ಗುರುವಾರ , ಜೂನ್ 24, 2021
23 °C

ಪತ್ರಕರ್ತರ ಮೇಲೆ ಹಲ್ಲೆ: ವಿವಿಧೆಡೆ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪತ್ರಕರ್ತರ ಮೇಲೆ ಹಲ್ಲೆ: ವಿವಿಧೆಡೆ ಪ್ರತಿಭಟನೆ

ವಿಜಾಪುರ: ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ವರದಿಗೆ ತೆರಳಿದ್ದ ಪತ್ರಕರ್ತರ ಮೇಲೆ ವಕೀಲರು ಹಲ್ಲೆ ನಡೆಸಿದ ಘಟನೆಯನ್ನು ಖಂಡಿಸಿ ಪತ್ರಕರ್ತರು ಶುಕ್ರವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ಅಂಬೇಡ್ಕರ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ, ಅಲ್ಲಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಮೆರವಣಿಗೆ ನಡೆಸಿದರು.



`ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ತಪ್ಪಿತಸ್ಥ ವಕೀಲರ ಸನದು ರದ್ದು ಪಡಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಂಥ ಘಟನೆಗಳು ಮರುಕಳಿಸದಂತೆ ರಾಜ್ಯ ಸರ್ಕಾರ ಎಚ್ಚರ ವಹಿಸಬೇಕು. ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕು~ ಎಂದು ಹಿರಿಯ ಪತ್ರಕರ್ತರಾದ ಗೋಪಾಲ ನಾಯಕ, ರಫೀ ಭಂಡಾರಿ, ಸದಾನಂದ ಮೋದಿ, ಎಂ.ಜಿ. ಸಾರವಾಡ ಒತ್ತಾಯಿಸಿದರು.



ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ರಾಜು ಕೊಂಡಗೂಳಿ ಹೆಚ್ಚುವರಿ ಜಿಲ್ಲಾಧಿಕಾರಿ ಕಾಶೀನಾಥ ಪವಾರ ಅವರಿಗೆ ಮನವಿ ಸಲ್ಲಿಸಿದರು.



ಕ್ಯಾಮೆರಾಮನ್‌ಗಳಾದ ಪ್ರಶಾಂತ ಕುಂಬಾರ, ಇರ್ಫಾನ್ ಬಿ.ನೇವಾರ, ಶ್ರೀಶೈಲ ಕೊಟ್ಟಲಗಿ, ಆಸೀಫ್‌ಹುಸೇನ ಬಾಗವಾನ, ಸಂಗಮೇಶ ಕುಂಬಾರ, ಲಾಲ್‌ಸಾಬ ಜಮಾದಾರ, ಸುನೀಲ್ ಕಾಂಬಳೆ,  ಮಂಜು, ಛಾಯಾಗ್ರಾಹಕರಾದ ಸುರೇಶ ತೇರದಾಳ, ಸುಧೀಂದ್ರ ಕುಲಕರ್ಣಿ, ರಾಜು ಢವಳಗಿ, ರಾಜು ಹಜೇರಿ ಮತ್ತಿತರರು ಆರೋಪಿಗಳನ್ನು ಬಂಧಿಸಲು ಆಗ್ರಹಿಸಿದರು.



ಪತ್ರಕರ್ತರಾದ ಸುಶೀಲೇಂದ್ರ ನಾಯಿಕ, ಮಂಜುನಾಥ ಕೊಣಸೂರ, ಸಂಗಮೇಶ ಚೂರಿ, ಅನಿಲ ಹೊಸಮನಿ, ಹೇಮಂತ ತುಳಜಮ್ಮನವರ, ರುದ್ರಪ್ಪ ಆಸಂಗಿ, ಮಹೇಶ ಶಟಗಾರ, ರಾಜು ಪಾಟೀಲ, ಪ್ರಭು ಮಲ್ಲಿಕಾರ್ಜುನಮಠ, ಅಕ್ಷಯ್ ಕುಲಕರ್ಣಿ, ಸಿದ್ದು, ಕೆ.ಕೆ. ಕುಲಕರ್ಣಿ, ಸಾಯಿ, ವಿನೋದ ಶಿಂಪಿ, ಸೂರ್ಯಕಾಂತ ಜಮಾದಾರ, ಸಂಜೀವ ಕರಾಬಿ, ಕುಲಕರ್ಣಿ, ಸಚೇಂದ್ರ ಲಂಬು, ಪ್ರಕಾಶ ಕುಂಬಾರ, ರವಿ ಬಿಸನಾಳ, ಪಿ.ಬಿ. ಹುಲ್ಲೂರ ಘಟನೆಯನ್ನು ಖಂಡಿಸಿದರು.





