ಟ್ರಿಪೋಲಿ (ಪಿಟಿಐ): ಲಿಬಿಯಾ ಸರ್ವಾಧಿಕಾರಿ ಮುಅಮ್ಮರ್ ಗಡಾಫಿಯ ಒಬ್ಬ ಮಗ ಮತ್ತು ಮೂವರು ಮೊಮ್ಮಕ್ಕಳು ನ್ಯಾಟೊ ಪಡೆಗಳು ನಡೆಸಿದ ವೈಮಾನಿಕ ದಾಳಿಗೆ ಬಲಿಯಾಗಿದ್ದಾರೆ.

ನ್ಯಾಟೊ ಪಡೆಗಳ ಯುದ್ಧ ವಿಮಾನಗಳು ಶನಿವಾರ ರಾತ್ರಿ ಕ್ಷಿಪಣಿ ದಾಳಿ ನಡೆಸಿದ್ದು, ಇದರಿಂದ ಗಡಾಫಿಯ ಏಳು ಮಕ್ಕಳಲ್ಲಿ ಕಿರಿಯವನಾದ 29 ವರ್ಷ ವಯಸ್ಸಿನ ಸೈಫ್ ಅಲ್- ಅರಬ್ ಮತ್ತು 12 ವರ್ಷದೊಳಗಿನ ಮೂವರು ಮೊಮ್ಮಕ್ಕಳು ಸತ್ತಿದ್ದಾರೆ ಎಂದು ಸರ್ಕಾರದ ವಕ್ತಾರ ಮೌಸಾ ಇಬ್ರಾಹಿಂ ಭಾನುವಾರ ಹೇಳಿದ್ದಾರೆ.

ಟ್ರಿಪೋಲಿಯಲ್ಲಿರುವ ಸೈಫ್ ಅಲ್- ಅರಬ್ನ ಮನೆಯ ಮೇಲೆ ಈ ವೈಮಾನಿಕ ದಾಳಿ ನಡೆದಿದೆ. ಈ ಸಂದರ್ಭದಲ್ಲಿ ಗಡಾಫಿ, ಅವರ ಪತ್ನಿ ಮತ್ತು ಕೆಲವು ಸಂಬಂಧಿಕರು ಹಾಗೂ ಸ್ನೇಹಿತರು ಇದ್ದರು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

‘ಆದರೆ ನಮ್ಮ ನಾಯಕರು (ಗಡಾಫಿ) ಮತ್ತು ಅವರ ಪತ್ನಿ ಸುರಕ್ಷಿತವಾಗಿದ್ದು, ಆರೋಗ್ಯದಿಂದ ಇದ್ದಾರೆ. ಮನೆಯಲ್ಲಿದ್ದ ಕೆಲವರಿಗೆ ಗಾಯಗಳಾಗಿವೆ’ ಎಂದು ಇಬ್ರಾಹಿಂ ಹೇಳಿದರು.

