ಕೊಳ್ಳೇಗಾಲ: ಮಕ್ಕಳು ಪರಿಸರ ರಕ್ಷಣೆಗೆ ಮುಂದಾಗುವ ಮೂಲಕ ಹಿರಿಯರಿಗೆ ಮಾದರಿಯಾಗಬೇಕು ಎಂದು ತಹಶೀಲ್ದಾರ್ ಎಂ. ನಂಜುಂಡಯ್ಯ ತಿಳಿಸಿದರು.

ಸಂತ ಫ್ರಾನ್ಸಿಸ್ ಅಸ್ಸಿಸಿ ಸಭಾಂಗಣದಲ್ಲಿ ರೋಟರಿ ಸಂಸ್ಥೆ, ಅರಣ್ಯ ಇಲಾಖೆ, ಪ್ಲಾನೆಟ್ ಗ್ರೀನ್, ರೋಟ್ರ್ಯಾಕ್ಟ್ ಸಂಸ್ಥೆ, ಅಸ್ಸಿಸಿ ಪ್ರೌಢಶಾಲೆ ಚಿಗುರುವನ ಎಕೋ ಕ್ಲಬ್ ಸಹಯೋಗದೊಡನೆ ಪರಿಸರ ಜಾಗೃತಿ ಸಪ್ತಾಹ-2013ರ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಭಾಷಣ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಕೃತಿ ಮುನಿದರೆ ಉಂಟಾಗುವ ಅವಘಡ ನಮ್ಮ ಕಣ್ಮುಂದೆ ಇದೆ. ಜನರು ಪರಿಸರವನ್ನು ತಮ್ಮ ಸ್ವಾರ್ಥಕ್ಕಾಗಿ ಹಾಳು ಮಾಡದೆ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಲು ಎಚ್ಚರಿಕೆ ವಹಿಸಬೇಕಿದೆ ಎಂದು ಹೇಳಿದರು.

ಸಂತ ಫ್ರಾನ್ಸಿಸ್ ಅಸ್ಸಿಸಿ ಚರ್ಚ್ ಫಾದರ್ ಜೇವಿಯರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೋಟರಿ ಸಂಸ್ಥೆ ಅಧ್ಯಕ್ಷ ಬಿ.ಕೆ. ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ರೋಟರಿ ಪ್ರಿಸರ್ವ್ ಪ್ಲಾನೆಟ್ ಅರ್ಥ್ ಚೇರ್ಮನ್ ಟಿ.ಜಾನ್ಪೀಟರ್, ಮಾಜಿ ಅಧ್ಯಕ್ಷ ಕೆ. ಪುಟ್ಟರಸಶೆಟ್ಟಿ, ಯೂಥ್ ಸರ್ವೀಸ್ ಚೇರ್ಮನ್ ಜೋಸೆಫ್ ಅಲೆಕ್ಸಾಂಡರ್, ಮುಖ್ಯ ಶಿಕ್ಷಕಿ ರೋಸ್ ಕಮಲಕುಮಾರಿ, ಅರಣ್ಯ ಅಧಿಕಾರಿ ನಾಗರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.