ಗುರುವಾರ , ಜನವರಿ 23, 2020
28 °C

ಪಕ್ಷ ಬಲಪಡಿಸಲು ಡಿವಿಎಸ್‌ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಕ್ಷ ಬಲಪಡಿಸಲು ಡಿವಿಎಸ್‌ ಸಲಹೆ

ಯಲಹಂಕ: ಗೆಲುವು ತಂದುಕೊಡುವ ದಿಕ್ಕಿನಲ್ಲಿ ಪಕ್ಷದ ಆಂತರಿಕ ಶಕ್ತಿಯನ್ನು ಬಲಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ತಿಳಿಸಿದರು.ಯಲಹಂಕ ಕ್ಷೇತ್ರದ ಬಿಜೆಪಿ ಕಾರ್ಯ ಕರ್ತರ ವತಿಯಿಂದ ರಾಜಾನುಕುಂಟೆ ಸಮೀಪದ ಸಿಲ್ವರ್‌ ಓಕ್‌ ರೆಸಾರ್ಟ್‌ನಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ನಾಗರಿಕರು ಬದಲಾವಣೆಯನ್ನು ಬಯಸಿದ್ದಾರೆ. ಹಾಗಾಗಿ ಜಾಗರೂ ಕತೆಯಿಂದ ರಾಜಕೀಯ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ತನ್ನ ತೆಕ್ಕೆಗೆ ಪಡೆ ಯುವಲ್ಲಿ ತಳಮಟ್ಟದ ಕಾರ್ಯಕರ್ತರ ಜವಾಬ್ದಾರಿ ಹೆಚ್ಚಿದೆ ಎಂದರು.

ಶಾಸಕ ಎಸ್‌.ಆರ್‌.ವಿಶ್ವನಾಥ್‌ ಮಾತನಾಡಿ, ಆತ್ಮವಿಶ್ವಾಸವನ್ನು ಮೈಗೂ ಡಿಸಿಕೊಂಡು ಪಕ್ಷವನ್ನು ಬಲವರ್ಧಿ ಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಪ್ರತಿಕ್ರಿಯಿಸಿ (+)