ದೇವನಹಳ್ಳಿ: ಪ್ರಕೃತಿ ಮಾನವನಿಗೆ ಎಲ್ಲಾ ರೀತಿಯಿಂದ ಸಹಕರಿಸಿ ಕೊಡುಗೆ ನೀಡುತ್ತಿದ್ದರೆ ಪ್ರತಿಯಾಗಿ ಮಾನವ ಅದಕ್ಕೆ ಏನು ಮಾಡಿದ್ದಾನೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ನಾಗೇಶ್ ತಿಳಿಸಿದರು.

ತಾಲ್ಲೂಕಿನ ಗಡಿಯಂಚಿನ ಚನ್ನಗಿರಿ ಬೆಟ್ಟದ ತಪ್ಪಲಲ್ಲಿ ದೇವನಹಳ್ಳಿ ಸರಸ್ವತಿ ಸಂಗೀತ ವಿದ್ಯಾಲಯದ ವತಿಯಿಂದ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರಸ್ವತಿ ಸಂಗೀತ ವಿದ್ಯಾಲಯ ಸಂಸ್ಥೆ ಅಧ್ಯಕ್ಷ ಕಲ್ಪನಾ ವಿಶ್ವನಾಥ ಮಾತನಾಡಿ, ಸಂಗೀತ ಹಾಗೂ ಪರಿಸರ ಒಂದೇ ನಾಣ್ಯದ ಎರಡು ಮುಖಗಳು. ಗಾಯಕನ ಮತ್ತು ಸಂಗೀತ ರಚನೆಕಾರರಿಗೆ ಪ್ರಕೃತಿ ಸ್ಫೂರ್ತಿಯ ತಾಣ. ಈ ಹಿನ್ನೆಲೆಯಲ್ಲಿ ಸಂಗೀತದೊಂದಿಗೆ ಪರಿಸರ ಪ್ರಜ್ಞೆ ಮೂಡಿಸಲಾಗುತ್ತಿದೆ ಎಂದರು.

ಕಾರ್ಯದರ್ಶಿ ಗೋಪಾಲ್ ಮಾತನಾಡಿ, ಸಂಸ್ಥೆಯು ಗಾಯನ ಸ್ಪರ್ಧೆ, ಚಾರಣ ಶಿಬಿರ, ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡು ಮಾನಸಿಕ, ದೈಹಿಕ ಸಾಮರ್ಥ್ಯದ ಜೊತೆಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸರಸ್ವತಿ ಸಂಗೀತ ವಿದ್ಯಾಲಯ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.