ಪರಮಾಣು ಇಂಧನ ವಿರೋಧಿಸಿ ರ್್ಯಾಲಿ

ಟೋಕಿಯೊ (ಎಪಿ): ಫುಕುಶಿಮಾ ಪರಮಾಣು ದುರಂತದ ಮೂರನೇ ವರ್ಷಾಚರಣೆ ಸಂದರ್ಭದಲ್ಲಿ ಭಾನುವಾರ ಪರಮಾಣು ಇಂಧನದ ಬಳಕೆ ನಿಲ್ಲಿಸುವಂತೆ ಆಗ್ರಹಿಸಿ ಜಪಾನ್ನ ವಿವಿಧ ನಗರಗಳಲ್ಲಿ ಸಾವಿರಾರು ಜನ ಪ್ರತಿಭಟನೆ ನಡೆಸಿದರು.
ಫುಕುಶಿಮಾ ಪರಮಾಣು ಸ್ಥಾವರದಲ್ಲಿ ಸ್ಥಗಿತಗೊಂಡಿರುವ 48 ಘಟಕಗಳ ಮರುಚಾಲನೆಗೆ ಮುಂದಾಗಿರುವ ಜಪಾನ್ ಸರ್ಕಾರದ ಕ್ರಮವನ್ನು ಖಂಡಿಸಿ ಈ ಪ್ರತಿಭಟನೆ ನಡೆಯಿತು. ಅಣು ಸ್ಥಾವರಕ್ಕೆ ಚಾಲನೆ ನೀಡುವುದನ್ನು ವಿರೋಧಿಸಿ ದೇಶದ ವಿವಿಧೆಡೆಯಿಂದ ಕುಟುಂಬ ಸಮೇತರಾಗಿ ಬಂದಿದ್ದ ಸಾವಿರಾರು ಜನರು ಬೃಹತ್ ರ್್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ಟೋಕಿಯೊ ಉದ್ಯಾನದಲ್ಲಿ ಸೇರಿದ್ದ ಪ್ರತಿಭಟನಾಕಾರರು, ಡೋಲು ಬಾರಿಸುತ್ತ, ಪರಮಾಣು ಘಟಕ ಬೇಡ ಎಂಬ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು. ಪರಮಾಣು ಘಟಕಗಳ ಮರುಸ್ಥಾಪನೆಗೆ ಮುಂದಾಗಬಾರದು ಎಂದು ಸರ್ಕಾರವವನ್ನು ಒತ್ತಾಯಿಸಿದ್ದಾರೆ.
ಆಸ್ಕರ್ ಪ್ರಶಸ್ತಿ ಪುರಸ್ಕೃತ ರಿಯೂಚಿ ಸಕಮೊಟೊ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಲೇಖಕ ಕೆಂಝಬುರೊ ಓಯಿ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 2011ರ ಮಾರ್ಚ್ 11ರಂದು ನಡೆದ ಈ ಘೋರ ಘಟನೆಯಿಂದಾದ ಅವಘಡವನ್ನು ಜಪಾನ್ ಜನತೆ ಇನ್ನೂ ಮರೆತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.