ಸೋಮವಾರ, ಮೇ 17, 2021
23 °C

ನ. 14ರಿಂದ ಮಕ್ಕಳ ಚಲನ ಚಿತ್ರೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಜಿಲ್ಲೆಯಲ್ಲಿ ನ. 14ರಿಂದ ಶಾಲಾ ಮಕ್ಕಳಿಗೆ ಜ್ಞಾನಾರ್ಜನೆ ಹಾಗೂ ಆರೋಗ್ಯಕರ ಮನರಂಜನೆ ನೀಡುವ ಸಲುವಾಗಿ 4ರಿಂದ 10ನೇ ತರಗತಿಯ ಶಾಲಾ ಮಕ್ಕಳಿಗೆ ಎರಡು ಹಂತಗಳಲ್ಲಿ `ಮಕ್ಕಳ ಚಲನ ಚಿತ್ರೋತ್ಸವ~ ಏರ್ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ತಿಳಿಸಿದರು.ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಒಟ್ಟು 30 ಚಲನಚಿತ್ರ ಮಂದಿರಗಳಲ್ಲಿ ನ. 14ರಿಂದ ಬೆಳಿಗ್ಗೆ 8.30ರಿಂದ 10.30ರವರೆಗೆ ಪ್ರದರ್ಶನ ನಡೆಯಲಿದೆ. ಸಂಬಂಧಪಟ್ಟ ಚಿತ್ರಮಂದಿರಗಳ ಮಾಲೀಕರು ಅಗತ್ಯ ಸಹಕಾರ ನೀಡುವಂತೆ ಕೋರಿದ ಅವರು, ಜಿಲ್ಲೆಯ ಬಾಲ ಪ್ರತಿಭೆಗಳಿಂದ ಅಥವಾ ಆದರ್ಶ ಶಿಕ್ಷಕರಿಂದ ಕಾರ್ಯಕ್ರಮ ಉದ್ಘಾಟಿಸುವಂತೆ ಸೂಚಿಸಿದರು.ಜಿಲ್ಲೆಯಲ್ಲಿ ಎರಡು ಹಂತದಲ್ಲಿ ಚಿತ್ರೋತ್ಸವ ನಡೆಯಲಿದೆ. ಮೊದಲನೇ ಹಂತ ನ. 14ರಿಂದ 18ರವರೆಗೆ. ಆಗ ದಾವಣಗೆರೆ, ಚನ್ನಗಿರಿ ಹಾಗೂ ಹೊನ್ನಾಳಿ ತಾಲ್ಲೂಕುಗಳು ಸೇರಲಿವೆ. ಎರಡನೇ ಹಂತದಲ್ಲಿ ಹರಿಹರ, ಹರಪನಹಳ್ಳಿ ಹಾಗೂ ಜಗಳೂರು ತಾಲ್ಲೂಕುಗಳು ಬರುತ್ತವೆ. ಆ ತಾಲ್ಲೂಕುಗಳಲ್ಲಿ ನ. 21ರಿಂದ 24ರವರೆಗೆ ಚಲನಚಿತ್ರಗಳು ಪ್ರದರ್ಶನವಾಗಲಿವೆ ಎಂದು ತಿಳಿಸಿದರು.ಚಿತ್ರಮಂದಿರದ ವ್ಯವಸ್ಥಾಪಕರು ಚಿತ್ರ ವೀಕ್ಷಿಸಲು ಬರುವ ವಿದ್ಯಾರ್ಥಿಗಳಿಂದ ಟಿಕೆಟ್‌ಗಳನ್ನು ಪಡೆದು ಪ್ರವೇಶ ನೀಡಬೇಕು ಎಂದರು.ಯಾವ್ಯಾವ ಚಿತ್ರ: ರಾಜ್ಯ ಶೈಕ್ಷಣಿಕ, ಸಾಂಸ್ಕೃತಿಕ ಮಕ್ಕಳ ಚಿತ್ರಸಂಸ್ಥೆಯ ವ್ಯವಸ್ಥಾಪಕ ಎಸ್. ರಮೇಶ್ ಮಾತನಾಡಿ, ಈ ಬಾರಿಯ ಚಿತ್ರೋತ್ಸವದಲ್ಲಿ `ಕಲರವ~, `ಮ್ಯೋಜಿಕ್ ಅಜ್ಜಿ~, `ಚಂದನದ ಚಿಗುರು~, `ಕೇರಾಫ್ ಫುಟ್‌ಪಾತ್~, `ಚಿನ್ನಾರಿ ಮುತ್ತಾ~, `ಕೊಟ್ರೇಶಿ ಕನಸು~, `ಚಿಲಿಪಿಲಿ ಹಕ್ಕಿಗಳು~, `ಮಣ್ಣಿನ ಮಕ್ಕಳು~, `ಜುರಾಸಿಕ್ ಪಾರ್ಕ್~, `ಸೂಪರ್ ನೋವಾ 459~, `ಜೈ ಕರ್ನಾಟಕ~, `ಸ್ಕೂಲ್ ಮಾಸ್ಟರ್~ ಹಾಗೂ `ತಾರೆ ಜಮೀನ್ ಫರ್~ ಸೇರಿದಂತೆ ಇತರ ಚಿತ್ರಗಳು ಪ್ರದರ್ಶನವಾಗಲಿವೆ ಎಂಬ ಮಾಹಿತಿ ನೀಡಿದರು. ಶಾಲಾ ಮಕ್ಕಳಿಗೆ ಪ್ರವೇಶ ದರ ವಿದ್ಯಾರ್ಥಿಗೆ ್ಙ 8ನಂತೆ ಟಿಕೆಟ್ ಮಾರಾಟ ಮಾಡಲಾಗುವುದು ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.