ಯುವ ಪತ್ರಕರ್ತರ ಒಕ್ಕೂಟ: ಬೆಂಗಳೂರು ಘಟನೆ ಖಂಡಿಸಿ ಕರ್ನಾಟಕ ರಾಜ್ಯ ಯುವ ವರದಿಗಾರರ ಒಕ್ಕೂಟದ ಸದಾನಂದ ದಾರ್ಪಳ ಇತರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 



ಕ್ರಮಕ್ಕೆ ಆಗ್ರಹ



ಇಂಡಿ: ಬೆಂಗಳೂರಿನ ಕೋರ್ಟ್ ಆವರಣದಲ್ಲಿ ಪತ್ರಕರ್ತರು ಮತ್ತು ಪೊಲೀಸರ ಮೇಲೆ ವಕೀಲರು ನಡೆಸಿದ ಹಲ್ಲೆ ಪ್ರಕರಣವನ್ನು ಖಂಡಿಸಿ ತಾಲ್ಲೂಕು ಪತ್ರಕರ್ತರ ಸಂಘದ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ವಕೀಲರನ್ನು ಬಂಧಿಸಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು. ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಾಗಿದೆ ಎಂದು ಆರೋಪಿಸಿದರು.



ತಹಶೀಲ್ದಾರ ಜಿ.ಎಲ್. ಮೇತ್ರಿ ಮನವಿ ಸ್ವೀಕರಿಸಿದರು. ಪತ್ರಕರ್ತರಾದ ಎ.ಸಿ. ಪಾಟೀಲ, ಕೆ.ಬಿ. ಸಿಂಗೇಗೋಳ, ಎಲ್.ಡಿ. ರಾಠೋಡ, ಆರ್.ಎಸ್. ಚಾಬುಕಸವಾರ, ಮಲ್ಲು ಆಳೂರ, ರಾಜಶೇಖರ ಕುಲಕರ್ಣಿ, ಎ.ಆರ್.ಜಮಾದಾರ, ಎಂ.ಬಿ.ಮಾಣಿಕ, ಎ.ಎಂ.ಹವಾಲ್ದಾರ, ಅಬರಾರ ಪಟೇಲ, ಆರ್.ಆರ್.ಅಷ್ಟೇಕರ, ರಾಜಕುಮಾರ ಪಡಗಾನೂರ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.



ಪ್ರೆಸ್ ಕ್ಲಬ್‌ನಿಂದ ಪ್ರತಿಭಟನೆ

ಸಿಂದಗಿ: ಬೆಂಗಳೂರು ಸಿವಿಲ್ ಕೋರ್ಟ್ ಆವರಣದಲ್ಲಿ ವಕೀಲರು ಮಾಧ್ಯಮದವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ಘಟನೆ ಅತ್ಯಂತ ಖಂಡನೀಯವಾದುದು ಎಂದು ಸಿಂದಗಿ ಪ್ರೆಸ್ ಕ್ಲಬ್ ಶುಕ್ರವಾರ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿತು.



ಪತ್ರಕರ್ತರು ತಪ್ಪಿತಸ್ಥ ವಕೀಲರ ವಿರುದ್ದ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಶಾಂತೂ ಹಿರೇಮಠ ಮಾತನಾಡಿ, ವಕೀಲರು ಪತ್ರಕರ್ತರ ಮೇಲೆ ನಡೆಸಿದ ಹಲ್ಲೆ ಇಡೀ ಅಭಿವ್ಯಕ್ತಿ ಸ್ವಾತಂತ್ರ್ಯ ಮೇಲೆ ನಡೆಸಿದ ಹಲ್ಲೆಯಾಗಿದೆ ಎಂದು ಖಂಡಿಸಿದರು. ನಂತರ ತಹಶೀಲ್ದಾರ ಡಾ. ಶಂಕ್ರಣ್ಣ ವಣಕಿಹಾಳ ಅವರಿಗೆ ಮನವಿ ಪತ್ರ ಸಲ್ಲಿಸಿದರು.



ಪ್ರೆಸ್ ಕ್ಲಬ್ ಉಪಾಧ್ಯಕ್ಷ ವೀರೇಶ ಮಠಪತಿ,  ಕಾರ್ಯದರ್ಶಿ ರಮೇಶ ಪೂಜಾರ, ಪತ್ರಕರ್ತರಾದ ನಂದೀಶ ಹಿರೇಮಠ, ವಿಜು ಪತ್ತಾರ, ಲಕ್ಷ್ಮಣ ಕುರದಗೊಂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.



