ಪರ್ಯಾಯ: ಆರೋಗ್ಯ ಸೇವೆಗೆ ಒತ್ತು

ಉಡುಪಿ: ಪರ್ಯಾಯದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸುವುದರಿಂದ ಅವರಿಗೆ ತುರ್ತು ಆರೋಗ್ಯ ಸೇವೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದರು.
ನಾಡ ಹಬ್ಬದ ರೀತಿಯಲ್ಲಿ ಈ ಬಾರಿ ಪರ್ಯಾಯೋತ್ಸವ ಆಚರಿಸಲಾಗುತ್ತಿದೆ. ಆದ್ದರಿಂದ ಜನರಿಗೆ ಆರೋಗ್ಯ ಸೇವೆ ನೀಡುವುದು ಸಹ ಮುಖ್ಯವಾಗುತ್ತದೆ. ಮೂರು ಕ್ಲಿನಿಕ್ಗಳನ್ನು ಆರಂಭಿಸಲಾ ಗುವುದು. ವೆಂಟಿಲೇಟರ್ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಇರುವ ಅಂಬು ಲೆನ್ಸ್ ಹಾಗೂ 108 ಅಂಬುಲೆನ್ಸ್ಗಳನ್ನು ನೀಡಲಾಗುವುದು. ಮಂಗಳೂರಿನ ಎರ ಡು ಬೈಕ್ ಅಂಬುಲೆನ್ಸ್ಗಳನ್ನು ವಾರದ ಮಟ್ಟಿಗೆ ನಗರಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಆಸ್ಪತ್ರೆಯ ಸರ್ಜನ್ ಮಹೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ಹಾಗೂ ಸಿಬ್ಬಂದಿ ಜತೆಗೆ ಸಭೆ ನಡೆಸಿದ ಅವರು ಆಸ್ಪತ್ರೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದರು. ಆಸ್ಪತ್ರೆಯಲ್ಲಿ 18 ಮಂದಿ ವೈದ್ಯರು, 49 ಶುಶ್ರೂ ಷಕಿಯರು, 8 ಪ್ರಯೋಗಾಲಯ ತಂತ್ರಜ್ಞರು, 2ಎಕ್ಸರೇ ಸಿಬ್ಬಂದಿ ಹಾಗೂ ಡಿ ಗ್ರೂಪ್ ನೌಕರರು ಇದ್ದಾರೆ. ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಮೂಲಕ ಜನರಿಗೆ ಉತ್ತಮ ಸೇವೆ ನೀಡಿ ಎಂದು ತಾಕೀತು ಮಾಡಿದರು.
ರಕ್ತನಿಧಿ ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ ಸಂಬಳ ನೀಡುತ್ತಿಲ್ಲ ಹಾಗೂ ರಕ್ತ ಪರೀಕ್ಷೆ ವರದಿ ನೀಡಲು ಹಣ ಪಡೆಯುತ್ತಿರುವ ದೂರುಗಳು ಬಂದಿವೆ ಎಂದು ಶಾಸಕ ಪ್ರಮೋದ್ ಮಧ್ವರಾಜ್ ಆರೋಪಿಸಿದರು. ಈ ರೀತಿ ದೂರುಗಳು ಬರದಂತೆ ನೋಡಿಕೊಳ್ಳಿ ಎಂದರು.
ಆಸ್ಪತ್ರೆ ಹೊರ ಭಾಗದಲ್ಲಿ ಸ್ವಚ್ಛತೆ ಕಾಪಾಡದಿರುವ ಬಗ್ಗೆ, ಗೋಡೆಗೆ ಅಂಟಿದ್ದ ಒಣಗಿದ ಪಾಚಿಯನ್ನು ಸ್ವಚ್ಛಗೊಳಿಸದಿರುವ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಒಡೆದಿ ರುವ ಕಿಟಕಿ ಗಾಜುಗಳನ್ನು ಕೂಡಲೇ ಹಾಕಿಸಿ ಎಂದು ಅವರು ಸೂಚನೆ ನೀಡಿದರು. ಪ್ರತಿ ತಿಂಗಳು ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಎಂದು ತಿಳಿಸಿದರು.
ಸ್ವಚ್ಛತೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಪೌರಾಯುಕ್ತ ಡಿ. ಮಂಜುನಾಥಯ್ಯ ಮಾಹಿತಿ ನೀಡಿದರು. ನಗರಸಭೆ ಅಧ್ಯಕ್ಷ ಪಿ. ಯುವರಾಜ ಉಪಸ್ಥಿತರಿದ್ದರು.
*
ಕಚೇರಿ ಲಾಕ್...
ಶುಕ್ರವಾರ ಸಂಕ್ರಾಂತಿ ಹಬ್ಬವಾಗಿದ್ದ ಕಾರಣ ಸಚಿವ ಖಾದರ್ ಅವರು ದಿಢೀರ್ ಎಂದು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದಾಗ ಜಿಲ್ಲಾ ಸರ್ಜನ್ ಅಥವಾ ವೈದ್ಯರು ಇರಲಿಲ್ಲ. ಸರ್ಜನ್ ಅವರ ಕಚೇರಿ ಬಾಗಿಲನ್ನು ತಳ್ಳಿದಾಗ ಬೀಗ ಹಾಕಿದ್ದು ಅವರಿಗೆ ಗೊತ್ತಾಯಿತು.
ಆ ವೇಳೆಗಾಗಲೇ ಆಸ್ಪತ್ರೆ ಸಿಬ್ಬಂದಿ ಸರ್ಜನ್ ಮತ್ತು ವೈದ್ಯರಿಗೆ ಕರೆ ಮಾಡಿದ್ದರಿಂದ ಕೆಲ ಹೊತ್ತಿನ ನಂತರ ಎಲ್ಲರೂ ಬಂದರು. ಹಾಜರಾತಿ ಪುಸ್ತಕವನ್ನು ಖಾದರ್ ಪರಿಶೀಲಿಸಿದರು. ಹಬ್ಬವಾದ ಕಾರಣ ಎಲ್ಲರೂ ಅರ್ಧ ದಿನ ರಜೆ ತೆಗೆದುಕೊಂಡಿದ್ದಾರೆ ಎಂದು ಸಮಜಾಯಿಷಿ ನೀಡಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.