‘ನಮ್ಮ ನಾಯಕರನ್ನು ಹತ್ಯೆ ಮಾಡಲು ಅಮೆರಿಕ ನೇತೃತ್ವದ ಮೈತ್ರಿ ಪಡೆಗಳು ನೇರ ಯುದ್ಧಕ್ಕೆ ಇಳಿದಿವೆ. ಇದಕ್ಕೆ ಅಂತರರಾಷ್ಟ್ರೀಯ ಕಾನೂನಿನಲ್ಲಿ ಮತ್ತು ನೈತಿಕವಾಗಿ ಕೂಡ ಯಾವುದೇ ಅವಕಾಶವಿಲ್ಲ. ನ್ಯಾಟೊ ಪಡೆಗಳು ನಮ್ಮನ್ನು ಮೃಗೀಯವಾಗಿ ನಡೆಸಿಕೊಳ್ಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಲಿಬಿಯಾ ಮೇಲೆ ನಡೆಯುತ್ತಿರುವ ಈ ದೌರ್ಜನ್ಯವನ್ನು ಗಮಿಸಿದರೆ ಇದು ಇಲ್ಲಿನ ನಾಗರಿಕರ ರಕ್ಷಣೆಗಾಗಿ ಅಮೆರಿಕದ ಮೈತ್ರಿ ಪಡೆಗಳು ನಡೆಸುತ್ತಿರುವ ಹೋರಾಟ ಎನಿಸುವುದಿಲ್ಲ’ ಎಂದು ಇಬ್ರಾಹಿಂ ಹೇಳಿದರು.
ಈ ದಾಳಿಯಿಂದ ಸಾವನ್ನಪ್ಪಿದ ಗಡಾಫಿಯ ಮೂವರು ಮೊಮ್ಮಕ್ಕಳ ಹೆಸರನ್ನು ಹೇಳಲು ನಿರಾಕರಿಸಿದ ಅವರು, ಸತ್ತ ಮಕ್ಕಳು 12 ವರ್ಷದೊಳಗಿನವರು ಎಂದರು.

ಈ ಮಧ್ಯೆ ಸಂಧಾನ ಮತ್ತು ಕದನ ವಿರಾಮದ ಮಾತುಕತೆಗೆ ಬರುವಂತೆ ಕೋರಿರುವ ಗಡಾಫಿಯ ಪ್ರಸ್ತಾವವನ್ನು ತಿರಸ್ಕರಿಸಿರುವ ಅಮೆರಿಕ ನೇತೃತ್ವದ ಮೈತ್ರಿ ಕೂಟ ವೈಮಾನಿಕ ದಾಳಿಯನ್ನು ಮುಂದುವರಿಸಿದೆ.

ವೈಮಾನಿಕ ದಾಳಿ ನಡೆಸಿರುವುದನ್ನು ಒಪ್ಪಿಕೊಂಡಿರುವ ನ್ಯಾಟೊ ಪಡೆಗಳು, ಇದರಿಂದ ಸಂಭವಿಸಿರುವ ಸಾವಿನ ವರದಿಯನ್ನು ದೃಢಪಡಿಸಿಯೂ ಇಲ್ಲ ಅಥವಾ ತಳ್ಳಿಯೂ ಹಾಕಿಲ್ಲ.

ವಿಶ್ವಸಂಸ್ಥೆ ಆದೇಶ ಅಗತ್ಯ: ಮಾಸ್ಕೊ (ಪಿಟಿಐ): ನ್ಯಾಟೊ ಪಡೆಗಳು ಲಿಬಿಯಾ ವಿರುದ್ಧ ಭೂ ಸೇನಾ ದಾಳಿ ನಡೆಸುವ ಬಗ್ಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಆದೇಶ ಬೇಕೆಂದು ರಷ್ಯಾ ಹೇಳಿದೆ.

‘ಮಾಹಿತಿ ಪ್ರಕಾರ ನ್ಯಾಟೊ ಮತ್ತು ಯೂರೋಪಿಯನ್ ಯೂನಿಯನ್ ಈ ನಿಟ್ಟಿನಲ್ಲಿ ಕಾರ್ಯನಿರತವಾಗಿವೆ. ಯೂರೋಪಿಯನ್ ಯೂನಿಯನ್ ಮಾನವೀಯ ಬೆಂಗಾವಲು ಪಡೆಯಲು ಈ ಯೋಜನೆಯನ್ನು ಅಭಿವೃದ್ಧಿಪಡಿಸುತ್ತಿದ್ದು ವಿಶ್ವಸಂಸ್ಥೆ ಹಸಿರು ನಿಶಾನೆ ನೀಡಿದ ನಂತರ ಇದು ಕಾರ್ಯಗತಗೊಳ್ಳಲಿದೆ’ ಎಂದು ರಷ್ಯಾದ ವಿದೇಶಾಂಗ ಸಚಿವ ಸರ್ಗಿ ಲವ್ರೋವ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.