ಭಾನುವಾರ, ಜನವರಿ 26, 2020
28 °C

ಪಂಜಾಬ್: ಅಕ್ರಮ ಹಣ, ಮದ್ಯ, ಜಾಮೀನುರಹಿತ ವಾರೆಂಟ್ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂಡೀಗಡ (ಐಎಎನ್‌ಎಸ್): ಲೆಕ್ಕವಿಲ್ಲದ 15 ಕೋಟಿ ರೂಪಾಯಿ ವಶ, 1.6 ಲಕ್ಷ ಲೀಟರ್ ಅಕ್ರಮ ಮದ್ಯ ಸ್ವಾಧೀನ, 7500 ಜಾಮೀನುರಹಿತ ವಾರೆಂಟ್‌ಗಳ ಜಾರಿ, 1721 ಜನರಿಗೆ ಮುಂಜಾಗ್ರತಾ ಕ್ರಮವಾಗಿ ಎಚ್ಚರಿಕೆ, ಅಫೀಮು ತಯಾರಿಕೆಗೆಂದು ಸಂಗ್ರಹಿಸಿದ್ದ 1.55 ಲಕ್ಷ ಕೆ.ಜಿ ಗಸಗಸೆ ಸಿಪ್ಪೆ ಮುಟ್ಟುಗೋಲು...

ಜ.30ರಂದು 117 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆಗೆ ಸಜ್ಜಾಗುತ್ತಿರುವ ಪಂಜಾಬ್‌ನಲ್ಲಿನ ಅಂಕಿಅಂಶಗಳು ಇವು. ಕಳೆದ 15 ದಿನಗಳ ಅವಧಿಯಲ್ಲಿ ವಶಪಡಿಸಿಕೊಂಡಿರುವ ವಸ್ತುಗಳ ಪಟ್ಟಿ ಇದು ಎಂದು ಚುನಾವಣಾ ಆಯೋಗ ತಿಳಿಸಿದೆ.

ಆಕಾಂಕ್ಷಿ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಜ.12 ಕಡೆಯ ದಿನವಾಗಿದ್ದು ಅದಕ್ಕೆ ಮುನ್ನವೇ ಚುನಾವಣಾ ನೀತಿ ಉಲ್ಲಂಘಿಸಿದ ಹಲವಾರು ಪ್ರಕರಣಗಳು ಪತ್ತೆಯಾಗಿವೆ.

ರಾಜ್ಯದಾದ್ಯಂತ ಈವರೆಗೆ  1,48,787 ಶಸ್ತ್ರಾಸ್ತ್ರಗಳನ್ನು ಅವುಗಳ ಮಾಲೀಕರು ಪೊಲೀಸ್ ಠಾಣೆ ಮತ್ತು ಸ್ಥಳೀಯ ಆಡಳಿತ ಕಚೇರಿಗಳಿಗೆ ತಂದು ಒಪ್ಪಿಸಿದ್ದು, ನಿಯಮಬಾಹಿರವಾಗಿ ಹೊಂದಿದ್ದ 30 ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಂಟಿ ಚುನಾವಣಾಧಿಕಾರಿ ಗುರ್‌ಕೀರ್ತ್ ಕೃಪಾಲ್ ಸಿಂಗ್ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)