ಸಾಗರ: `ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರು ಕೃಷಿಯತ್ತ ಆಕರ್ಷಿತರಾಗುತ್ತಿಲ್ಲ. ಇದರಿಂದಾಗಿ ನಾವು ವೈಜ್ಞಾನಿಕವಾಗಿ ಎಷ್ಟೆ ಅಭಿವೃದ್ಧಿ ಹೊಂದಿದರೂ ಕೃಷಿ ಕ್ಷೇತ್ರಕ್ಕೆ ಯಾವುದೇ ಉಪಯೋಗ ಆಗುತ್ತಿಲ್ಲ. ಯುವಜನರು ಕೃಷಿ ಹಾಗೂ ತೋಟಗಾರಿಕೆಯತ್ತ ಆಕರ್ಷಿತರಾಗುವ ವಾತಾವರಣ ಸೃಷ್ಟಿಸಬೇಕಾಗಿದೆ' ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.

ಇಲ್ಲಿನ ಎಸ್.ಆರ್.ಬಾಪಟ್ ಕಲ್ಯಾಣ ಮಂಟಪದಲ್ಲಿ ಬುಧವಾರ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರದ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ `ಗೋಡಂಬಿ ಬೆಳೆಯ ಸುಧಾರಿತ ಉತ್ಪಾದನಾ ತಾಂತ್ರಿಕತೆ' ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

`ನಮಗೆ ಗೇರು ಬೆಳೆಸುವುದು ಹೊಸ ಸಂಸ್ಕೃತಿಯೇನಲ್ಲ. ಹಿಂದೆ ಗೇರು ಬೆಳೆಸಲು ಜಮೀನು ಪಡೆದು ಗೇರು ಹಾಕದೇ ಜಮೀನು ಬೇರೆ ಉದ್ದೇಶಕ್ಕೆ ಬಳಸಿಕೊಂಡ ಅನೇಕ ಉದಾಹರಣೆಗಳಿವೆ. ಅದರಲ್ಲಿಯೂ ಕರೂರು ಭಾರಂಗಿ ಹಾಗೂ ಭೀಮನಕೋಣೆ ಭಾಗಗಳಲ್ಲಿ ಗೇರು ಬೆಳೆಸಲು 1955-56ರ ಸುಮಾರಿಗೆ ಸಾಕಷ್ಟು ಜಮೀನು ಪಡೆದಿದ್ದರು. ಆದರೆ, ಜಮೀನು ಪಡೆದವರು ಉದ್ದೇಶಿತ ಕೆಲಸಕ್ಕೆ ಜಮೀನು ಬಳಕೆ ಮಾಡಿಕೊಳ್ಳಲಿಲ್ಲ. ಹೀಗಾಗಿ, ನಮ್ಮಲ್ಲಿ ಸಾಕಷ್ಟು ಗೋಮಾಳ ಉಳ್ಳವರ ಪಾಲಾಗಿದೆ. ಉದ್ದೇಶಿತ ಕಾರ್ಯಕ್ಕೆ ಲೋಪವಾಗದಂತೆ ಯೋಜನೆ ಜಾರಿಗೆ ತರುವ ಮುನ್ನ ಅರ್ಹರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸಾಗರ ತಾಲ್ಲೂಕು ಗೇರುಬೆಳೆ ಅಭಿವೃದ್ಧಿಪಡಿಸಲು ಸೂಕ್ತವಾಗಿದೆ. ಶರಾವತಿ ಹಿನ್ನೀರಿನ ಪ್ರದೇಶಗಳಾದ ಕರೂರು ಭಾರಂಗಿ ಹೋಬಳಿಯಲ್ಲಿ ಗೇರು ಅಭಿವೃದ್ಧಿಗೆ ಪೂರಕವಾದ ವಾತಾವರಣವಿದೆ. ಆಸಕ್ತರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹ ವಿಚಾರ ಸಂಕಿರಣಗಳ ಅಗತ್ಯ ಹೆಚ್ಚು ಇದೆ. ಸ್ವಂತ ಭೂಮಿ ಹೊಂದಿರುವವರು ಹಾಗೂ ಖಾಸಗಿ ಸರ್ಕಾರಿ ಸಹಭಾಗಿತ್ವದಲ್ಲಿ ಗೇರು ಬೆಳೆಸುವ ಯೋಜನೆಗೆ ಚಾಲನೆ ನೀಡಬೇಕು. ಗೇರು ಬೆಳೆಯತ್ತ ಉತ್ಸಾಹ ತೋರುವವರನ್ನು ಮಾತ್ರ ಈ ಯೋಜನೆಯಲ್ಲಿ ತೊಡಗಿಕೊಳ್ಳಬೇಕು ಎಂದರು.

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕ ಡಾ.ಎಂ.ಎಸ್.ವಿಘ್ನೇಶ್ ಮಾತನಾಡಿ, ಮಲೆನಾಡಿನಲ್ಲಿ ಅಡಿಕೆಗೆ ಪರ್ಯಾಯವಾಗಿ ಖುಷ್ಕಿಯಲ್ಲಿ ಗೇರು ಬೆಳೆ ಬೆಳೆಯುವ ಕುರಿತು ಚಿಂತನೆ ಮಾಡಲಾಗಿದೆ. ಏಕಬೆಳೆ ಸಂಸ್ಕೃತಿ ಅಪಾಯಕಾರಿ. ಕೃಷಿ ಕೂಲಿ ಕಾರ್ಮಿಕರ ಕೊರತೆಯಿರುವ ಗೇರು ಪರ್ಯಾಯ ಬೆಳೆಯಾಗಿ ಬೆಳೆದರೆ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಆರ್ಥಿಕ ಸದೃಢತೆ ಸಾಧ್ಯವಾಗುತ್ತದೆ ಎಂದರು.

ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ಪಿ.ಎಂ.ಸಾಲಿಮಠ ಅಧ್ಯಕ್ಷತೆ ವಹಿಸಿದ್ದರು. ನವುಲೆ ಕಷಿ ವಿಶ್ವವಿದ್ಯಾಲಯದ ಡೀನ್ ಡಾ.ಎಂ.ಮಂಜುನಾಥ್, ಡಾ.ಎಂ.ಎಸ್.ಗಣೇಶಬಾಬು, ಡಾ.ಎಂ.ಹನುಮಂತಪ್ಪ, ಡಾ.ವೈ.ವಿಶ್ವನಾಥ ಶೆಟ್ಟಿ, ಹಿರಿಯ ತೋಟಗಾರಿಕಾ ನಿರ್ದೇಶಕ ತಿಮ್ಮಪ್ಪ ಹಾಜರಿದ್ದರು.

ಶಬ್ಬೀರ್ ಪಟೇಲ್ ಪ್ರಾರ್ಥಿಸಿದರು. ವಿದ್ಯಾಶ್ರೀ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.