾದ ಕೆ.ಕಸ್ತೂರಿ, ಕವಿತಾ ಕೂಡ್ಲು, ಶಶಿಕಲಾ ಆಳ್ವ, ಮಹೇಶ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.