ಪ್ರತಿಭಟನೆಗೆ ಬೆಂಬಲಿಸಿದ ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎನ್.ಕಿರಣರಾಜ್, ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಅಧ್ಯಕ್ಷ ಸಂತೋಷ ಪಾಟೀಲ, ಜಯಕರ್ನಾಟಕ ತಾಲ್ಲೂಕು ಅಧ್ಯಕ್ಷ ಸಂತೋಷ ಮಣಿಗಿರಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ಶಿವಾನಂದ ಪಾಟೀಲ ಮಾತನಾಡಿದರು.



ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ ಹಿರೇಕುರುಬರ, ವಕ್ತಾರ ಸಿದ್ದಣ್ಣ ಚೌಧರಿ, ಶಿವಾನಂದ ಹಡಪದ, ಸಂತೋಷ ಶಿರಕನಹಳ್ಳಿ, ಜಿ.ಎಂ.ದೊಡ್ಡೇನ, ಸಿದ್ದಲಿಂಗ ಕಿಣಗಿ, ಆರ್.ಎಂ.ನಧಾಪ, ಆಲಮೇಲ ಗ್ರಾಪಂ ಸದಸ್ಯ ಬಾಬು ಬಂಡಗಾರ, ರವಿ ದೇವರಮನಿ ಗೋಲಗೇರಿ, ಯಲ್ಲೂ ಇಂಗಳಗಿ ಉಪಸ್ಥಿತರಿದ್ದರು.



ಹಲ್ಲೆಗೆ ಖಂಡನೆ

ತಾಳಿಕೋಟೆ: ಬೆಂಗಳೂರಿನ ಕೋರ್ಟ್ ಆವರಣದಲ್ಲಿ ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ ವಕೀಲರ ಕುಕೃತ್ಯವನ್ನು ಖಂಡಿಸಿ ತಾಳಿಕೋಟೆ ಪತ್ರಕರ್ತರ ಸಂಘದ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.



ಪ್ರತಿಭಟನೆ ನಂತರ ವಿಶೇಷ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಜಿ.ಟಿ. ಘೋರ್ಪಡೆ, ಬಸವರಾಜ ಕಟ್ಟಿಮನಿ, ಶ್ರಿಶೈಲ ಬಿರಾದಾರ, ನಾಗಭೂಷಣ ಸಂಡೂರ, ಶಿವಶಂಕರ ಹಿರೇಮಠ ಇದ್ದರು.



ಪತ್ರಕರ್ತರಿಂದ ಪ್ರತಿಭಟನೆ



ಮುದ್ದೇಬಿಹಾಳ: ಬೆಂಗಳೂರಿನಲ್ಲಿ ನ್ಯಾಯಾಲಯದ ಆವರಣದಲ್ಲಿ ವರದಿ ಮಾಡಲು ಹೋಗಿದ್ದ  ಮಾಧ್ಯಮದವರು ಹಾಗೂ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ವಕೀಲರ ವಿರುದ್ಧ ತೀವ್ರ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿ, ತಹಶೀಲ್ದಾರ ಸೋಮಲಿಂಗಪ್ಪ ಗೆಣ್ಣೂರ ಮೂಲಕ ರಾಜ್ಯಪಾಲರಿಗೆ ಬರೆದ ಮನವಿ ಪತ್ರ ಸಲ್ಲಿಸಿದರು.



ಸಂಘದ ಅಧ್ಯಕ್ಷ ಡಿ.ಬಿ.ವಡವಡಗಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ಪತ್ರಕರ್ತರು ವಕೀಲರ ವರ್ತನೆಯನ್ನು ಖಂಡಿಸಿದರು. ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಜಿ.ಟಿ. ಘೋರ್ಪಡೆ, ಪ್ರಧಾನ ಕಾರ್ಯದರ್ಶಿ ಎಚ್.ಆರ್. ಬಾಗವಾನ, ಕೆ.ಎಂ.ರಿಸಾಲ್ದಾರ, ವಿ.ಎಸ್. ನಾವದಗಿ. ಎಂ.ಎಸ್.ಗಡೇದ, ಗುರುನಾಥ ಕತ್ತಿ, ರವಿ ನಂದೆಪ್ಪನವರ, ಶಿವಶಂಕರ ಹಿರೇಮಠ, ಬಸವರಾಜ ಕುಂಬಾರ, ನೂರೇನಬಿ ನದಾಫ, ಅಮೀನಸಾ ಮುಲ್ಲಾ, ಪರಶುರಾಮ ಕೊಣ್ಣೂರ, ಮುತ್ತು ವಡವಡಗಿ, ನಾಗಭೂಷಣ ಸೊಂಡೂರ, ಶ್ರೀಶೈಲ ಬಿರಾದಾರ ಮೊದಲಾದವರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.