ಬುಧವಾರ, ಜೂನ್ 16, 2021
27 °C
ಹೊಣೆಹೊತ್ತ ಉಕ್ರೇನ್‌ ಸೈಬರ್‌ ಬರ್ಕತ್‌ ಗುಂಪು

ನ್ಯಾಟೊ ವೆಬ್‌ಸೈಟ್‌ಗೆ ಸೈಬರ್ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ಯಾರಿಸ್‌ (ಎಎಫ್‌ಪಿ): ನ್ಯಾಟೊ ವೆಬ್‌ಸೈಟ್‌ ಮೇಲೆ ಸೈಬರ್‌ ದಾಳಿ ನಡೆ­ದಿದೆ. ಆದರೆ, ಇದರಿಂದ ಯಾವುದೇ ಗಂಭೀರ ಸ್ವರೂಪದ ಹಾನಿ­ಯಾಗಿಲ್ಲ ಎಂದು ನ್ಯಾಟೊ ವಕ್ತಾರರು ಹೇಳಿದ್ದಾರೆ. ಈ ಅಂತ­ರ್ಜಾಲ ತಾಣಕ್ಕೆ ತಾನು ಕನ್ನ (ಹ್ಯಾಕ್‌) ಹಾಕಿರುವುದಾಗಿ ಉಕ್ರೇ­ನಿನ ಸೈಬರ್‌ ಬರ್ಕತ್‌ ಗುಂಪು ಹೇಳಿಕೊಂಡಿದೆ.ಹ್ಯಾಕರ್‌ಗಳು ಶನಿವಾರ ದತ್ತಾಂಶ­ಗಳ ಮಹಾಪೂರವನ್ನು ಹರಿಯ­ಬಿಡುವ ಮೂಲಕ ವೆಬ್‌ಸೈಟ್‌ಗೆ ಕನ್ನಹಾಕಿದ್ದರು. ಇದರಿಂದ ಕಂಪ್ಯೂ­ಟರ್‌ ಜಾಲವು ಕೆಲವು ಕಾಲ ನಿಷ್ಕ್ರಿ­ಯಗೊಂಡು ಸೇವೆ ಸ್ಥಗಿತಗೊಂಡಿತ್ತು. ಆದರೆ, ಗಂಭೀರ ರೀತಿಯ ತೊಂದರೆ ಆಗಿಲ್ಲ. ಎದುರಾಗಿರುವ ತಾಂತ್ರಿಕ ಸಮಸ್ಯೆಯನ್ನು ಶೀಘ್ರ ನಿವಾರಿಸಲು ತಜ್ಞರು ಶ್ರಮಿಸುತ್ತಿದ್ದಾರೆ ಎಂದು ನ್ಯಾಟೊ ವಕ್ತಾರರು ‘ಟ್ವಿಟ್ಟರ್‌’ನಲ್ಲಿ ತಿಳಿಸಿದ್ದಾರೆ.ಈ ದಾಳಿ ಹೊಣೆ ಹೊತ್ತಿರುವು­ದಾಗಿ ಹೇಳಿರುವ ಉಕ್ರೇನಿನ ಸೈಬರ್‌ ಬರ್ಕತ್‌ ಗುಂಪು, ನ್ಯಾಟೊ ಉಕ್ರೇನ್‌ ಬಿಕ್ಕಟ್ಟಿನ ವಿಷಯದಲ್ಲಿ ಮಧ್ಯಪ್ರವೇಶ ಮಾಡಿದೆ. ಅದು ‘ಕೀವ್‌ ಜುಂಟಾ’ಗೆ ಬೆಂಬಲ ನೀಡಿದೆ. ಆದ್ದರಿಂದ ಅದರ ಮೂರು ವೆಬ್‌ಸೈಟ್‌ಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಿಕೊಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.