ನೌಕರನ ಪ್ರೋತ್ಸಾಹ
ಹಿರಿಯೂರು: ತಾಲ್ಲೂಕಿನ ವಾಣಿ ವಿಲಾಸಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಸಮಾರಂಭ ಮಾನವೀಯತೆಯ ದ್ಯೋತಕವಾಗಿತ್ತು.
ಶಾಲೆಯ ‘ಡಿ’ ದರ್ಜೆ ಸಹಾಯಕ ಚಂದ್ರಣ್ಣ ಅಂತಹ ಘಟನೆಗೆ ಕಾರಣ ರಾಗಿದ್ದಾರೆ. ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯು ತರಗತಿಗಳಲ್ಲಿ ಹೆಚ್ಚು ಅಂಕ ಗಳಿಸುವ ಒಬೊಬ್ಬ ವಿದ್ಯಾರ್ಥಿಗಳಿಗೆ ತಲಾ ` 1,001 ಬಹುಮಾನ ನೀಡುವುದಾಗಿ ಘೋಷಣೆ ಮಾಡಿ, ಅದಕ್ಕೆ ಕಾರಣವಾದ ಅಂಶವನ್ನು ತಿಳಿಸಿದಾಗ ಸಭೆಯಲ್ಲಿ ಸ್ವಲ್ಪ ಸಮಯ ಮೌನ ಆವರಿಸಿತು.
‘ತನಗೆ ಸುಮಾರು 12 ವರ್ಷದ ವಯಸ್ಸಿನವರೆಗೆ ಮಾತೇ ಬರುತ್ತಿರಲಿಲ್ಲ. ನಂತರ ಎಲ್ಲರಂತೆ ಮಾತು ಬಂದಾಗ ಪುನರ್ಜನ್ಮ ಸಿಕ್ಕಂತೆ ಆಗಿತ್ತು. ಮಾತು ಬಂದ ನಂತರ ಓದಲು ಹಾಕಿದರು. ಆದರೆ, ವಿದ್ಯೆ ನನಗೆ ಒಲಿಯಲಿಲ್ಲ. ನನಗೆ ವಿದ್ಯೆ ಒಲಿಯದಿದ್ದರೆ ಏನಂತೆ, ವಿದ್ಯೆ ಕಲಿಯಲು ಆಸಕ್ತಿ ಇರುವವರನ್ನು ಪ್ರೋತ್ಸಾಹಿಸಬೇಕೆನ್ನುವುದು ನನ್ನ ಬಯಕೆ. ಅದಕ್ಕೆಂದೇ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಚಿಕ್ಕ ಬಹುಮಾನ ನೀಡಿ ಹುರಿದುಂಬಿಸುವೆ’ ಎಂದರು.
ಮುಖ್ಯ ಶಿಕ್ಷಕ ಬಿ. ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಸಿ. ಗೋಪಾಲ್ ಅವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಅಶ್ವತ್ಥ ನಾರಾಯಣ್, ಗೋಪಾಲ್, ಶ್ರೀನಿವಾಸ್ ಮಾತನಾಡಿದರು. ಉಪನ್ಯಾಸಕರಾದ ಜಿ.ಡಿ. ಚಿತ್ತಣ್ಣ, ಎಂ. ನಾಗರಾಜ್, ಮಂಜುನಾಥ್, ಭಾಗೀರಥಮ್ಮ, ಸುಶೀಲಮ್ಮ ಹಾಜರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.